ಬ್ರೇಕಿಂಗ್ ನ್ಯೂಸ್
24-06-22 02:46 pm Bengalore Correspondent ಕ್ರೈಂ
ಬೆಂಗಳೂರು, ಜೂನ್ 24 : ಬ್ಯಾಂಕ್ ಮ್ಯಾನೇಜರನೊಬ್ಬ ಠೇವಣಿದಾರರ ಹಣದ ಮೇಲೆಯೇ ಬರೋಬ್ಬರಿ 5.70 ಕೋಟಿ ಲೋನ್ ಪಾಸ್ ಮಾಡಿಕೊಂಡು ಅದನ್ನು ತನ್ನ ಖಾತೆಗೆ ವರ್ಗಾಯಿಸಿ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಹನುಮಂತನಗರ ಠಾಣೆ ಪೊಲೀಸರು ಬ್ಯಾಂಕ್ ಮ್ಯಾನೇಜರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಹನುಮಂತ ನಗರದ ಇಂಡಿಯನ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಹರಿಶಂಕರ್ ಗ್ರಾಹಕರಿಗೆ ವಂಚನೆಗೈದು ಬಂಧನಕ್ಕೀಡಾದ ವ್ಯಕ್ತಿ. ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಹೊಂದಿದ್ದ ಅನಿತಾ ಎಂಬವರ ಖಾತೆಯಿಂದ ಲೋನ್ ತೆಗೆದಿದ್ದು ಅದನ್ನು ಪಶ್ಚಿಮ ಬಂಗಾಳದ ವಿವಿಧ ಖಾತೆಗಳಿಗೆ ಮ್ಯಾನೇಜರ್ ವರ್ಗಾವಣೆ ಮಾಡಿಸಿದ್ದ. ಅನಿತಾ ಅವರ ಗಮನಕ್ಕೆ ಬರದಂತೆ ಸುಮಾರು 5.70 ಕೋಟಿಯಷ್ಟು ಎಫ್ ಡಿ ಮೇಲೆ ಲೋನ್ ತೆಗೆಯಲಾಗಿದ್ದು ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ದೂರು ನೀಡಿದ್ದಾರೆ. ಆರೋಪಿ ಹರಿಶಂಕರ್, ತನ್ನ ಅಕ್ರಮ ಲೋನ್ ಕೃತ್ಯಕ್ಕೆ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ ಹಾಗೂ ಕ್ಲರ್ಕ್ ಮುನಿರಾಜುವನ್ನ ಬಳಸಿಕೊಂಡಿದ್ದ. ಮೇ 13 ರಿಂದ 19ರ ನಡುವೆ ಲೋನ್ ಪ್ರಕ್ರಿಯೆ ನಡೆದಿತ್ತು.
ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆ ಮತ್ತು ಕರ್ನಾಟಕದ ಎರಡು ಬ್ಯಾಂಕ್ ಖಾತೆಗಳಿಗೆ ಮ್ಯಾನೇಜರ್ ಕಡೆಯಿಂದ ಹಣ ಜಮಾ ಆಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಹನುಮಂತ ನಗರ ಪೊಲೀಸರು ಮ್ಯಾನೇಜರ್ ಹರಿಶಂಕರನ್ನು ಬಂಧಿಸಿ, 10 ದಿನ ಕಸ್ಟಡಿಗೆ ಪಡೆದಿದ್ದಾರೆ.
ವಿಚಾರಣೆ ವೇಳೆ ಡೇಟಿಂಗ್ ಆ್ಯಪ್ ನಲ್ಲಿ ಯುವತಿ ಪರಿಚಯವಾಗಿದ್ದು ಆಕೆಯ ಬಲೆಗೆ ಬಿದ್ದು ಹಣವನ್ನು ಕೊಟ್ಟಿರೋದಾಗಿ ಹೇಳಿಕೆ ನೀಡಿದ್ದಾನೆ. ಡೇಟಿಂಗ್ ಆ್ಯಪ್ ನಲ್ಲಿ ಯುವತಿ ಸಂಪರ್ಕ ಬೆಳೆದಿದ್ದು, ಅಷ್ಟೂ ಹಣವನ್ನು ಅದೇ ಯುವತಿಗೆ ನೀಡಿದ್ದಾಗಿ ಆರೋಪಿಯ ಹೇಳಿಕೆ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ತನಿಖೆ ಮುಂದುವರಿಸಿದ್ದಾರೆ.
5.70 ಕೋಟಿ ಪೂರ್ತಿ ಹಣವನ್ನು ಯುವತಿಗೆ ಕೊಟ್ಟಿರದೆ ಸ್ವಂತಕ್ಕೆ ಬಳಸಿಕೊಂಡಿರೋ ಶಂಕೆ ಇದೆ. ಹಣ ವರ್ಗಾವಣೆಯಾದ ವ್ಯಕ್ತಿಗಳ ಬಗ್ಗೆ ಬ್ಯಾಂಕ್ ಗಳಿಂದ ಮಾಹಿತಿ ಸಂಗ್ರಹಿಸ್ತಿದ್ದು ಈವರೆಗೆ ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದು ಕಂಡುಬಂದಿದೆ.
Three bank officials allegedly diverted Rs 5.7 crore to at least 30 different bank accounts, including 28 in West Bengal.Zonal manager of Indian Bank DS Murthy has filed a cheating and criminal conspiracy case against the three officials from the Hanumanthanagar branch.Branch manager Hari Shankar, assistant branch manager Kausal Jerai and clerk Muniraju were identified as the suspects. The alleged fraud took place between May 13 and May 19. It came to light during an internal probe into the release of Rs 5.7 crore in the name of a bank customer.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 12:44 pm
Mangaluru Correspondent
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm