ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತಳಿಗೆ ಜ್ಯೂಸ್ ಕುಡಿಸಿ ಅತ್ಯಾಚಾರ, ಗರ್ಭಿಣಿ ; ಅಂಗಡಿ ಮಾಲಕನಿಗೆ ಹತ್ತು ವರ್ಷ ಶಿಕ್ಷೆ  

23-06-22 04:57 pm       Mangalore Correspondent   ಕ್ರೈಂ

ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿಗೆ ಜ್ಯೂಸ್ ನಲ್ಲಿ ಮತ್ತು ಬರಿಸುವ ಔಷಧಿ ಕೊಟ್ಟು ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯಾಗುವಂತೆ ಮಾಡಿದ್ದ ಪ್ರಕರಣದಲ್ಲಿ ಬಟ್ಟೆ ಅಂಗಡಿ ಮಾಲಕನಿಗೆ ಮಂಗಳೂರಿನ ಸೆಷನ್ಸ್ ಮತ್ತು ಪೋಕ್ಸೋ ತ್ವರಿತಗತಿ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ನೀಡಿದೆ.

ಮಂಗಳೂರು, ಜೂನ್ 23: ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿಗೆ ಜ್ಯೂಸ್ ನಲ್ಲಿ ಮತ್ತು ಬರಿಸುವ ಔಷಧಿ ಕೊಟ್ಟು ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯಾಗುವಂತೆ ಮಾಡಿದ್ದ ಪ್ರಕರಣದಲ್ಲಿ ಬಟ್ಟೆ ಅಂಗಡಿ ಮಾಲಕನಿಗೆ ಮಂಗಳೂರಿನ ಸೆಷನ್ಸ್ ಮತ್ತು ಪೋಕ್ಸೋ ತ್ವರಿತಗತಿ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ನೀಡಿದೆ.

ಕಂದಾವರ ನಿವಾಸಿ ಅಬ್ದುಲ್ ಲತೀಫ್(42) ಶಿಕ್ಷೆಗೊಳಗಾದ ವ್ಯಕ್ತಿ. ಅಬ್ದುಲ್ ಲತೀಫ್ ಕೈಕಂಬದಲ್ಲಿ ಫಾತಿಮಾ ಬಟ್ಟೆ ಅಂಗಡಿ ಹೊಂದಿದ್ದು, ಅಲ್ಲಿ ಬಾಲಕಿಯೊಬ್ಬಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ. 2017ರಲ್ಲಿ ಬಾಲಕಿ ಹೊಟ್ಟೆ ನೋವೆಂದು ಹೇಳಿದ್ದಕ್ಕೆ ಆರೋಪಿ ಅಬ್ದುಲ್ಲ ಜ್ಯೂಸ್ ತಂದು ಕೊಟ್ಟಿದ್ದ. ಜ್ಯೂಸಿನಲ್ಲಿ ಮತ್ತು ಬರಿಸುವ ಔಷಧಿ ನೀಡಿದ್ದು, ಅರೆ ಪ್ರಜ್ಞಾವಸ್ಥೆಗೆ ಹೋದ ಯುವತಿಯ ಮೇಲೆ ಅಬ್ದುಲ್ಲ ಅತ್ಯಾಚಾರ ನಡೆಸಿದ್ದ.

ಆನಂತರ, ಯುವತಿ ಎಚ್ಚರಗೊಂಡಾಗ ಈ ಬಗ್ಗೆ ಯಾರಿಗೂ ಹೇಳಬೇಡ, ಹೇಳಿದರೆ ಜೀವ ಸಹಿತ ಬಿಡುವುದಿಲ್ಲ. ಅಲ್ಲದೆ, ನಗ್ನ ವಿಡಿಯೋ ತೆಗೆದಿಟ್ಟಿದ್ದೀನಿ, ವೈರಲ್ ಮಾಡ್ತೀನಿ ಎಂದು ಬೆದರಿಸಿದ್ದ. ಅದೇ ವಿಡಿಯೋ ಮುಂದಿಟ್ಟು ಯುವತಿಯನ್ನು ಮತ್ತೆ ಮತ್ತೆ ಅತ್ಯಾಚಾರಕ್ಕೆ ಗುರಿಪಡಿಸಿದ್ದು, ಆನಂತರ ಆಕೆ ಗರ್ಭಿಣಿಯಾಗಿದ್ದಾಳೆ. ಯುವತಿ ನಾಲ್ಕು ತಿಂಗಳು ಗರ್ಭಿಣಿಯಾದ ವೇಳೆ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾಳೆ.

2017ರ ಆಗಸ್ಟ್ 11ರಂದು ಪೊಲೀಸ್ ದೂರು ನೀಡಲಾಗಿತ್ತು. ಆನಂತರ, ಯುವತಿ ಮಗುವಿಗೆ ಜನ್ಮ ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆಯ ಸಂದರ್ಭದಲ್ಲಿ ಡಿಎನ್ ಎ ಟೆಸ್ಟ್ ಮಾಡಿಸಿದ್ದು, ಯುವತಿ ಗರ್ಭ ಧರಿಸಲು ಆರೋಪಿ ಅಬ್ದುಲ್ಲನೇ ಕಾರಣನಾಗಿದ್ದ ಅನ್ನುವುದು ಖಚಿತವಾಗಿತ್ತು. ಆಗಿನ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ವಿಚಾರಣೆ ನಡೆಸಿ, ಪೋಕ್ಸೋ ಏಕ್ಟಿನಡಿ ಹತ್ತು ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಿದ್ದಾರೆ. ಅಲ್ಲದೆ, 50 ಸಾವಿರ ರೂ. ದಂಡ ವಿಧಿಸಿದೆ. ಬಾಲಕಿಯನ್ನು ಬೆದರಿಸಿದ್ದಕ್ಕೆ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನೂ ವಿಧಿಸಿದೆ.

ಗೀತಾ ಎಂಬ ಇನ್ನೊಬ್ಬ ಯುವತಿ ಕೂಡ ಅದೇ ಅಂಗಡಿಯಲ್ಲಿ ಕೆಲಸಕ್ಕಿದ್ದು, ಆರೋಪಿಗೆ ಸಹಕರಿಸಿದ ಆರೋಪ ಹೊತ್ತಿದ್ದಳು. ವಿಚಾರಣೆ ವೇಳೆ ಆಕೆಯ ಮೇಲಿನ ಆರೋಪ ಸಾಬೀತಾಗದೆ ಖುಲಾಸೆಗೊಂಡಿದ್ದಾಳೆ. ಸರಕಾರಿ ವಕೀಲ ವೆಂಕಟರಮಣ ಸ್ವಾಮಿ ಬಾಲಕಿ ಪರವಾಗಿ ವಾದಿಸಿದ್ದರು.

The Additional Sessions and FTSC-2 court sentenced a man accused of sexually harassing and impregnating a girl employee of the cloth shop owned by him, to 10 years of rigorous imprisonment (RI) and slapped a fine of Rs 60,000.Abdul Latif alias Ichha (42), a resident of Kandavara village is the convict.