ಸಿಸ್ಟರ್ ಅಭಯಾ ಕೊಲೆ ಪ್ರಕರಣ ; ಜೀವಾವಧಿ ಶಿಕ್ಷೆಯಾಗಿದ್ದ ಪಾದ್ರಿ, ಸಿಸ್ಟರ್ ಗೆ ಬಿಡುಗಡೆ ಭಾಗ್ಯ, ಶಿಕ್ಷೆ ಅಮಾನತು ಪಡಿಸಿದ ಹೈಕೋರ್ಟ್, ಸುದೀರ್ಘ 30 ವರ್ಷಗಳ ಪ್ರಕರಣಕ್ಕೆ ಮರುಜೀವ !

23-06-22 01:21 pm       HK News Desk   ಕ್ರೈಂ

ಕೇರಳದಲ್ಲಿ ಸಂಚಲನ ಎಬ್ಬಿಸಿದ್ದ ಸಿಸ್ಟರ್ ಅಭಯಾ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಅವರ ಶಿಕ್ಷೆಯನ್ನು ಹೈಕೋರ್ಟ್ ಅಮಾನತು ಮಾಡಿದ್ದು, ಇಬ್ಬರಿಗೂ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

ಕೊಚ್ಚಿ, ಜೂನ್ 23: ಕೇರಳದಲ್ಲಿ ಸಂಚಲನ ಎಬ್ಬಿಸಿದ್ದ ಸಿಸ್ಟರ್ ಅಭಯಾ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಅವರ ಶಿಕ್ಷೆಯನ್ನು ಹೈಕೋರ್ಟ್ ಅಮಾನತು ಮಾಡಿದ್ದು, ಇಬ್ಬರಿಗೂ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

ನ್ಯಾಯಾಧೀಶರಾದ ಕೆ.ವಿನೋದ್ ಚಂದ್ರನ್ ಮತ್ತು ಸಿ.ಜಯಚಂದ್ರನ್ ಅವರಿದ್ದ ವಿಭಾಗೀಯ ಪೀಠ, ಸಿಬಿಐ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಅಮಾನತುಪಡಿಸಿ ಮಹತ್ವದ ತೀರ್ಪು ನೀಡಿದೆ. ಆರೋಪಿತರು ಭದ್ರತೆಗಾಗಿ 5 ಲಕ್ಷದ ಬಾಂಡ್ ನೀಡಬೇಕು. ಅಲ್ಲದೆ, ಪ್ರತೀ ಶನಿವಾರ ಆರು ತಿಂಗಳ ವರೆಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಯಾವುದೇ ಅಪರಾಧಿಕ ಕೃತ್ಯದಲ್ಲಿ ಪಾಲ್ಗೊಳ್ಳಬಾರದು. ಕೋರ್ಟ್ ಅನುಮತಿಯಿಲ್ಲದೆ, ರಾಜ್ಯ ಬಿಟ್ಟು ಹೊರಗೆ ತೆರಳಬಾರದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Explainer: What is the Sister Abhaya case and why it took 28 years for a  verdict | The News Minute

1992 ಮಾರ್ಚ್ 27ರಂದು ಕೊಟ್ಟಾಯಂ ಜಿಲ್ಲೆಯ ಸೈಂಟ್ ಪೀಯೂಸ್ ಎಕ್ಸ್ ಕಾನ್ವೆಂಟಿನಲ್ಲಿದ್ದ 28 ವರ್ಷದ ಸಿಸ್ಟರ್ ಅಭಯಾಳನ್ನು ಅಲ್ಲಿನ ಪಾದ್ರಿಯೇ ಅತ್ಯಾಚಾರಗೈದು ಬಾವಿಗೆ ದೂಡಿ ಕೊಲೆ ಮಾಡಿದ್ದರು ಅನ್ನುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಸಿಸ್ಟರ್ ಸೆಫಿ, ಫಾದರ್ ಕೊಟ್ಟೂರು ಅವರಿಗೆ ಸಾಥ್ ನೀಡಿದ್ದರು ಅನ್ನೋದು ಸಿಬಿಐ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಸುದೀರ್ಘ 30 ವರ್ಷಗಳ ತನಿಖೆಯ ಬಳಿಕ 2020ರಲ್ಲಿ ಕೊಟ್ಟಾಯಂ ವಿಶೇಷ ಸಿಬಿಐ ನ್ಯಾಯಾಲಯ ಇಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಆದರೆ, ಕೆಥೋಲಿಕ್ ಚರ್ಚ್ ಪರವಾಗಿ ಹಣ ಬಲದ ಕಾರಣ ಪ್ರಬಲ ವಾದ ಮಂಡನೆಯು ಶಿಕ್ಷೆಯನ್ನು ಅಮಾನತು ಮಾಡುವಂತಾಗಿದೆ.  

ಆರೋಪಿ ಸಿಸ್ಟರ್ ಸೆಫಿ ಪರವಾಗಿ ಕೋರ್ಟಿಗೆ ಹಾಜರಾಗಿದ್ದ ಹಿರಿಯ ವಕೀಲ ವಿಜಯಭಾನು, ಸಿಸ್ಟರ್ ಸೆಫಿ ಈ ಹಿಂದೆಯೂ ತನಿಖೆಯ ಸಂದರ್ಭದಲ್ಲಿ ಜಾಮೀನು ಪಡೆದು ಹೊರಗಿದ್ದರು. ಆದರೆ ಯಾವುದೇ ರೀತಿಯಲ್ಲಿ ಸಾಕ್ಷ್ಯ ನಾಶ ಅಥವಾ ಇನ್ನಾವುದೇ ಅಪರಾಧಿಕ ಕೃತ್ಯದಲ್ಲ ತೊಡಗಿಸಿಲ್ಲ. 2008ರಲ್ಲಿ ಅರೆಸ್ಟ್ ಆಗಿದ್ದ ಬಳಿಕ 2009, ಜನವರಿಯಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. 2020ರ ಡಿಸೆಂಬರ್ 22ರಂದು ಜೀವಾವಧಿ ಶಿಕ್ಷೆಯಾಗಿ ಈತನಕ ಜೈಲಿನಲ್ಲಿದ್ದಾರೆ. ಆದರೆ, ಈ ಪ್ರಕರಣದಲ್ಲಿ ತನಿಖಾಧಿಕಾರಿ ಕಡೆಯಿಂದ ಕೆಲವು ತಪ್ಪುಗಳಾಗಿದ್ದು, ಇವರೇ ಆರೋಪಿ ಅನ್ನುವುದಕ್ಕೆ ನೇರ ಸಾಕ್ಷ್ಯಗಳಿಲ್ಲ. ತಪ್ಪುಗಳಾಗಿರುವುದನ್ನು ಸಾಬೀತು ಪಡಿಸಲು ಕೋರ್ಟ್ ಅವಕಾಶ ಕೊಡಬೇಕು. ಹಾಗಾಗಿ ಅವರ ಮೇಲಿನ ಶಿಕ್ಷೆಯನ್ನು ತಾತ್ಕಾಲಿಕ ಅಮಾನತು ಮಾಡಬೇಕು ಎಂದು ಮನವಿ ಮಾಡಿದ್ದರು.

Man appears before Kerala High Court virtual hearing while  shaving/brushing- The New Indian Express

ಇದೇ ವೇಳೆ, ಫಾದರ್ ಕೊಟ್ಟೂರು ಪರವಾಗಿ ಕೋರ್ಟಿಗೆ ಹಾಜರಾಗಿದ್ದ ಹಿರಿಯ ವಕೀಲ ಬಿ.ರಾಮನ್ ಪಿಳ್ಳೆ, ಪ್ರಕರಣದಲ್ಲಿ ಫಾದರ್ ಕೊಟ್ಟೂರು ಅವರು ಕೃತ್ಯದಲ್ಲಿ ನೇರ ಶಾಮೀಲಾಗಿದ್ದಾರೆ ಅನ್ನುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಒಟ್ಟು ಆರೋಪದ ಕುರಿತು ಒದಗಿಸಲಾದ ಸಾಕ್ಷ್ಯ ಪರಿಗಣಿಸಿ ಇವರಿಗೆ ಶಿಕ್ಷೆ ನೀಡಲಾಗಿದೆ. ಸಿಬಿಐ ಕೋರ್ಟ್ ಪ್ರಮುಖವಾಗಿ ಇದು ಉದ್ದೇಶಪೂರ್ವಕ ನಡೆಸಿದ ಕೊಲೆಯೇ ಅಥವಾ ಅಲ್ಲವೇ ಅನ್ನುವುದನ್ನು ಸಾಬೀತು ಪಡಿಸಿಲ್ಲ. ಇದಲ್ಲದೆ, ಸಿಸ್ಟರ್ ಅಭಯಾ ದೇಹದಲ್ಲಿ ಗಾಯಗಳ ಗುರುತು ಇದ್ದುದು ಆರೋಪಿಗಳಿಂದ ಆಗಿದೆಯೇ ಅಥವಾ ಒಟ್ಟು ಅಪರಾಧಿಕ ಕೃತ್ಯದಲ್ಲಿ ನಡೆದಿದೆಯೇ ಅನ್ನುವುದನ್ನು ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಅದರ ಬಗ್ಗೆ ಯಾವುದೇ ನೇರ ಸಾಕ್ಷ್ಯವೂ ಇಲ್ಲ. ಹೀಗಾಗಿ ಅವರ ಶಿಕ್ಷೆಯನ್ನು ಅಮಾನತು ಗೊಳಿಸಬೇಕು ಎಂದು ವಾದಿಸಿದ್ದರು.

ಸಿಬಿಐ ಕೋರ್ಟಿನಲ್ಲಿ ಸುದೀರ್ಘ ವಿಚಾರಣೆ ಬಳಿಕ ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದರೂ, ಇಬ್ಬರ ಪರವಾಗಿ ತಾಂತ್ರಿಕ ಸಾಕ್ಷ್ಯಗಳ ಕೊರತೆಯನ್ನು ಮುಂದಿಟ್ಟು ಇಬ್ಬರು ಹಿರಿಯ ಕ್ರಿಮಿನಲ್ ವಕೀಲರು ವಾದ ಮಂಡಿಸಿದ್ದರಿಂದ ಹೈಕೋರ್ಟ್ ಶಿಕ್ಷೆಯನ್ನು ಅಮಾನತು ಪಡಿಸಿದ್ದು, ಬಿಡುಗಡೆಯ ಭಾಗ್ಯ ನೀಡಿದೆ. ಸುದೀರ್ಘ 30 ವರ್ಷಗಳಿಂದ ಸಿಸ್ಟರ್ ಅಭಯಾ ಪ್ರಕರಣ ಕೇರಳದಲ್ಲಿ ಸದ್ದು ಮಾಡಿದ್ದು, ಸಿಬಿಐ ಅಧಿಕಾರಿಗಳು ಎರಡೆರಡು ಬಾರಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮಾಡಿದ್ದರು. ಸಿಸ್ಟರ್ ಅಭಯಾಳನ್ನು ತಡರಾತ್ರಿಯಲ್ಲಿ ಬಾವಿಗೆ ದೂಡಿ ಕೊಲೆಗೈದಿದ್ದನ್ನು ಆ ಪ್ರದೇಶಕ್ಕೆ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ನೋಡಿದ್ದು, ಆತನ ಪ್ರತ್ಯಕ್ಷ ಸಾಕ್ಷ್ಯದ ಹೇಳಿಕೆ ಪರಿಗಣಿಸಿ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.

The Kerala High Court on Thursday suspended the execution of the sentence of life imprisonment and granted bail to Fr Thomas Kottoor and Sister Sephy, two convicts in the Sister Abhaya murder case.