ಮದುವೆಯಾಗಲು ನಿರಾಕರಿಸಿದ ಮಹಿಳೆ ಮೇಲೆ ಆ್ಯಸಿಡ್ ಅಟ್ಯಾಕ್ ; 2 ತಿಂಗಳಲ್ಲಿ 3ನೇ ದಾಳಿ

10-06-22 08:21 pm       Bengalore Correspondent   ಕ್ರೈಂ

ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ವರದಿಯಾಗಿದ್ದು, ಮದುವೆಯಾಗಲು ನಿರಾಕರಿಸಿದ ಮಹಿಳೆ ಮೇಲೆ ವ್ಯಕ್ತಿ ಆ್ಯಸಿಡ್ ಎರಚಿದ್ದಾನೆ ಎನ್ನಲಾಗಿದೆ.

ಬೆಂಗಳೂರು, ಜೂ 10: ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ವರದಿಯಾಗಿದ್ದು, ಮದುವೆಯಾಗಲು ನಿರಾಕರಿಸಿದ ಮಹಿಳೆ ಮೇಲೆ ವ್ಯಕ್ತಿ ಆ್ಯಸಿಡ್ ಎರಚಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಸಾರಕ್ಕಿ ಬಳಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರ ಮೇಲೆ‌ ಆ್ಯಸಿಡ್ ಎರಚಿ ವ್ಯಕ್ತಿ ಪರಾರಿಯಾಗಿದ್ದಾನೆ.  ಪರಿಚಯಸ್ಥನೇ ಕೃತ್ಯ ಎಸಗಿರುವ ಶಂಕೆ ಇದೆ. ಮೂಲಗಳ ಪ್ರಕಾರ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವ್ಯಕ್ತಿ ಆಕೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಸ್ಥಳದಲ್ಲೇ ಆ್ಯಸಿಡ್ ಎರಚಿದ್ದಾನೆ ಎಂದು ತಿಳಿದುಬಂದಿದೆ.

ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 'ಮಹಿಳೆ ಜೊತೆ ವೈಮನಸ್ಸು ಹೊಂದಿದ್ದ ಅಹ್ಮದ್ ಎಂಬಾತ, ಆ್ಯಸಿಡ್ ಎರಚಿರುವ ಮಾಹಿತಿ ಇದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಇದ್ದಾರೆ. ಪ್ರತ್ಯಕ್ಷದರ್ಶಿಗಳು ಹಾಗೂ ಮಹಿಳೆ ಹೇಳಿಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು' ಎಂದು ಪೊಲೀಸರು ಹೇಳಿದರು.

What you need to know about inter-state arrest - iPleaders

ಆರೋಪಿ ಬಂಧನ;

ಇಲ್ಯಾಸ್ ನಗರದ ನಿವಾಸಿಯಾಗಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದ ಇಂದು ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Divorce Laws in Illinois: What to Know - SmartAsset

ಇಬ್ಬರೂ ವಿಚ್ಛೇದಿತರು;

ಇನ್ನು ಅ್ಯಸಿಡ್ ದಾಳಿಗೆ ತುತ್ತಾದ 32 ವರ್ಷದ ಮಹಿಳೆ ಮತ್ತು ದಾಳಿ ಮಾಡಿದ ವ್ಯಕ್ತಿ ಇಬ್ಬರೂ ವಿಚ್ಛೇದಿತರಾಗಿದ್ದು, ಮಹಿಳೆಗೆ ಮೂರು ಮಕ್ಕಳಿದ್ದರು. ಸಂತ್ರಸ್ಥೆ ಮತ್ತು ಆರೋಪಿ ಇಬ್ಬರು ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಮದುವೆಯಾಗಿ ಮಕ್ಕಳನ್ನೂ ಹೊಂದಿದ್ದು, ಎರಡನೇ ಹೆಂಡತಿಯನ್ನು ಹೊಂದಲು ಬಯಸಿದ್ದ. ಹೀಗಾಗಿ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಆದರೆ, ಸಂತ್ರಸ್ತೆ ತನಗೆ ಮಕ್ಕಳಿದ್ದು, ವಿಚ್ಛೇದನ ಪಡೆದಿಲ್ಲ ಎಂದು ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಅವರು ಹಲವು ಬಾರಿ ಜಗಳವಾಡಿದ್ದರು.

ಶುಕ್ರವಾರ ಬೆಳಿಗ್ಗೆ, ಅವರು ಕೆಲಸಕ್ಕೆ ಹೋಗುತ್ತಿರುವಾಗ ಒಬ್ಬರನ್ನೊಬ್ಬರು ಭೇಟಿಯಾಗಿದ್ದು, ಇದೇ ವೇಳೆ ಆರೋಪಿ ಮತ್ತೆ ಮದುವೆ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಆದರೆ ಮತ್ತೆ ಸಂತ್ರಸ್ತೆ ಅವನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದರಿಂದ ಕುಪಿತನಾದ ಆರೋಪಿ ಕೂಡಲೇ ಬಾಟಲಿ ತೆಗೆದು ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್‌ನಲ್ಲಿ ಆ್ಯಸಿಡ್ ಬೆರೆಸಿ ಆಕೆಯ ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ. ದಾಳಿಯಿಂದಾಗಿ ಮಹಿಳೆಯ ಬಲಗಣ್ಣಿಗೆ ಹಾನಿಯಾಗಿದ್ದು, ಸ್ವಲ್ಪ ಸಮಯದಿಂದ ದೃಷ್ಟಿ ಮಂದವಾಗಿದೆ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ಆಕೆಯನ್ನು ನೇತ್ರ ಚಿಕಿತ್ಸಾಲಯಕ್ಕೆ ಕರೆದೊಯ್ದರು, ಅಲ್ಲಿ ಕಣ್ಣಿನಲ್ಲಿರುವ ಆಸಿಡ್ ಅನ್ನು ಸ್ವಚ್ಛಗೊಳಿಸಿ ದೃಷ್ಟಿ ಪುನಃಸ್ಥಾಪಿಸಲಾಯಿತು. ಬಳಿಕ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

A jilted man allegedly threw acid on a woman for turning down a marriage proposal at Sarakki in the city on Friday morning, police said. The 32-year-old woman, a divorcee with three children, sustained injuries in her right eye and is under treatment at a private hospital, authorities said. The accused Ahmed, aged 36, has been arrested. The two were working in a factory producing incense products and had known each other for three years. According to police, Ahmed had been pestering the woman from his own community to marry him for many weeks. She, however, repeatedly spurned his pleas. On Friday, he threw acid on her at Sarakki road junction near JP Nagar.