ಬ್ರೇಕಿಂಗ್ ನ್ಯೂಸ್
22-06-22 11:56 am Bengalore Correspondent ಕ್ರೈಂ
ಬೆಂಗಳೂರು, ಜೂನ್ 21: ಸಹೋದ್ಯೋಗಿ ಕಾನ್ಸ್ಟೇಬಲ್ ಪತ್ನಿಯನ್ನ ಬ್ಲಾಕ್ಮೇಲ್ ಮಾಡಿ ಸತತವಾಗಿ ಅತ್ಯಾಚಾರ ನಡೆಸಿದ್ದ ಆರೋಪದಲ್ಲಿ ಎಂಟು ಮಂದಿ ಸಿಐಎಸ್ಎಫ್ ಪೊಲೀಸ್ ಸಿಬಂದಿಯ ವಜಾ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಪ್ರಕರಣದಲ್ಲಿ ಎಂಟು ಮಂದಿ ಆರೋಪಿತ ಕಾನ್ಸ್ಟೇಬಲ್ ಗಳಿಗೆ ವಜಾ ಶಿಕ್ಷೆ ವಿಧಿಸಲಾಗಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ವಜಾ ಆದೇಶವನ್ನು ಎತ್ತಿಹಿಡಿದ ಕೋರ್ಟ್, ಛೀಮಾರಿ ಹಾಕುತ್ತಾ ನೈತಿಕತೆಯ ಪಾಠವನ್ನೂ ಬೋಧಿಸಿದೆ.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಗೆ ಸೇರಿದ 8 ಮಂದಿ ಕಾನ್ಸ್ ಟೇಬಲ್ ಗಳು ಸಹೋದ್ಯೋಗಿ ಕಾನ್ಸ್ ಟೇಬಲ್ ಒಬ್ಬರ ಪತ್ನಿಯ ಮೇಲೆ ಅತ್ಯಾಚಾರವೆಸಗಿ, ಬ್ಲಾಕ್ ಮೇಲ್ ಮಾಡಿದ್ದ ಘಟನೆ ನಡೆದಿತ್ತು. 2015 ರಲ್ಲಿ ಕಾನ್ಸ್ ಟೇಬಲ್ ಪತ್ನಿಯ ದೂರಿನ ಆಧಾರದಲ್ಲಿ ವಿಚಾರಣೆ ನಡೆದಿತ್ತು. ಪರಿಚಯ ಬೆಳೆಸಿ ಬ್ಲಾಕ್ ಮೇಲ್ ಮಾಡಿ, ಅತ್ಯಾಚಾರವೆಸಗಿದ್ದಾಗಿ ದೂರು ನೀಡಲಾಗಿತ್ತು. ಮತ್ತೊಬ್ಬರ ಜೊತೆ ಸಂಬಂಧ ಹೊಂದಿರುವುದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಎಂಟೂ ಮಂದಿ ಆಗಿಂದಾಗ್ಗೆ ಕುಕೃತ್ಯವೆಸಗಿದ್ದರು. ತನಿಖೆಯ ಸಂದರ್ಭದಲ್ಲಿ ಆರೋಪ ಸಾಬೀತಾಗಿತ್ತು.
ಸಿಐಎಸ್ಎಫ್ ಶಿಸ್ತು ಮತ್ತು ನೈತಿಕತೆಗೆ ಪ್ರಾಮುಖ್ಯತೆ ನೀಡುವ ಸಂಸ್ಥೆಯಾಗಿದ್ದು, ಅಲ್ಲಿನ ಸಿಬ್ಬಂದಿಗಳಿಂದ ನಡೆದಿರುವ ದುಷ್ಕೃತ್ಯವು ಕ್ಷಮಾರ್ಹವಲ್ಲ. ಪತಿ ಬೇರೆಡೆ ಇದ್ದಾಗ ಇಂತಹ ದುಷ್ಕೃತ್ಯ ನಡೆದಿರುವುದು ಪತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪತ್ನಿಯರನ್ನು ಬಿಟ್ಟು ತೆರಳುವ ಸಿಬ್ಬಂದಿಗೆ ಅಭದ್ರ ಭಾವ ಮೂಡಿಸುತ್ತದೆ ಎಂದು ಸಿಐಎಸ್ಎಫ್ ಸಂಸ್ಥೆಯ ಶಿಸ್ತು ಪ್ರಾಧಿಕಾರವು ಎಂಟು ಮಂದಿ ಆರೋಪಿ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿತ್ತು.
ಈ ಮಧ್ಯೆ, ಕ್ರಿಮಿನಲ್ ಪ್ರಕರಣದಲ್ಲಿ ಎಲ್ಲ ಎಂಟೂ ಮಂದಿ ಖುಲಾಸೆಗೊಂಡಿದ್ದರು. ಆದರೆ ತಮ್ಮ ವಜಾ ಆದೇಶ ಪ್ರಶ್ನಿಸಿ, ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂತಹ ಘಟನೆಗಳು ಕಾನ್ಸ್ ಟೇಬಲ್ ಮನೋಸ್ಥೈರ್ಯ ಕುಗ್ಗಿಸುತ್ತವೆ. ಹೀಗಾಗಿ ಇಲಾಖಾ ವಿಚಾರಣೆ ನಡೆಸದೆಯೂ ವಜಾ ಮಾಡಿರುವುದು ಸೂಕ್ತವಾಗಿದೆ ಎಂದು ನ್ಯಾ. ಅಲೋಕ್ ಆರಾಧೆ, ನ್ಯಾ.ಜೆ.ಎಂ. ಖಾಜಿ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದ್ದು ಆರೋಪಿಗಳಿಗೆ ಚಾಟಿ ಬೀಸಿದೆ.
Bengaluru: Karnataka High Court has upheld the order of dismissal of eight CISF constables from service in connection with alleged gang rape and blackmail case.The accused had allegedly gang-raped and blackmailed their colleague’s wife, which led to their dismissal. Later they approached the High Court against the dismissal order by the CISF’s Disciplinary Authority.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm