ಬ್ರೇಕಿಂಗ್ ನ್ಯೂಸ್
09-06-22 07:07 pm HK News Desk ಕ್ರೈಂ
ಸುಳ್ಯ, ಜೂನ್ 9: ನಾಲ್ಕು ದಿನಗಳ ಹಿಂದೆ ಸುಳ್ಯದಲ್ಲಿ ಮರಳು ದಂಧೆಕೋರ ಮಹಮ್ಮದ್ ಸಾಯಿ ಎಂಬಾತನ ಕಾರಿಗೆ ಶೂಟೌಟ್ ನಡೆಸಿದ್ದ ಪ್ರಕರಣ ಸಂಬಂಧಿಸಿ ಸುಳ್ಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕುಶಾಲನಗರ ಗುಡ್ಡೆಹೊಸೂರು ನಿವಾಸಿ ಜಯನ್(38), ಮಡಿಕೇರಿ ನಿವಾಸಿ ವಿನೋದ್ ಆರ್.(34), ಮಡಿಕೇರಿ ರಾಣಿಬೆಟ್ಟು ನಿವಾಸಿ ಎಚ್.ಎಸ್. ಮನೋಜ್(25) ಬಂಧಿತರು. ಹಳೆ ವೈಷಮ್ಯದಿಂದಲೇ ಕೃತ್ಯ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.
ಜೂನ್ 5ರಂದು ರಾತ್ರಿ 10.30 ಗಂಟೆ ವೇಳೆಗೆ ಮಹಮ್ಮದ್, ಸುಳ್ಯದ ಜ್ಯೋತಿ ಸರ್ಕಲ್ ಬಳಿ ತನ್ನ ಕಾರು ನಿಲ್ಲಿಸಿ ಡೋರ್ ತೆರೆದು ನಿಂತುಕೊಂಡಿದ್ದ ವೇಳೆ ಆಗಂತುಕರು ಗುಂಡು ಹಾರಿಸಿದ್ದರು. ಅದೇ ಸಂದರ್ಭದಲ್ಲಿ ಇನ್ನೊಂದು ಕಾರು ರಸ್ತೆಯಲ್ಲಿ ಹಾದು ಬಂದಿದ್ದರಿಂದ ತನ್ನ ಕಾರಿನ ಡೋರ್ ತೆರೆದು ನಿಂತಿದ್ದ ಮಹಮ್ಮದ್, ಕೂಡಲೇ ಡೋರ್ ಒಳಗೆ ಎಳೆದುಕೊಂಡಿದ್ದ. ಅದರಿಂದಾಗಿ ಹಾರಿಬಂದಿದ್ದ ಗುಂಡು ಗುರಿತಪ್ಪಿ ಮಹಮ್ಮದ್ ದೇಹಕ್ಕೆ ಬೀಳುವ ಬದಲು ಕಾರಿನ ಡೋರಿಗೆ ಬಿದ್ದಿತ್ತು. ಇದರಿಂದ ಅಲ್ಪದರಲ್ಲಿ ಮಹಮ್ಮದ್ ಸಾವಿನಿಂದ ಪಾರಾಗಿದ್ದ. ಅಲ್ಲದೆ, ತನ್ನ ಕಾರಿನಲ್ಲಿ ಕುಳಿತು ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಪಾರಾಗಿ ಬಂದಿದ್ದ. ಈ ಬಗ್ಗೆ ಮಹಮ್ಮದ್ ಸಾಯಿ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಲ್ಲದೆ, ಕೆಎ 12 ರಿಜಿಸ್ಟರ್ ಹೊಂದಿದ್ದ ಸ್ಕಾರ್ಪಿಯೋ ವಾಹನದಲ್ಲಿ ಬಂದಿದ್ದ ನಾಲ್ವರು ಎಂದು ಆರೋಪಿಗಳ ಬಗ್ಗೆ ಸುಳಿವು ನೀಡಿದ್ದರಿಂದ ಪೊಲೀಸರು ಅದೇ ಆಧಾರದಲ್ಲಿ ತನಿಖೆ ಆರಂಭಿಸಿದ್ದರು. ಹಳೆ ವೈಷಮ್ಯದ ಸುಳಿವಿನ ಆಧಾರದಲ್ಲಿ ಮೂವರನ್ನು ಹೆಡೆಮುರಿ ಕಟ್ಟಿದ್ದಾರೆ.
ಸಂಪತ್ ಬಳಿಕ ಮರಳು ದಂಧೆ ಮೇಲೆ ನಿಯಂತ್ರಣ
2020ರ ಅಕ್ಟೋಬರ್ 8ರಂದು ಕೊಲೆಯಾಗಿದ್ದ ಸಂಪತ್ ಕುಮಾರ್ ಮತ್ತು ಮಹಮ್ಮದ್ ಸಾಯಿ ಜೊತೆಯಾಗಿಯೇ ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದವರು. ಸುಳ್ಯದಲ್ಲಿ ಮರಳು ಎತ್ತಿ ಅಕ್ರಮವಾಗಿ ಕೊಡಗಿಗೆ ಸಪ್ಲೈ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ಆದರೆ, ಸಂಪತ್ ಕುಮಾರ್ ಕೊಲೆಯಾಗುವುದಕ್ಕೂ ಒಂದು ತಿಂಗಳ ಮೊದಲೇ ಮಹಮ್ಮದ್ ಆತನಿಂದ ಅಂತರ ಕಾಯ್ದುಕೊಂಡಿದ್ದ. ಸಂಪತ್ ಕೊಲೆಗೆ ವಿರೋಧಿ ತಂಡ ಪ್ಲಾನ್ ಹಾಕಿದ್ದು ಗೊತ್ತಾಗಿದ್ದ ಕಾರಣಕ್ಕೋ ಏನೋ ದೂರ ನಿಂತಿದ್ದ. ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಹತ್ಯೆಗೆ ಪ್ರತೀಕಾರಕ್ಕಾಗಿ ಸಂಪತ್ ಕುಮಾರ್ ನನ್ನು ಕಲ್ಲುಗುಂಡಿಯ ಯುವಕರೇ ಸೇರಿಕೊಂಡು ಆನಂತರ ಭೀಕರವಾಗಿ ಕೊಂದು ಮುಗಿಸಿದ್ದು ತನಿಖೆಯಲ್ಲಿ ಬಯಲಾಗಿತ್ತು.
ಕೊಡಗು ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಸಂಪಾಜೆ ಪಂಚಾಯತ್ ಅಧ್ಯಕ್ಷರಾಗಿಯೂ ಹೆಸರು ಗಳಿಸಿದ್ದರು. ಆನಂತರ, ಮಡಿಕೇರಿ ವಿಧಾನಸಭೆ ಕ್ಷೇತ್ರಕ್ಕೂ ಆಕಾಂಕ್ಷಿ ಎನ್ನುವಷ್ಟರಲ್ಲಿ ಕಳಗಿಯನ್ನು 2019ರ ಮಾರ್ಚ್ 19ರಂದು ಅವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರಿಗೆ ಸಂಪಾಜೆ ಘಾಟಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿಸಿ ಕೊಲೆ ಮಾಡಲಾಗಿತ್ತು. ಸಂಪತ್ ಕುಮಾರ್ ಮತ್ತು ಸಹಚರರು ಸಂಪಾಜೆ ಗಡಿಯಲ್ಲಿ ರಿಕ್ರಿಯೇಶನ್ ಕ್ಲಬ್ ಮತ್ತು ಬಾರ್ ಓಪನ್ ಮಾಡುವುದಕ್ಕೆ ಬಾಲಚಂದ್ರ ಕಳಗಿ ಅಡ್ಡಗಾಲು ಹಾಕಿದ್ದ ಎಂಬ ಕಾರಣಕ್ಕಾಗಿ ಕೊಲೆ ಮಾಡಿದ್ದು ತನಿಖೆಯಲ್ಲಿ ಕಂಡುಬಂದಿತ್ತು. ಕಳಗಿಯನ್ನು ಕೊಂದ ವೈಷಮ್ಯದಲ್ಲಿ ಆಬಳಿಕ ಸಂಪತ್ ಕುಮಾರ್ ನನ್ನು ಹತ್ಯೆ ಮಾಡಲಾಗಿತ್ತು.
ಸಂಪತ್ ಕೊಲೆಗೆ ಮಾಹಿತಿ ನೀಡಿದ್ದ ಶಂಕೆ
ಆದರೆ, ಸಂಪತ್ ಕುಮಾರ್ ಕೊಲೆ ನಡೆಸೋದಕ್ಕೆ ಪೂರಕವಾಗಿ, ಆತ ಸುಳ್ಯದ ಶಾಂತಿನಗರದಲ್ಲಿ ಉಳಿದುಕೊಳ್ಳುತ್ತಿದ್ದ ಬಾಡಿಗೆ ಮನೆ ಮತ್ತು ಅಲ್ಲಿ ಒಬ್ಬಂಟಿಯಾಗಿ ಆಂಟಿಯೊಬ್ಬಳ ಜೊತೆಗಿರುತ್ತಿದ್ದ ಮಾಹಿತಿಯನ್ನು ಆರೋಪಿಗಳಿಗೆ ಮಹಮ್ಮದನೇ ಕೊಟ್ಟಿದ್ದ ಅನ್ನುವ ಶಂಕೆ ಇತ್ತು. ಸಂಪತ್ ಕೊಲೆಯ ನಂತರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಆರೋಪಿಗಳನ್ನೂ ಮಹಮ್ಮದ್ ನೋಡಲು ಹೋಗಿದ್ದನಂತೆ. ತನ್ನ ಸ್ನೇಹಿತ ಸಂಪತ್ ಕೊಲೆಗಾಗಿ ಜೊತೆಗಿದ್ದ ಮಹಮ್ಮದನೇ ಸಾಥ್ ನೀಡಿದ್ದಾನೆ ಅನ್ನೋದು ತಿಳಿಯುತ್ತಲೇ ಜಯನ್, ಮಹಮ್ಮದ್ ನನ್ನು ಮುಗಿಸಲು ಪ್ಲಾನ್ ಹಾಕಿದ್ದ. ಬಾಲಚಂದ್ರ ಕಳಗಿ ಹತ್ಯೆ ಪ್ರಕರಣದಲ್ಲಿ ಸಂಪತ್ ಕುಮಾರ್ ಜೊತೆ ಕೈಜೋಡಿಸಿದ್ದ ಜಯನ್ ಕುಶಾಲನಗರದ ಗುಡ್ಡೆಹೊಸೂರು ನಿವಾಸಿಯಾಗಿದ್ದರೂ, ಸಂಪಾಜೆ ಗಡಿಭಾಗದಲ್ಲಿ ತನ್ನದೇ ಪ್ರಭಾವ ಬೆಳೆಸಿಕೊಂಡಿದ್ದ ವ್ಯಕ್ತಿ.
ಸುಳ್ಯದ ಮರಳು ದಂಧೆಕೋರನ ಮುಗಿಸಲು ಪ್ಲಾನ್
ಸುಳ್ಯದಲ್ಲಿ ಸಂಪತ್ ಕುಮಾರ್ ಕೊಲೆಯ ಬಳಿಕ ಮಹಮ್ಮದ್ ಸಾಯಿ ಮರಳು ಮಾಫಿಯಾದಲ್ಲಿ ಹಿಡಿತ ಸಾಧಿಸಿದ್ದ. ಸುಳ್ಯ ಪೊಲೀಸರ ಜೊತೆಗೂ ಸಾಕಷ್ಟು ನಂಟು ಇಟ್ಟುಕೊಂಡಿದ್ದ. ಮೊನ್ನೆ ತನ್ನ ಮೇಲೆ ಶೂಟೌಟ್ ನಡೆಯುತ್ತಲೇ ಸುಳ್ಯ ಪೊಲೀಸರಿಗೆ ಒಂದಷ್ಟು ಕೊಟ್ಟು ಕೂಡಲೇ ಆರೋಪಿಗಳನ್ನು ಪತ್ತೆ ಮಾಡುವಂತೆ ಸೂಚನೆ ನೀಡಿದ್ದ ಅನ್ನುವ ಮಾಹಿತಿಗಳಿವೆ. ಮಹಮ್ಮದ್ ಸುಳ್ಯದಲ್ಲಿ ಮರಳು ಮಾಫಿಯಾದಲ್ಲಿ ಸಾಕಷ್ಟು ಕಾಸು ಮಾಡಿಕೊಂಡಿದ್ದನ್ನು ತಿಳಿದಿದ್ದ ಜಯನ್, ಆತ ಒಬ್ಬಂಟಿ ಸಿಗುವುದಕ್ಕಾಗಿ ಕಾಯುತ್ತಿದ್ದ. ಮೊನ್ನೆ ಜೂನ್ 5ರ ರಾತ್ರಿ ಜ್ಯೋತಿ ಸರ್ಕಲ್ ನಲ್ಲಿ ನಿಂತಿದ್ದ ಮಹಮ್ಮದ್ ಮೇಲೆ ಹತ್ತಿರದಿಂದಲೇ ನಾಡಕೋವಿಯಿಂದ ಗುಂಡು ಹಾರಿಸಿದ್ದಾರೆ. ನಾಡಕೋವಿ ಆಗಿದ್ದರಿಂದ ಇನ್ನೊಂದು ಬುಲೆಟ್ ಹಾರಿಸುವಷ್ಟರಲ್ಲಿ ಮಹಮ್ಮದ್ ಅಲ್ಲಿಂದ ಕಾಲ್ಕಿತ್ತಿದ್ದ. ನಾಡಕೋವಿಯ ಬುಲೆಟ್ ಯಾವುದೇ ಗಟ್ಟಿ ಜಾಗಕ್ಕೆ ಬಿದ್ದರೆ, ಅಷ್ಟೇ ವೇಗದಲ್ಲಿ ರಿಟರ್ನ್ ಹೊಡೆಯುತ್ತದೆ. ಮೊನ್ನೆಯೂ ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೋದ ಹಿಂದೆ ಅಡಗಿಕೊಂಡು ಗುರಿ ಇಟ್ಟಿದ್ದ ಗುಂಡು ಮಹಮ್ಮದನ ಕ್ರೆಟಾ ಕಾರಿಗೆ ಬಿದ್ದು ರಿವರ್ಸ್ ಹೊಡೆದಿತ್ತು. ಮರುಕ್ಷಣದಲ್ಲೇ ರಿವರ್ಸ್ ಹೊಡೆದು ಆರೋಪಿಗಳಲ್ಲಿ ಒಬ್ಬನ ಮುಖಕ್ಕೆ ತಾಗಿದೆ ಅನ್ನುವ ಸುದ್ದಿಯೂ ಸಿಕ್ಕಿದೆ.
ಮಹಮ್ಮದ್ ಸುಳ್ಯ ನಗರ ಹೊರವಲಯದ ಜಯ ನಗರ ಎಂಬಲ್ಲಿನ ನಿವಾಸಿಯಾಗಿದ್ದು ಸುಳ್ಯ ಪೇಟೆಯಲ್ಲೊಂದು ಬಾಡಿಗೆ ಮನೆಯನ್ನೂ ಹೊಂದಿದ್ದ. ಇದೀಗ ಹಳೆ ವೈಷಮ್ಯದಲ್ಲಿ ಮರಳು ಮಾಫಿಯಾ ದಂಧೆಕೋರನನ್ನು ಮುಗಿಸಲು ಹೊಂಚು ಹಾಕಿದ್ದು ಅಲ್ಪದರಲ್ಲಿ ತಪ್ಪಿಹೋಗಿದೆ. ಆದರೆ, ಕೊಡಗಿನ ಕುಳಗಳು ಒಮ್ಮೆ ಗುರಿ ತಪ್ಪಿದರೆ, ಮತ್ತೊಮ್ಮೆ ಗುರಿ ಹಾಕುವುದರಲ್ಲಿ ನಿಸ್ಸೀಮರು. ಹಾಗಾಗಿ, ಇಲ್ಲಿ ಹೆಣ ಉರುಳಿಸಲು ಮತ್ತೊಮ್ಮೆ ಪ್ಲಾನ್ ಹಾಕುವ ಸಾಧ್ಯತೆಯೇ ಹೆಚ್ಚು.
Sullia Shoot out on Mohammad Sai, Three from Madikeri arrested, car guns seized. Mohammad was a close associate of Sampath Sampath Kumar who was a Sampath was a prime accused in the Balachandra Kalagi murder case in Madikeri. Police personnel travelled to Hassan, Madikeri, Kushalnagar etc to nab the suspects, gathered information and arrested K Jayan (38), resident of Kushalnagar, Kodagu, Vinod R (34), a resident of Madikeri, Kodagu and H S Manoj (25), a resident of Madikeri, Kodagu district in this connection.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 04:25 pm
HK News Desk
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm