ಬ್ರೇಕಿಂಗ್ ನ್ಯೂಸ್
02-07-22 10:45 pm HK News Desk ಕ್ರೈಂ
ಮಂಗಳೂರು, ಜುಲೈ 2: ನೇತ್ರಾವತಿ ನದಿಯಲ್ಲಿ ಮರಳೆತ್ತುವ ದೋಣಿಯನ್ನು ಮೇಲಕ್ಕೆತ್ತಲು ಹೋದ ಮರಳು ಕಾರ್ಮಿಕನೊಬ್ಬ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದ್ದು ಅಕ್ರಮ ಮರಳು ದಂಧೆಕೋರರ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ನಗರ ಹೊರವಲಯದ ಅರ್ಕುಳದ ಮರಳು ದಕ್ಕೆಯಲ್ಲಿ ಇಡಲಾಗಿದ್ದ ದೋಣಿಯನ್ನು ಇಂದು ಮಧ್ಯಾಹ್ನ ಕಾರ್ಮಿಕರು ಮೇಲಕ್ಕೆತ್ತಲು ಯತ್ನಿಸಿದ್ದರು ಎನ್ನಲಾಗಿದೆ. ನದಿಯಲ್ಲಿ ಪ್ರವಾಹ ಇದ್ದ ಕಾರಣ ದೋಣಿಯನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ದೋಣಿ ಸಹಿತ ಮೂವರು ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ಉತ್ತರ ಪ್ರದೇಶ ಮೂಲದ ರಾಜು ಸಾಹು, ಮೋಂತು ಸಾಹು ಮತ್ತು ನಾಗೇಂದ್ರ ಸಾಯನಿ ಎಂಬ ಮೂವರು ಕಾರ್ಮಿಕರು ನೀರಿಗೆ ಬಿದ್ದು ದೋಣಿಯ ಜೊತೆಗೆ ಕೊಚ್ಚಿ ಹೋಗಿದ್ದರು.
ನದಿಯಲ್ಲಿ ಕೊಚ್ಚಿ ಹೋಗುತ್ತಲೇ ದೋಣಿಯು ಬಳಿಕ ಅಡ್ಯಾರ್- ಪಾವೂರಿನ ಮಧ್ಯೆ ಅಡ್ಡಲಾಗಿ ಕಟ್ಟುತ್ತಿರುವ ನಿರ್ಮಾಣ ಹಂತದ ಸೇತುವೆಯಲ್ಲಿ ಸಿಲುಕಿತ್ತು. ಈ ವೇಳೆ ಮೋಂತು ಮತ್ತು ನಾಗೇಂದ್ರ ಎಂಬ ಇಬ್ಬರು ಈಜಿ ದಡ ಸೇರಿದ್ದರೆ, ರಾಜು ಸಾಹು ಎಂಬಾತ ನದಿ ನೀರಿನ ರಭಸದಲ್ಲಿ ಕೊಚ್ಚಿ ಹೋಗಿದ್ದಾನೆ.
ನೇತ್ರಾವತಿ ನದಿಯಲ್ಲಿ ಈಗ ಭಾರೀ ವೇಗದಲ್ಲಿ ನೀರು ಹರಿಯುತ್ತಿದ್ದು ಅದರ ನಡುವೆ ದೋಣಿಯನ್ನು ಎಳೆದು ಕಟ್ಟಲು ಕಾರ್ಮಿಕರನ್ನು ತೊಡಗಿಸಿದ್ದ ಬಗ್ಗೆ ದೋಣಿ ಮಾಲಕರ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸಿಫ್ ಮತ್ತು ಇಸಾಕ್ ಎಂಬ ಇಬ್ಬರು ದೋಣಿಯ ಮಾಲಕರು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮರಳುಕೋರರ ದಂಧೆಗೆ ಬಲಿ !
ಆದರೆ ದೋಣಿಯನ್ನು ಮೇಲಕ್ಕೆತ್ತುವಾಗ ಘಟನೆ ನಡೆದಿದೆಯೋ, ಪ್ರವಾಹ ಇರುವಾಗಲೂ ಅಕ್ರಮವಾಗಿ ಮರಳೆತ್ತಲು ಮುಂದಾಗಿದ್ದರೋ ಗೊತ್ತಿಲ್ಲ. ನದಿ ತುಂಬಿ ಹರಿಯುತ್ತಿರುವಾಗ ಮರಳು ಸಂಗ್ರಹಿಸುವುದು ಸಾಧ್ಯವಾಗದ ಕೆಲಸ. ಆದರೆ ಅರ್ಕುಳ, ಕಣ್ಣೂರಿನಲ್ಲಿ ವ್ಯಾಪಕ ಅಕ್ರಮ ಮರಳುಗಾರಿಕೆ ನಡೆಯುತ್ತಾ ಬಂದಿದ್ದು ಉತ್ತರ ಪ್ರದೇಶದ ಕಾರ್ಮಿಕರನ್ನು ಬಳಸ್ಕೊಂಡು ಜಿಲ್ಲಾಡಳಿತ, ಪೊಲೀಸರ ನಿರ್ಲಕ್ಷ್ಯದ ಮಧ್ಯೆ ದಂಧೆ ನಡೆಸಲಾಗುತ್ತಿದೆ. ಇದೀಗ ಕಾರ್ಮಿಕ ಕೊಚ್ಚಿ ಹೋಗಿದ್ದು ದೋಣಿ ಮೇಲಕ್ಕೆಳೆಯುವಾಗಲೇ ದುರಂತ ನಡೆದಿದ್ದಾ ಅಥವಾ ಮರಳುಗಾರಿಕೆ ನಡೆಸಲು ಅಮಾಯಕ ಕಾರ್ಮಿಕರನ್ನು ಈ ಪ್ರವಾಹದಲ್ಲಿಯೂ ನದಿಗೆ ಇಳಿಸಿದ್ದರೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ.
Boat capsized at Arkula in Mangalore one dead on spot. The deceased has been identified as Raju from Uttar Pradesh. Pubic allege that Continuous illegal sand mining has been done since long time through the support of the Police.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 02:25 pm
Mangaluru Correspondent
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm