ಬ್ರೇಕಿಂಗ್ ನ್ಯೂಸ್
26-06-22 11:02 am Mangalore Correspondent ಕ್ರೈಂ
ಉಳ್ಳಾಲ, ಜೂ.26 : ಬೆಂಗಳೂರಿನಿಂದ ಪ್ರವಾಸ ನಿಮಿತ್ತ ಉಚ್ಚಿಲ ಬಟ್ಟಂಪಾಡಿಯ ಖಾಸಗಿ ಗೆಸ್ಟ್ ಹೌಸ್ ಬಂದಿದ್ದ ತಂಡವೊಂದು ನಶೆಯೇರಿಸಿ ಪರಸ್ಪರ ದಾಂಧಲೆ ನಡೆಸಿದ್ದಲ್ಲದೆ, ಸ್ಥಳೀಯರ ಮನೆಗೆ ನುಗ್ಗಲು ಯತ್ನಿಸಿದ್ದರಿಂದ ಸ್ಥಳೀಯರು ಯುವಕರಿಗೆ ಗೂಸಾ ನೀಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನ ಓಂಕಾರ್ ಪ್ರಿಂಟಿಂಗ್ ಪ್ರೆಸ್ ಸಂಸ್ಥೆಯ 60 ಮಂದಿ ಸಿಬ್ಬಂದಿ ಎರಡು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಶನಿವಾರ ಬಟ್ಟಂಪಾಡಿಯ CAMP 21 ಮತ್ತು ಪಕ್ಕದ ಮತ್ತೊಂದು ಗೆಸ್ಟ್ ಹೌಸಲ್ಲಿ ತಂಗಿದ್ದರು. ಗೆಸ್ಟ್ ಹೌಸಲ್ಲಿ ತಂಗಿದ್ದ ಯುವಕರು ತಡರಾತ್ರಿ ಅಮಲೇರಿಸಿ ಮಜಾ ಉಡಾಯಿಸಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಈ ಪೈಕಿ ನಶೆಯಲ್ಲಿದ್ದ ಬೀದರ್ ಮೂಲದ ಶರಣ ಬಸಪ್ಪ ಎಂಬಾತ ಊಟದ ತಟ್ಟೆ ಹಿಡಿದೇ ಸಮೀಪದ ರಾಮಪ್ಪ ಎಂಬವರ ಮನೆಗೆ ತೆರಳಿ ಬಾಗಿಲು ಬಡಿದಿದ್ದಾನೆ. ಬಾಗಿಲು ತೆರೆದ ಯುವತಿ ಆತನನ್ನು ನೋಡಿ ಕಿರುಚಿದ್ದು ಸ್ಥಳೀಯರು ಸೇರಿ ಗೂಸಾ ಕೊಟ್ಟಿದ್ದಾರೆ.
ಮತ್ತೊಂದೆಡೆ ರಸ್ತೆಯಲ್ಲಿ ಮೂವರು ಪ್ರವಾಸಿಗರು ನಶೆಯಲ್ಲಿ ಹೊಡೆದಾಟ ನಡೆಸಿದ್ದು ಅವರನ್ನ ಸ್ಥಳೀಯರು ತಡೆದು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಆನಂತರ ಉಳ್ಳಾಲ ಪೊಲೀಸರ ಗಮನಕ್ಕೂ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಹಿಂದಿರುಗಿದ್ದರು. ಪ್ರವಾಸಿಗರು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದರಿಂದ ಸ್ಥಳೀಯರ ಮೇಲೆ ದೂರು ದಾಖಲಾಗಿದೆ.
ಸ್ಥಳೀಯರಾದ ನಾಗೇಶ್ ಉಚ್ಚಿಲ್ ಮಾಹಿತಿ ನೀಡಿ, ಉಚ್ಚಿಲ ಪ್ರದೇಶದಲ್ಲಿ ನಾಯಿಕೊಡೆಗಳಂತೆ ಅಕ್ರಮ ಗೆಸ್ಟ್ ಹೌಸ್ಗಳು ತಲೆಯೆತ್ತಿದ್ದು ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸಿವೆ. ಇಲ್ಲಿನ ಗೆಸ್ಟ್ ಹೌಸ್ಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ಸೂಕ್ತ ನೋಂದಣಿ ಮಾಡಿಕೊಂಡಿಲ್ಲ. ಗೆಸ್ಟ್ ಹೌಸ್ಗಳಲ್ಲಿ ಮದ್ಯ ಪೂರೈಕೆ ಇಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿಗೆ ಬಂದ ಪ್ರವಾಸಿಗರು ಈ ರೀತಿ ನಶೆಯಲ್ಲಿ ತೇಲಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
Two gangs of Bengaluru origin fought with each other at a private guest house at Ucchila Battappady in Ullal, Mangalore. The locals alleged that the gang members also created ruckus by entering their houses and held a protest. A party was in progress at the private guest house. People had arrived in two buses. Friction began between the two gangs after midnight. The members got down to the road and started a brawl.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm