ಬ್ರೇಕಿಂಗ್ ನ್ಯೂಸ್
10-06-22 08:52 pm Mangalore Correspondent ಕ್ರೈಂ
ಮಂಗಳೂರು, ಜೂನ್ 10: ಷೇರು ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಕೆಲವೇ ದಿನಗಳಲ್ಲಿ ಡಬಲ್ ಆಗುತ್ತದೆ, ಗರಿಷ್ಠ ಲಾಭ ಬರುತ್ತದೆಯೆಂದು ಹೇಳಿ ಮಹಿಳೆ ಮತ್ತು ಆಕೆಯ ಮಗಳನ್ನು ಯಾಮಾರಿಸಿ 45 ಲಕ್ಷದ 50 ಸಾವಿರ ರೂಪಾಯಿ ಪೀಕಿಸಿದ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರೀನ್ ವಿಲ್ ವಾಸ್, ಲಾವಣ್ಯ, ರೊನಾಲ್ಡ್ ಮತ್ತು ಮೆಲಿಸಾ ಪಿರೇರಾ ವಂಚನೆ ಎಸಗಿದ ಆರೋಪಿಗಳು ಎಂಬುದಾಗಿ ತಾಯಿ, ಮಗಳು ದೂರಿನಲ್ಲಿ ತಿಳಿಸಿದ್ದಾರೆ. ಮದುವೆ ಸಮಾರಂಭ ಒಂದರಲ್ಲಿ ಮೆಲಿಸಾ ಪಿರೇರಾ ಭೇಟಿಯಾಗಿದ್ದು, ಅದೇ ಸಂದರ್ಭದಲ್ಲಿ ಗ್ರೀನ್ ವಿಲ್ ವಾಸ್ ನನ್ನು ಪರಿಚಯ ಮಾಡಿಸಿದ್ದರು.
ಗ್ರೀನ್ ವಿಲ್ ಮುಂಬೈ ನಗರದ ಮೀರಾ ರೋಡ್ ನಲ್ಲಿ ಗೋಲ್ಡ್ ಹಿಲ್ ಸ್ಟಾಕ್ ಟ್ರೇಡಿಂಗ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾರೆ. ಅಲ್ಲದೆ, ಸದ್ಯದಲ್ಲೇ ಗೋಲ್ಡ್ ಹಿಲ್ ಸ್ಟಾಕ್ ಎಕ್ಸ್ ಚೇಂಜ್ ಕಚೇರಿ ಮಂಗಳೂರಿನಲ್ಲಿ ಆರಂಭವಾಗಲಿದ್ದು ಅದರ ಸಂಪೂರ್ಣ ಹೊಣೆಯನ್ನು ತಾನೇ ವಹಿಸುವುದಾಗಿ ತಿಳಿಸಿದ್ದಾರೆ.
ಆರೋಪಿಗಳು ಸೇರಿಕೊಂಡು ಗೋಲ್ಡ್ ಹಿಲ್ ಬಗ್ಗೆ ವಿವರಣೆ ನೀಡಿದ್ದು, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಕೇವಲ 37 ದಿನಗಳಲ್ಲಿ 30 ಶೇಕಡಾ ಹಣ ಬಡ್ಡಿ ರೂಪದಲ್ಲಿ ತಿರುಗಿ ಬರುತ್ತದೆ ಎಂದು ಹೇಳಿದ್ದಾರೆ. ಅದರಂತೆ, ಬಣ್ಣನೆಯ ಮಾತುಗಳನ್ನು ನಂಬಿದ ಮಹಿಳೆಯ ಪುತ್ರಿ ತಾನು ದುಡಿದು ಕೂಡಿಟ್ಟಿದ್ದ 45,50,000 ರೂಪಾಯಿ ಹಣವನ್ನು 2020ರಲ್ಲಿ ವಿವಿಧ ಸಂದರ್ಭಗಳಲ್ಲಿ ಗೋಲ್ಡ್ ಹಿಲ್ ಹೆಸರಲ್ಲಿ ಹೂಡಿಕೆ ಮಾಡಿದ್ದಾರೆ.
ಗ್ರೀನ್ ವಿಲ್ ವಾಸ್ ಸೂಚಿಸಿದ ಬ್ಯಾಂಕು ಖಾತೆಗಳಿಗೆ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆನಂತರ ಯಾವುದೇ ಬಡ್ಡಿ ಹಣವನ್ನು ನೀಡಲಿಲ್ಲ. ಬಡ್ಡಿ ಬದಲು ಅಸಲನ್ನಾದರೂ ಕೊಡಿ ಎಂದು ದುಂಬಾಲು ಬಿದ್ದರೂ, ಹಣವನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ. ಇವರ ಮೋಸದ ಜಾಲದಲ್ಲಿ ಆರೋಪಿಗಳು ಸಹಕಾರ ನೀಡಿದ್ದು, ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ದೂರು ದಾಖಲಿಸಿದ್ದರೂ, ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಿಲ್ಲ.
A 57-year-old woman has filed a police complaint against six persons for cheating her and her daughter of Rs 45,50,000 by asking them to invest in the name of Stock Trading Goldhil. The accused are Grenville Vas, Lavanya, Ronald and Melissa Pereira.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm