ಬ್ರೇಕಿಂಗ್ ನ್ಯೂಸ್
01-07-22 07:42 pm HK News Desk ಕ್ರೈಂ
ಕಾಸರಗೋಡು, ಜುಲೈ 1: ವಿದೇಶದಿಂದ ಊರಿಗೆ ಬಂದ ಯುವಕನನ್ನು ಎರಡೇ ದಿನದಲ್ಲಿ ಅಪಹರಿಸಿ ಭೀಕರವಾಗಿ ಕೊಲೆಗೈದಿದ್ದ ಪ್ರಕರಣದಲ್ಲಿ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಬ್ದುಲ್ ಅಜೀಂ (37), ಅಬ್ದುಲ್ ಅಜೀಜ್ (35), ರಿಯಾಜ್ ಹಸನ್(33), ಅಬ್ದುಲ್ ರಜಾಕ್ (46) ಅಬುಬಕ್ಕರ್ ಸಿದ್ದಿಕ್ (33) ಬಂಧಿತರು. ಪ್ರಕರಣದಲ್ಲಿ ಇನ್ನೂ ಐದಾರು ಮಂದಿ ಆರೋಪಿಗಳಿದ್ದು ಪೊಲೀಸರು ತನಿಖೆಯನ್ನು ಗೋವಾ, ಕರ್ನಾಟಕಕ್ಕೆ ವಿಸ್ತರಿಸಿದ್ದಾರೆ. ಪ್ರಮುಖ ಆರೋಪಿಗಳಾದ ರಾಯಿಸ್ ಮತ್ತು ಶಾಫಿ ತಲೆಮರೆಸಿಕೊಂಡಿದ್ದು, ವಿದೇಶಕ್ಕೆ ಪಲಾಯನ ಮಾಡಿದ್ದಾರೆಂಬ ಶಂಕೆಯೂ ವ್ಯಕ್ತವಾಗಿದೆ.
ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ, ಕೊಲೆ
ಸೀತಾಂಗೋಳಿ ನಿವಾಸಿ ಅಬುಬಕ್ಕರ್ ಸಿದ್ದಿಕ್ (32) ಜೂನ್ 25ರಂದು ವಿದೇಶದಿಂದ ಊರಿಗೆ ಆಗಮಿಸಿದ್ದ. ಮರುದಿನ 26ರಂದು ಬೆಳಗ್ಗೆ ಸ್ನೇಹಿತರ ತಂಡವೊಂದು ಮಾತನಾಡಲು ಇದೆಯೆಂದು ಅಬುಬಕ್ಕರ್ ಅವರನ್ನು ಉಪ್ಪಳಕ್ಕೆ ಕರೆಸಿಕೊಂಡಿದ್ದರು. ತನ್ನ ಸೋದರರಾದ ಅನ್ಸಾರ್ ಮತ್ತು ಅನ್ವರ್ ಜೊತೆಗೆ ತೆರಳಿದ್ದ ಅಬುಬಕ್ಕರ್ ಅವರನ್ನು ತಂಡವೊಂದು ಅಪಹರಿಸಿದ್ದು ಪೈವಳಿಕೆಯ ನೂತಿಲ ಎಂಬಲ್ಲಿಗೆ ಕೊಂಡೊಯ್ದಿದ್ದು ಅಲ್ಲಿನ ಮನೆಯೊಂದರಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಆನಂತರ, ಅನ್ಸಾರ್ ಮತ್ತು ಅನ್ವರ್ ಅವರನ್ನು ಪೈವಳಿಕೆಯಲ್ಲಿ ಬಿಟ್ಟು ಕಳುಹಿಸಿದ್ದ ತಂಡ ಅಬುಬಕ್ಕರ್ ನನ್ನು ವಾಹನದಲ್ಲಿ ಕರೆದೊಯ್ದಿತ್ತು. ಗಾಯಗೊಂಡ ಸ್ಥಿತಿಯಲ್ಲಿದ್ದ ಅನ್ಸಾರ್ ಮತ್ತು ಅನ್ವರ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಜೂನ್ 26ರಂದು ರಾತ್ರಿ 9 ಗಂಟೆ ಸುಮಾರಿಗೆ ಅಬುಬಕ್ಕರ್ ಸಿದ್ದಿಕ್ ಅವರನ್ನು ಉಪ್ಪಳ ಸಮೀಪದ ಬಂದ್ಯೋಡಿನ ಆಸ್ಪತ್ರೆಯ ಮುಂದೆ ಆಂಬುಲೆನ್ಸ್ ಒಂದರಲ್ಲಿ ಬಿಟ್ಟು ತಂಡ ಪರಾರಿಯಾಗಿತ್ತು. ಅಲ್ಲಿ ಪರಿಶೀಲಿಸಿದ ವೈದ್ಯರು, ಅಲ್ಲಿಗೆ ಬರುವ ಮೊದಲೇ ಸಿದ್ದಿಕ್ ಮೃತಪಟ್ಟಿದ್ದನ್ನು ತಿಳಿಸಿದ್ದಲ್ಲದೆ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕಾಸರಗೋಡು ಎಸ್ಪಿ ವೈಭವ್ ಸಕ್ಸೇನಾ, ಕೊಲೆ ಪ್ರಕರಣದ ತನಿಖೆಗೆ ವಿಶೇಷ ತಂಡವೊಂದನ್ನು ರಚಿಸಿದ್ದರು. ಪೋಸ್ಟ್ ಮಾರ್ಟಂ ವರದಿಯಲ್ಲಿ ತಲೆಯ ಹಿಂಭಾಗಕ್ಕೆ ಪ್ರಬಲ ಏಟು ಬಿದ್ದಿದ್ದರಿಂದ ಸಾವು ಸಂಭವಿಸಿದೆ ಎನ್ನುವ ಮಾಹಿತಿ ಇತ್ತು. ಅಲ್ಲದೆ, ಎದೆ, ಹೊಟ್ಟೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಗುರುತುಗಳಿದ್ದವು. ಕೆಲವು ಮಾಹಿತಿ ಪ್ರಕಾರ, ಹಣಕ್ಕಾಗಿ ಅಪಹರಣ ನಡೆಸಿದ್ದು, ಈ ಬಗ್ಗೆ ಮನೆಯವರಿಗೂ ಬೆದರಿಕೆ ಹಾಕಿದ್ದರು. ಹಣ ತಂದುಕೊಡದಿದ್ದರೆ ಬಿಟ್ಟು ಕಳುಹಿಸಲ್ಲ ಎಂದು ಬೆದರಿಕೆ ಹಾಕಿದ್ದರಂತೆ. ಇದೇ ಸುಳಿವಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದ್ದರು.
ಚಿನ್ನದ ಸ್ಮಗ್ಲಿಂಗ್ ಕಾರಣಕ್ಕೆ ಕೊಲೆ ಶಂಕೆ
ಕೊಲೆಯಾದ ಅಬುಬಕ್ಕರ್ ಸಿದ್ದಿಕ್ ಸ್ನೇಹಿತರ ಪ್ರಕಾರ, ಚಿನ್ನದ ಸ್ಮಗ್ಲಿಂಗ್ ವಿಚಾರದಲ್ಲಿ ಹತ್ತು ಜನರ ತಂಡ ಅಪಹರಿಸಿ ಕೊಲೆ ನಡೆಸಿದೆಯಂತೆ. ಕಾಸರಗೋಡು ಸೇರಿದಂತೆ ಕರಾವಳಿ ಭಾಗದ ಬಹಳಷ್ಟು ಮಂದಿ ಗಲ್ಫ್ ರಾಷ್ಟ್ರದಲ್ಲಿದ್ದಾರೆ. ಅವರು ಊರಿಗೆ ಹಿಂತಿರುಗುವ ಸಂದರ್ಭದಲ್ಲಿ ಅವರನ್ನು ಚಿನ್ನದ ದಂಧೆಕೋರರು ಕಳ್ಳಸಾಗಣೆಗೆ ಬಳಸುತ್ತಾರೆ. ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಥವಾ ಇನ್ನಾವುದೋ ರೂಪದಲ್ಲಿ ಅಡಗಿಸಿಟ್ಟು ಗಲ್ಫ್ ರಾಷ್ಟ್ರದಿಂದ ಊರಿಗೆ ಕಳುಹಿಸುತ್ತಾರೆ. ಆ ಚಿನ್ನವನ್ನು ಊರಿಗೆ ಬಂದ ಕೂಡಲೇ ಅವರಿಂದ ಪಡೆದು ಇಲ್ಲಿನ ಜುವೆಲ್ಲರಿಗೆ ಮಾರಾಟ ಮಾಡುವ ಜಾಲ ಇದೆ. ಸಕಾಲದಲ್ಲಿ ಚಿನ್ನ ತಲುಪಿಸದೇ ಇದ್ದರೆ ಅಪಹರಿಸಿ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು ಮಾಡುತ್ತಾರೆ.
ಅಬುಬಕ್ಕರ್ ಸಿದ್ದಿಕ್ ಕಡೆಯಿಂದ 50 ಲಕ್ಷ ರೂ. ಆಗಬೇಕಿದ್ದ ಕಾರಣಕ್ಕೆ ಅಪಹರಣ ನಡೆಸಲಾಗಿತ್ತು ಅನ್ನುವ ಮಾಹಿತಿಗಳಿವೆ. ಆತನೂ ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದನೇ ಅನ್ನೋದು ಗೊತ್ತಿಲ್ಲ. ಆದರೆ, ಕಾಸರಗೋಡಿನಲ್ಲಿ ಚಿನ್ನದ ಕಳ್ಳಸಾಗಣೆ, ಹವಾಲಾ ರೂಪದಲ್ಲಿ ಹಣ ರವಾನೆ ಇತ್ಯಾದಿ ಅಕ್ರಮ ಜಾಲಗಳು ಸಕ್ರಿಯವಾಗಿವೆ. ವಿದೇಶದಲ್ಲಿ ಕೆಲಸ ಮಾಡುವ ಮಂದಿಗೆ ಆಮಿಷವೊಡ್ಡಿ ಹಣ, ಚಿನ್ನವನ್ನು ಕಳುಹಿಸಿಕೊಡುತ್ತಾರೆ. ಅದರಲ್ಲಿ ವಂಚನೆಯಾದಲ್ಲಿ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ಹೇಳುತ್ತಾರೆ, ಅಲ್ಲಿನ ಕೆಲವರು. ಆದರೆ ಕೆಲವು ಮೂಲಗಳ ಪ್ರಕಾರ, ಸದ್ರಿ ಪ್ರಕರಣದಲ್ಲಿ ಅಬುಬಕ್ಕರ್ ಸಿದ್ದಿಕ್ 50 ಲಕ್ಷ ರೂ. ವಂಚಿಸಿದ್ದರಲ್ಲಿ ಆರೋಪಿ ಆಗಿರಲಿಲ್ಲ ಎನ್ನಲಾಗುತ್ತಿದೆ. ಆತನೇ ಈ ವಂಚನೆ ಮಾಡಿದ್ದಾನೆ ಅನ್ನುವ ಗುಮಾನಿಯಲ್ಲಿ ತಂಡ ಅಪಹರಿಸಿದ್ದು, ವಿಚಿತ್ರವಾಗಿ ಹಿಂಸೆ ಕೊಟ್ಟು ಸಾಯಿಸಿದೆ.
Kasargod Man murdered brutally over gold smuggling, body had at least five thousand whips, says report. A non-resident Indian was kidnapped and killed by a gang soon after he was forced to return from Dubai, said Kasaragod police. The deceased has been identified as Aboobacker Siddik, a native of Mugu in Kumbla. Siddik might have been killed after some financial dealings went wrong, said Kasaragod DySP P Balakrishnan.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 02:25 pm
Mangaluru Correspondent
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm