ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ; ಕೇರಳದ ಸಿಎಂ ಪಿಣರಾಯಿ, ಪತ್ನಿ, ಪುತ್ರಿ, ಆಪ್ತ ಅಧಿಕಾರಿಗಳು ಶಾಮೀಲು, ಅವರೆಲ್ಲಾ ಐಷಾರಾಮಿ ಇದ್ದಾರೆ, ನಾನು ಮಾತ್ರ ಬಲಿಪಶು ; ಸ್ವಪ್ನಾ ಸುರೇಶ್  

08-06-22 08:34 pm       HK News Desk   ಕ್ರೈಂ

ಕೇರಳದಲ್ಲಿ ಸಂಚಲನ ಎಬ್ಬಿಸಿದ್ದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇರ ಭಾಗಿಯಾಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ತಿರುವನಂತಪುರಂ, ಜೂನ್ 8: ಕೇರಳದಲ್ಲಿ ಸಂಚಲನ ಎಬ್ಬಿಸಿದ್ದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇರ ಭಾಗಿಯಾಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ಪ್ರಮುಖ ಆರೋಪಿಯೆಂದು ಗುರುತಿಸಲ್ಪಟ್ಟು ಬಂಧಿತಳಾಗಿದ್ದ ಸ್ವಪ್ನಾ ಸುರೇಶ್, ಈ ಬಗ್ಗೆ ಎರ್ನಾಕುಲಂ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ನಲ್ಲಿ ತನ್ನ ಹೇಳಿಕೆ ದಾಖಲು ಮಾಡಿದ್ದು ಮುಖ್ಯಮಂತ್ರಿ ಕುಟುಂಬ ಸೇರಿದಂತೆ ಹಿರಿಯ ಅಧಿಕಾರಿಗಳು, ಸಚಿವರ ಹೆಸರು ಉಲ್ಲೇಖ ಮಾಡಿದ್ದಾರೆ.

164 ಸಿಆರ್ ಪಿಸಿ ಅಡಿ ಸ್ವಪ್ನಾ ಸುರೇಶ್ ಕೋರ್ಟಿನಲ್ಲಿ ತನ್ನ ಹೇಳಿಕೆ ದಾಖಲಿಸಿದ್ದು ಆನಂತರ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಪಿಣರಾಯಿ ಅವರ ರಾಜಕೀಯ ಕಾರ್ಯದರ್ಶಿ ಶಿವಶಂಕರ್ ತನ್ನನ್ನು ಸಂಪರ್ಕಿಸಿ, ಬ್ಯಾಗ್ ಒಂದನ್ನು ನೀಡಿದ್ದರು. ಮುಖ್ಯಮಂತ್ರಿ ಪ್ರಮುಖ ಬ್ಯಾಗ್ ಒಂದನ್ನು ಮರೆತು ಹೋಗಿದ್ದು ತುರ್ತಾಗಿ ದುಬೈಗೆ ಮುಟ್ಟಿಸಬೇಕೆಂದು ತನ್ನಲ್ಲಿ ಹೇಳಿದ್ದರು. ಆಗ ಪಿಣರಾಯಿ ವಿಜಯನ್ ದುಬೈ ಪ್ರವಾಸದಲ್ಲಿದ್ದರು. ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ವೇಳೆ ಅದರಲ್ಲಿ ಕರೆನ್ಸಿ ನೋಟುಗಳು ಪತ್ತೆಯಾಗಿದ್ದವು ಎಂದು ಸ್ವಪ್ನಾ ಹೇಳಿದ್ದಾರೆ.

Examination of witness under section 164 of CrPc - iPleaders

ಪಿಣರಾಯಿ, ಪತ್ನಿ, ಪುತ್ರಿ, ಆಪ್ತ ಅಧಿಕಾರಿಗಳು ಭಾಗಿ

ಇದಲ್ಲದೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪತ್ನಿ ಕಮಲಾ, ಪುತ್ರಿ ರೀನಾ, ಕೆಲವು ಅಧಿಕಾರಿಗಳು, ಸಚಿವರು ಕೂಡ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದಿರುವ ಸ್ವಪ್ನಾ ಸುರೇಶ್, ನನಗೆ ಜೀವ ಬೆದರಿಕೆ ಇರುವುದರಿಂದ ಕೋರ್ಟಿನಲ್ಲಿ ನನ್ನ ಪೂರ್ತಿ ಹೇಳಿಕೆಯನ್ನು ದಾಖಲಿಸಿದ್ದೇನೆ. ಸಿಎಂ ಪಿಣರಾಯಿ ವಿಜಯನ್, ಅವರ ಪತ್ನಿ, ಮಗಳು, ಆಗಿನ ಮುಖ್ಯ ಕಾರ್ಯದರ್ಶಿ ಶಿವಶಂಕರ್, ಮುಖ್ಯಮಂತ್ರಿಯ ಗೃಹ ಕಾರ್ಯದರ್ಶಿ ರವೀಂದ್ರನ್, ಐಎಎಸ್ ಅಧಿಕಾರಿ ನಳಿನ್ ನೆಟ್ಟೊ, ಮಾಜಿ ಸಚಿವ ಕೆ.ಟಿ.ಜಲೀಲ್ ಯಾವ ರೀತಿ ಶಾಮೀಲು ಇದ್ದಾರೆ ಅನ್ನುವುದನ್ನು ತಿಳಿಸಿದ್ದೇನೆ ಎಂದಿದ್ದಾಳೆ.  

Gold smuggling case: 'Upright' Sivasankar's fall shocks IAS circles- The  New Indian Express

ಕೆಲವೊಮ್ಮೆ ಅತಿ ಭಾರದ ಬಿರಿಯಾನಿ ಪಾತ್ರೆಗಳನ್ನು ಕಾನ್ಸುಲೇಟ್ ಜನರಲ್ ಅವರ ಮನೆಯಿಂದ ಗೃಹ ಕಚೇರಿಗೆ ಕಳಿಸಿಕೊಡುತ್ತಿದ್ದರು. ಅದರಲ್ಲಿ ತುಂಬ ಭಾರದ ಲೋಹದ ವಸ್ತುಗಳಿದ್ದವು. ಜವಾಹರ್ ನಗರ್ ನಲ್ಲಿರುವ ಕಾನ್ಸುಲೇಟ್ ಜನರಲ್ ಅವರ ಮನೆಯಿಂದ ಕ್ಲಿಫ್ ಹೌಸ್ ನಲ್ಲಿರುವ ಸಿಎಂ ಕಚೇರಿಗೆ ಶಿವಶಂಕರ್ ಸೂಚನೆಯಂತೆ ಈ ಬ್ಯಾಗ್ ರವಾನೆಯಾಗುತ್ತಿದ್ದವು. ಇದನ್ನು ಕಾನ್ಸುಲೇಟ್ ಕಚೇರಿಗೆ ಸಂಬಂಧಪಟ್ಟ ವಾಹನಗಳಲ್ಲಿಯೇ ಕಳಿಸಿಕೊಡುತ್ತಿದ್ದರು. ಸಿಎಂ ಕಚೇರಿಗೆ ಪದೇ ಪದೇ ಈ ರೀತಿಯ ಭಾರದ ಬ್ಯಾಗ್ ಹೋಗಬೇಕಿದ್ದರೆ, ಅದು ಅವರಿಗೆ ತಿಳಿದಿರಲೇಬೇಕಲ್ಲಾ ಎಂದು ಸ್ವಪ್ನಾ ಸುರೇಶ್ ಪ್ರಶ್ನೆ ಮಾಡಿದ್ದಾಳೆ.

He exploited me, Swapna Suresh slams M Sivasankar, Swapna Suresh,  sivasankar, gold smuggling case accused

ಸೂಕ್ತ ತನಿಖೆಯಾಗಬೇಕೆಂಬ ದೃಷ್ಟಿಯಿಂದ ನಾನು ಹೇಳಿಕೆಯನ್ನು ದಾಖಲಿಸಿದ್ದೇನೆ. ನಾನು ಮಾತ್ರ ಇಲ್ಲಿ ಕೊರಗುತ್ತಿದ್ದೇನೆ. ಬಲಿಪಶು ಆಗಿದ್ದೇನೆ. ಮುಖ್ಯಮಂತ್ರಿ ಪತ್ನಿ, ಪುತ್ರಿ, ಇತರ ಅಧಿಕಾರಿಗಳೆಲ್ಲ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಎಲ್ಲರನ್ನೂ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸುತ್ತೇನೆ. ತನಿಖೆಯ ದೃಷ್ಟಿಯಿಂದ ಕೆಲವು ವಿಚಾರಗಳನ್ನು ಹೇಳಿದ್ದೇನೆ. ಎಲ್ಲವನ್ನೂ ಈಗಲೇ ಹೇಳುವುದು ಸರಿಯಲ್ಲ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾಳೆ ಸ್ವಪ್ನಾ ಸುರೇಶ್. ನಾನು ಈ ಹಿಂದೆ ಮತ್ತು ಈಗ ಏನು ಹೇಳುತ್ತಿದ್ದೇನೋ ಅದೆಲ್ಲವೂ ಸರಿಯಾಗಿಯೇ ಇದೆ. ಯಾರನ್ನೂ ಸುಮ್ಮನೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಹೆಸರು ಉಲ್ಲೇಖಿಸಲು ಬಯಸುತ್ತಿಲ್ಲ. ಯಾರು ಆರೋಪಿಗಳಿದ್ದಾರೆ, ಏನೇನು ಶಾಮೀಲಾತಿ ಇದೆ, ಅದು ತನಿಖೆಯಾಗಬೇಕು. ತಪ್ಪಿತಸ್ಥರು ಯಾರು ಅನ್ನುವುದನ್ನು ಕೋರ್ಟ್ ನಿರ್ಧರಿಸಲಿ ಎಂದು ಹೇಳಿದ್ದಾರೆ.

ಸಿಎಂ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ

Kerala Chief Minister Pinarayi Vijayan files nomination papers from  Dharmadam - The Economic Times

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸುಧಾಕರನ್, ಸಿಎಂ ಪಿಣರಾಯಿ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ರೀತಿ ಆರೋಪ ಹೊತ್ತುಕೊಂಡು ಅಧಿಕಾರದಲ್ಲಿ ಮುಂದುವರಿಯುವುದು ಪ್ರಜಾಪ್ರಭುತ್ವದ ಅಣಕ. ಮುಖ್ಯಮಂತ್ರಿಗೆ ಚೂರಾದರೂ ಆತ್ಮಗೌರವ ಇದ್ದರೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆ ಎದುರಿಸಲಿ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಪಿಣರಾಯಿ, ಈ ಹೇಳಿಕೆಯ ಹಿಂದೆ ರಾಜಕೀಯ ಅಜೆಂಡಾ ಇದೆ. ಸರಕಾರವನ್ನು ಅಸ್ಥಿರಗೊಳಿಸಲು ಆರೋಪ ಮಾಡುತ್ತಿದ್ದಾರೆ. ಜನರು ಈಗಾಗಲೇ ಈ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಇಂಟರ್ವಲ್ ಮುಗಿದ ಬಳಿಕ ಆರೋಪಿ ಮತ್ತೆ ಹಳೆಯದನ್ನು ಹೇಳುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಇಂಥ ಹೇಳಿಕೆಯಿಂದ ಸರಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

30 kg gold seized from baggage addressed to UAE consulate in Kerala | The  News Minute

ಕೇರಳದಲ್ಲಿ ಸರಕಾರದ ಆಯಕಟ್ಟಿನ ಅಧಿಕಾರಿಗಳು, ವಿದೇಶಿ ರಾಯಭಾರ ಕಚೇರಿಯ ಅಧಿಕಾರಿಗಳ ಶಾಮೀಲಾತಿಯೊಂದಿಗೆ ಭಾರೀ ಗೋಲ್ಡ್ ಸ್ಮಗ್ಲಿಂಗ್ ನಡೆಯುತ್ತಿರುವ ಬಗ್ಗೆ 2019ರಲ್ಲಿ ಬೆಳಕಿಗೆ ಬಂದಿತ್ತು. ಮೊದಲ ಬಾರಿಗೆ 30 ಕೇಜಿ ಚಿನ್ನದ ಗಟ್ಟಿ ಅಕ್ರಮ ಸಾಗಣೆ ಆಗುತ್ತಿರುವುದನ್ನು ತಿರುವನಂತಪುರದಲ್ಲಿ ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿದ್ದರು. 2019, ಜುಲೈ 5ರಂದು ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ನ್ನು ಬಂಧಿಸಲಾಗಿತ್ತು. 16 ತಿಂಗಳ ಕಾಲ ಜೈಲಿನಲ್ಲಿದ್ದ ಆಕೆ ಆನಂತರ ಜಾಮೀನಿನಲ್ಲಿ ಹೊರಬಂದಿದ್ದಳು. ಆನಂತರ ಮುಖ್ಯಮಂತ್ರಿ ಪಿಣರಾಯಿ ಆಪ್ತ ಅಧಿಕಾರಿಯಾಗಿದ್ದ ಶಿವಶಂಕರ್ ಅವರನ್ನೂ ತನಿಖಾಧಿಕಾರಿಗಳು ಬಂಧಿಸಿದ್ದರು. ಕೇಂದ್ರದ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

The opposition parties in Kerala have demanded the resignation of state chief minister Pinarayi Vijayan after Swapna Suresh, the prime accused in the gold smuggling case, made startling disclosure in a court that CM, his family members along with his key bureaucratic aides were involved in the scandal. Speaking to reporters on Tuesday (Jun 7) after recording her statement under Section 164 of the CrPC at the Ernakulam Judicial First Class Magistrate Court, Swapna Suresh said that large biryani pots containing .