ಬ್ರೇಕಿಂಗ್ ನ್ಯೂಸ್
06-06-22 10:13 pm Mangalore Correspondent ಕ್ರೈಂ
ಮಂಗಳೂರು, ಜೂನ್ 6: ಬೈಕಂಪಾಡಿ ಬಳಿಯ ಮೀನಕಳಿಯದಲ್ಲಿ ರೌಡಿಶೀಟರ್ ಒಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಯುವಕನನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಜಾ ಅಲಿಯಾಸ್ ರಾಘವೇಂದ್ರ (29) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಮೀನಕಳಿಯ ಬೀಚ್ ಬಳಿಯಿದ್ದ ರಾಜಾನನ್ನು ಬೈಕಿನಲ್ಲಿ ಬಂದಿದ್ದ ಇಬ್ಬರು ಅಟ್ಟಿಸಿಕೊಂಡು ಹೋಗಿ ತಲವಾರಿನಲ್ಲಿ ಕಡಿದಿದ್ದಾರೆ. ಕುತ್ತಿಗೆ, ಭುಜ, ಮುಖಕ್ಕೆ ಗಂಭೀರ ಗಾಯಗೊಂಡು ನೆಲಕ್ಕೆ ಬಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳೀಯರ ಪ್ರಕಾರ, ರಾಘವೇಂದ್ರನ ಹಳೆಯ ಗೆಳೆಯರೇ ಈ ಕೃತ್ಯ ನಡೆಸಿದ್ದಾರಂತೆ. ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಕೊಲೆ ಕೃತ್ಯದ ವೈಷಮ್ಯಕ್ಕೆ ಪ್ರತೀಕಾರ
2019ರ ನವೆಂಬರ್ 29ರ ರಾತ್ರಿ 11 ಗಂಟೆಗೆ ಸಂದೇಶ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಸುರತ್ಕಲ್ ಪೇಟೆಯ ಜೀವನ್ ತಾರಾ ವೈನ್ ಶಾಪ್ ಬಳಿ ಕುಳಿತಿದ್ದಾಗ ಎರಡು ತಂಡಗಳ ನಡುವೆ ಜಗಳ ನಡೆದಿದ್ದು ಜೊತೆಗಿದ್ದ ಹಳೆಯ ಗೆಳೆಯರೇ ಸಂದೇಶನ್ನು ಕೊಲೆ ಮಾಡಿದ್ದರು. ಎರಡು ತಂಡಗಳ ಜಗಳದಿಂದಾಗಿ ಗ್ಯಾಂಗ್ ವಾರ್ ನಡೆದಿತ್ತು ಅನ್ನುವ ಮಾಹಿತಿಗಳಿದ್ದವು. ಆನಂತರ, ಅದೇ ರಾತ್ರಿ ಕೊಲೆ ನಡೆದಿದ್ದ ಜಾಗದಲ್ಲಿದ್ದ ರಾಜಾ ಅಲಿಯಾಸ್ ರಾಘವೇಂದ್ರ, ಗಣೇಶ್ ಮತ್ತು ಸೊಹೈಲ್ ಎಂಬ ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು.

ಸಂದೇಶ್ ಕೊಲೆ ಪ್ರಕರಣ ಸಂಬಂಧಿಸಿ ಒಂದು ತಿಂಗಳ ಬಳಿಕ ಮತ್ತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಮನು ಗುಡ್ಡೆಕೊಪ್ಲ(40), ಶರತ್ ಅಲಿಯಾಸ್ ಮುನ್ನ(35), ಪ್ರವೀಣ್ ಕುಂದರ್(42), ದೀಪಕ್ ರಾಜ್(33) ಮತ್ತು ಮಿಥುನ್ (40) ಎಂಬವರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಪ್ರಮುಖ ಆರೋಪಿ ಮನೋಜ್, ಕೊಲೆಯಾಗಿದ್ದ ಸಂದೇಶ್ ಪೂಜಾರಿಯ ಸ್ನೇಹಿತನೇ ಆಗಿದ್ದ. ಸಂದೇಶ್ ಮೇಲಿನ ಹಲ್ಲೆ ಸಂದರ್ಭ ಅಡ್ಡ ಬಂದಿದ್ದ ಆತನ ಇತರ ಇಬ್ಬರು ಸ್ನೇಹಿತರ ಮೇಲೂ ಹಲ್ಲೆ ನಡೆದಿತ್ತು. ಇದೀಗ ಸಂದೇಶ್ ಸ್ನೇಹಿತರೇ ರಾಜಾನ ಮೇಲೆ ತಲವಾರು ದಾಳಿ ನಡೆಸಿದ್ದು ಹಳೆ ವೈಷಮ್ಯ ತೀರಿಸಿಕೊಂಡಿದ್ದಾರೆ ಅನ್ನುವ ಮಾಹಿತಿಗಳಿವೆ.
Murder attempt on Rowdy sheeter at Panambur in Mangalore, hospitalized. Raja Raghavendra (29) (resident of Meenakali, Raghavendra alias Raju) is said to be critical after he was attacked by leathon weapons by bike borne assaliants. It may be recalled that on February 15, 2013 Sandeep Poojary (29), resident of Guddekopla in Suratkal had gone missing and later he was found dead near river side in Baikampady. His body was found in sack, with hands and legs tied. Raghavendra alias Raju was one of the prime accused in the murder case.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am