ಬ್ರೇಕಿಂಗ್ ನ್ಯೂಸ್
16-06-22 03:39 pm Mangalore Correspondent ಕ್ರೈಂ
ಬಂಟ್ವಾಳ, ಜೂನ್ 16: ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೊಬ್ಬರ ಹೆಸರಲ್ಲಿ ನಕಲಿ ಸಹಿ ಮಾಡಿ ದೈಹಿಕ ಅರ್ಹತಾ ಪತ್ರ ನೀಡಿದ್ದ ಆರೋಪದಲ್ಲಿ ವಿಟ್ಲದ ಯುವಕನೊಬ್ಬ ಜೈಲುಪಾಲಾಗಿದ್ದಾನೆ.
ವಿಟ್ಲ ಸ್ಕೂಲ್ ರಸ್ತೆಯ ನಿವಾಸಿ ಶೇಖ್ ಫಿರೋಜ್ ಆದಂ(26) ವಿಟ್ಲ ಪೊಲೀಸರಿಗೆ ಸಿಕ್ಕಿಬಿದ್ದ ಜೈಲುಪಾಲಾದ ಯುವಕ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಡಾ.ವೇದಾವತಿ ಅವರು ನೀಡಿದ್ದ ದೂರಿನಂತೆ ವಿಟ್ಲ ಪೊಲೀಸರು ಕ್ರಮ ಜರುಗಿಸಿದ್ದಾರೆ. ತನ್ನ ಹೆಸರಲ್ಲಿ ಡುಪ್ಲಿಕೇಟ್ ಸೀಲ್ ಮತ್ತು ನಕಲಿ ಸಹಿಯನ್ನು ನೀಡಿದ್ದ ಪೋರ್ಜರಿ ದಾಖಲೆ ಪತ್ರದ ಬಗ್ಗೆ ವೈದ್ಯರು ದೂರು ನೀಡಿದ್ದರು.
ಇಸುಬು ಎಂಬ ವ್ಯಕ್ತಿಯೊಬ್ಬ ತನ್ನ ಡ್ರೈವಿಂಗ್ ಲೈಸನ್ಸ್ ನವೀಕರಣ ಮಾಡುವುದಕ್ಕಾಗಿ ವಿಟ್ಲದಲ್ಲಿರುವ ನೇಶನಲ್ ಡ್ರೈವಿಂಗ್ ಸ್ಕೂಲ್ ಗೆ ಅರ್ಜಿ ಸಲ್ಲಿಸಿದ್ದ. ಲೈಸನ್ಸ್ ನವೀಕರಣ ಮಾಡಲು ಫಿಟ್ನೆಸ್ ಸರ್ಟಿಫಿಕೇಟ್ ಬೇಕಾಗಿದ್ದರಿಂದ ಡ್ರೈವಿಂಗ್ ಸ್ಕೂಲ್ ನಲ್ಲಿ ಸಿಬಂದಿಯಾಗಿದ್ದ ಶೇಖ್ ಫಿರೋಜ್ ಆದಂ ತಾನೇ ಪೋರ್ಜರಿ ದಾಖಲೆಯನ್ನು ಸಿದ್ಧಪಡಿಸಿದ್ದ. ಡ್ರೈವಿಂಗ್ ಸ್ಕೂಲ್ ಕೇಂದ್ರವು ಆರೋಪಿ ಫಿರೋಜ್ ತಂದೆಗೆ ಸೇರಿದ್ದಾಗಿದ್ದು ಅಲ್ಲಿ ದಾಖಲೆ ಪತ್ರಗಳ ಕ್ರೋಡೀಕರಣ ಕೆಲಸವನ್ನು ಆತನೇ ಮಾಡುತ್ತಿದ್ದ.
ಆನಂತರ ಲೈಸನ್ಸ್ ನವೀಕರಣಕ್ಕಾಗಿ ಬಂಟ್ವಾಳ ಆರ್ ಟಿಓ ಕೇಂದ್ರಕ್ಕೆ ಅರ್ಜಿ ರವಾನೆಯಾಗಿತ್ತು. ಪರಿಶೀಲನೆ ನಡೆಸಿದ ಆರ್ ಟಿಓ ಇನ್ ಸ್ಪೆಕ್ಟರ್, ಫಿಟ್ನೆಸ್ ಸರ್ಟಿಫಿಕೇಟ್ ನಲ್ಲಿದ್ದ ಸಹಿಯ ಬಗ್ಗೆ ಸಂಶಯ ಬಂದು ಅದನ್ನು ವೈದ್ಯರ ಪರಿಶೀಲನೆಗೆ ಕಳಿಸಿದ್ದರು. ವೈದ್ಯರು ಚೆಕ್ ಮಾಡಿದಾಗ, ಅದು ತನ್ನದಲ್ಲ ಸಹಿ ಎಂದು ತಿಳಿದು ಸಹಿ ಪೋರ್ಜರಿಯಾಗಿರುವ ಸಂಶಯದಲ್ಲಿ ವಿಟ್ಲ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಇಸುಬುವನ್ನು ಕರೆಸಿ ಮಾಹಿತಿ ಪಡೆದಿದ್ದಾರೆ. ತಾನು ಡ್ರೈವಿಂಗ್ ಲೈಸನ್ಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಬಗ್ಗೆ ಮಾಹಿತಿ ನೀಡಿದ್ದ. ಡ್ರೈವಿಂಗ್ ಸ್ಕೂಲ್ ನಲ್ಲಿ ಸಿಬಂದಿಯನ್ನು ತನಿಖೆಗೆ ಒಳಪಡಿಸಿದಾಗ, ಆರೋಪಿ ಫಿರೋಜ್ ಆದಂ ಸಿಕ್ಕಿಬಿದ್ದಿದ್ದು ಆತನನ್ನು ಕೋರ್ಟಿಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
A person was arrested for forging the signature and stamp of a government doctor and attempting to cheat the authorities. The incident was reported under the Vittal police station. The arrested accused is identified as Sheik Firoz Adam (26), a resident of Vittal school road. The have arrested the accused acting on a complaint filed by Dr Vedavathi of Vittal community health center.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm