ಎಂಆರ್ ಪಿಎಲ್ ಒಳಗಡೆ ಕ್ರೇನ್ ಅಪಘಾತ ; ಕಬ್ಬಿಣದ ಸ್ಲಾಬ್ ಮೈಮೇಲೆ ಬಿದ್ದು ಗುತ್ತಿಗೆ ಕಾರ್ಮಿಕ ಸಾವು, ಪ್ರಕರಣ ದಿಕ್ಕು ತಪ್ಪಿಸಲು ಅಧಿಕಾರಿಗಳ ಯತ್ನ

23-06-22 06:53 pm       Mangalore Correspondent   ಕ್ರೈಂ

ಸುರತ್ಕಲ್ ಎಂಆರ್ ಪಿಎಲ್ ಕೈಗಾರಿಕಾ ಸಂಕೀರ್ಣದ ಒಳಗಡೆ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕ್ರೇನ್ ಯಂತ್ರದ ಕಬ್ಬಿಣದ ಸ್ಲ್ಯಾಬ್ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ.

ಮಂಗಳೂರು, ಜೂನ್ 23: ಸುರತ್ಕಲ್ ಎಂಆರ್ ಪಿಎಲ್ ಕೈಗಾರಿಕಾ ಸಂಕೀರ್ಣದ ಒಳಗಡೆ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕ್ರೇನ್ ಯಂತ್ರದ ಕಬ್ಬಿಣದ ಸ್ಲ್ಯಾಬ್ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಸುರತ್ಕಲ್ ಕಾನ ನಿವಾಸಿ ಕೇಶವ ಕೋಟ್ಯಾನ್ (40) ಎಂದು ಗುರುತಿಸಲಾಗಿದೆ.

ಕೇಶವ ಕೋಟ್ಯಾನ್ ಎಂಆರ್ ಪಿಎಲ್ ಸಂಕೀರ್ಣದ ಒಳಗಡೆ ರಿಗ್ಗರ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಸಂಜೆ ಕೆಲಸ ಮಾಡುತ್ತಿದ್ದರು. ಕ್ರೇನ್ ಯಂತ್ರದಲ್ಲಿ ಲೋಡ್, ಅನ್ ಲೋಡ್ ಮಾಡುತ್ತಿದ್ದಾಗ ಕ್ರೇನ್ ಬ್ಯಾಲೆನ್ಸಿಗೆ ಇಡಲಾಗಿದ್ದ 30 ಟನ್ ತೂಕದ ಕಬ್ಬಿಣದ ಸ್ಲಾಬ್ ಮೈಮೇಲೆ ಬಿದ್ದು ಗಾಯಗೊಂಡಿದ್ದಾರೆ. ಭುಜ ಮತ್ತು ಎದೆಯ ಭಾಗಕ್ಕೆ ಸ್ಲಾಬ್ ಬಿದ್ದಿದೆ ಎನ್ನಲಾಗುತ್ತಿದ್ದು, ದೇಹದ ಮೂಳೆಗಳು ಮುರಿದು ಹೋಗಿದ್ದವು.

Mangalore Refinery And Petrochemicals Limited (MRPL) Q4 FY21 Results: MRPL  Reports Net Profit of Rs 328 Crore In March Quarter

ಆನಂತರ, ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ತಲುಪುವ ಮೊದಲೇ ಮೃತಪಟ್ಟಿದ್ದರು. ಕೇಶವ ಕೋಟ್ಯಾನ್, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಬ್ಬಿಣದ ಸ್ಲ್ಯಾಬ್ ಬಿದ್ದು ಕಾರ್ಮಿಕ ಮೃತಪಟ್ಟಿದ್ದರೂ, ಅವರ ಸಾವು ಸ್ವಾಭಾವಿಕ ಎಂದು ದಿಕ್ಕು ತಪ್ಪಿಸಲು ಎಂಆರ್ ಪಿಎಲ್ ಅಧಿಕಾರಿಗಳು ಯತ್ನಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಸಾರ್ವಜನಿಕ ಸಂಪರ್ಕಾಧಿಕಾರಿ, ಅವರು ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು ಮೃತಪಟ್ಟಿದ್ದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಕ್ರೇನ್ ಯಂತ್ರದ ಕಬ್ಬಿಣದ ಸ್ಲಾಬ್ ಮೈಮೇಲೆ ಬಿದ್ದು ಮೃತಪಟ್ಟಿದ್ದಾಗಿ ಅವರ ಜೊತೆಗೆ ಕೆಲಸ ಮಾಡುತ್ತಿದ್ದವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕ್ರೇನ್ ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕ್ರೇನ್ ಆಪರೇಟರ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MCC is responsible for pathetic condition of Mangaluru: Muneer Katipalla

ಗುತ್ತಿಗೆ ಕಾರ್ಮಿಕನ ಸಾವು ; ಪಾರದರ್ಶಕ ತನಿಖೆಗೆ ಡಿವೈಎಫ್ಐ ಆಗ್ರಹ 

ಎಂಆರ್ ಪಿಎಲ್ ಕೈಗಾರಿಕಾ ಘಟಕದಲ್ಲಿ ಸ್ಥಳೀಯ ಗುತ್ತಿಗೆ ಕಾರ್ಮಿಕ ಕೇಶವ ಕೋಟ್ಯಾನ್ ಕರ್ತವ್ಯದ ಸಂದರ್ಭ ಕ್ರೇನ್ ಅಪಘಾತದಲ್ಲಿ ಸಾವಿಗೀಡಾಗಿದ್ದು, ಸಾವಿನ ನೈಜ ಕಾರಣವನ್ನು ಕಂಪೆನಿ ಮುಚ್ಚಿಡುತ್ತಿದೆ. ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿಯೂ ಎಂಆರ್ ಪಿಎಲ್ ಆಡಳಿತ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಇದು ಖಂಡನೀಯ. ಕೇಶವ ಕೋಟ್ಯಾನ್ ಸಾವಿನ ಕುರಿತು ಪಾರದರ್ಶಕ ತನಿಖೆ ನಡೆಯಬೇಕು ಹಾಗೂ ಕರ್ತವ್ಯದ ವೇಳೆ ಕಂಪೆನಿಯ ನಿರ್ಲಕ್ಷದಿಂದ ಸಾವಿಗೀಡಾದ ಕೇಶವ ಕೋಟ್ಯಾನ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಮತ್ತು ಕುಟುಂಬ ಸದಸ್ಯನಿಗೆ ಎಂಆರ್ ಪಿಎಲ್ ನಲ್ಲಿ ಖಾಯಂ ಉದ್ಯೋಗ ಒದಗಿಸಿಕೊಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಕೇಶವ ಕೋಟ್ಯಾನ್ ಕರ್ತವ್ಯದಲ್ಲಿದ್ದಾಗ ಕ್ರೇನ್ ಯಂತ್ರದ ಭಾರವಾದ ಕಬ್ಬಿಣದ ವಸ್ತು ಎದೆ ಹಾಗೂ ಮುಖದ ಭಾಗಕ್ಕೆ ಬಡಿದು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿಯಿದೆ. ಇದು ಕಂಪೆನಿಯ ಬೇಜವಾಬ್ದಾರಿತನದಿಂದ ನಡೆದ ದುರ್ಘಟನೆ‌. ಆದರೆ ಕಂಪೆನಿ ಇದನ್ನು ಮುಚ್ಚಿಟ್ಟು ಕೇಶವ ಕೋಟ್ಯಾನ್ ಅವರದ್ದು ಸ್ವಾಭಾವಿಕ ಸಾವು ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಇದಲ್ಲದೆ ಕಂಪೆನಿ ಅಧಿಕಾರಿಗಳು ಪ್ರಭಾವ ಬಳಸಿ ಸೈಟ್ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ಬದಲಿಗೆ ಗುತ್ತಿಗೆ ಆಧಾರದಲ್ಲಿ ಹೊರಗಿನಿಂದ ತರಿಸಿಕೊಂಡ ಕ್ರೇನ್ ಆಪರೇಟರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಪೋಸ್ಟ್ ಮಾರ್ಟಂ ನಡೆಸಲು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲು 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿರುವುದು ಇದಕ್ಕೆ ಸಾಕ್ಷಿ. ಪ್ರಕರಣ ಮುಚ್ಚಿ ಹಾಕಲು ಒಳಗಿನಿಂದ ನಡೆಯುತ್ತಿರುವ ಪ್ರಯತ್ನಗಳನ್ನು ಈ ಬೆಳವಣಿಗೆಗಳು ಬಯಲಿಗೆಳೆದಿದೆ ಎಂದು ಮುನೀರ್ ತಿಳಿಸಿದ್ದಾರೆ.

A 40-year-old employee of Mangalore Refinery and Petrochemicals Limited (MRPL) died after being mowed down by a crane inside the MRPL workshop on Wednesday afternoon here in the city.The deceased MRPL employee has been identified as Keshav Kotian (40).According to the reports, Keshav was mowed down by a crane while he was working at an MRPL workshop. After sustaining critical injuries he was rushed to a private hospital in the city, but he breathed his last while on the way to the hospital.