ಹಳೆ ದ್ವೇಷದಿಂದ ಟ್ಯಾಟೂ ರಾಜಾ ಕೊಲೆ ; ಸಂಚು ರೂಪಿಸಿದ್ದ ರೌಡಿಶೀಟರ್ ಮೈಕಲ್ ನವೀನ್ ಸೆರೆ, ಬಂಧಿತರ ಸಂಖ್ಯೆ 13ಕ್ಕೇರಿಕೆ  

15-06-22 10:43 pm       Mangalore Correspondent   ಕ್ರೈಂ

ಬೈಕಂಪಾಡಿಯ ಮೀನಕಳಿಯದಲ್ಲಿ ರಾಘವೇಂದ್ರ ಅಲಿಯಾಸ್ ರಾಜ ಎಂಬಾತನನ್ನು ಕೊಲೆಗೈದ ಪ್ರಕರಣದ ಪ್ರಮುಖ ರೂವಾರಿ, ಕೊಲೆ ಸಂಚು ರೂಪಿಸಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಮೈಕಲ್ ನವೀನ್ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಜೂನ್ 15:  ಬೈಕಂಪಾಡಿಯ ಮೀನಕಳಿಯದಲ್ಲಿ ರಾಘವೇಂದ್ರ ಅಲಿಯಾಸ್ ರಾಜ ಎಂಬಾತನನ್ನು ಕೊಲೆಗೈದ ಪ್ರಕರಣದ ಪ್ರಮುಖ ರೂವಾರಿ, ಕೊಲೆ ಸಂಚು ರೂಪಿಸಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಮೈಕಲ್ ನವೀನ್ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನವೀನ್ ಮೈಕಲ್ ಮೀನಕಳಿಯ ನಿವಾಸಿಯಾಗಿದ್ದು ಮೂರು ಕೊಲೆ ಪ್ರಕರಣ ಸೇರಿ ಎಂಟು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ರೌಡಿ ರಾಜಾ ಕೊಲೆಗೆ ಈತನೇ ಸಂಚು ರೂಪಿಸಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರು ಜೂನ್.12ರಂದು ಒಂಬತ್ತು ಮಂದಿಯನ್ನು ಬಂಧಿಸಿದ್ದರು. ಸಂದೀಪ್ ಯಾನೆ ಚೊಟ್ಟೆ ಸಂದೀಪ್(42), ಸಂದೀಪ್ ದೇವಾಡಿಗ(32), ಲಿಖಿತ್ ತಡಂಬೈಲ್(31), ದೀಕ್ಷಿತ್ ಯಾನೆ ಕಕ್ಕೆ ದೀಕ್ಷಿತ್ (23), ತುಷಾರ್ ಅಮೀನ್(30), ವಿನೋದ್ ಕುಮಾರ್ (32), ಲತೇಶ್ ಜೋಗಿ(27), ಸಂದೀಪ್ ಪುತ್ರನ್(36), ಅಕ್ಷಿತಾ ಮೂಡುಶೆಡ್ಡೆ (28) ಎಂಬವರನ್ನು ಬಂಧಿಸಿದ್ದರು.

ಅದಕ್ಕೂ ಹಿಂದೆ ಮೂರು ಮಂದಿ ಆರೋಪಿಗಳನ್ನು ಮೂಲ್ಕಿ ಬಳಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು. ಇತರ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮಾಡುತ್ತಿದ್ದಾಗ, ಪೊಲೀಸರ ಮೇಲೆ ಅಟ್ಯಾಕ್ ಮಾಡಿದರು ಅನ್ನುವ ಕಾರಣಕ್ಕೆ ಕಾಲಿಗೆ ಗುಂಡು ಹಾರಿಸಿ  ಬಂಧಿಸಲಾಗಿತ್ತು. ಹೀಗಾಗಿ ಪ್ರಕರಣದಲ್ಲಿ ಈಗ ಒಟ್ಟು 13 ಮಂದಿಯನ್ನು ಬಂಧಿಸಿದಂತಾಗಿದೆ.

ಪೊಲೀಸರಿಗೆ ಹಲ್ಲೆಗೈದು ಪರಾರಿ ಯತ್ನ ; ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧನ, ಪಣಂಬೂರು ಪಿಎಸ್ಐ ಸೇರಿ ಮೂವರು ಸಿಬಂದಿಗೆ ಗಾಯ

Mangaluru Panambur Raja Murder case, 13 arrested by city Police. The master mind behind the murder Michel Naveen(42) has been arrested among the 13 accused. Raja was murder on the day of his wifes birthday by bike borne miscrents.