ಬ್ರೇಕಿಂಗ್ ನ್ಯೂಸ್
03-07-22 05:32 pm HK News Desk ಕ್ರೈಂ
ನವದೆಹಲಿ, ಜುಲೈ 3: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಫಾರ್ಮಸಿಸ್ಟ್ ಆಗಿದ್ದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಅವರನ್ನು ಹತ್ಯೆಗೈದಿದ್ದು ಬಿಜೆಪಿ ನಾಯಕಿ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ಕಾರಣಕ್ಕಾಗಿಯೇ ಆಗಿತ್ತು ಅನ್ನೋದನ್ನು ಪೊಲೀಸರು ಕಡೆಗೂ ಪತ್ತೆ ಮಾಡಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಇರ್ಫಾನ್ ಖಾನ್ ನನ್ನು ಜುಲೈ 2ರಂದು ನಾಗಪುರದಲ್ಲಿ ಬಂಧಿಸಲಾಗಿದ್ದು, ಆತ ಸೆರೆಯಾದ ಬೆನ್ನಲ್ಲೇ ಒಟ್ಟು ಪ್ರಕರಣದ ಹೂರಣ ಹೊರಬಿದ್ದಿದೆ.
ಇರ್ಫಾನ್ ಖಾನ್ ಯಾವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಅನ್ನುವುದು ತಿಳಿದುಬಂದಿಲ್ಲ. ಆದರೆ, ಮುಸ್ಲಿಮ್ ಯುವಕರನ್ನು ಒಳಗೊಂಡಿದ್ದ ವಾಟ್ಸಪ್ ಗ್ರೂಪ್ ರಚಿಸಿಕೊಂಡಿದ್ದ. ನೂಪುರ್ ಶರ್ಮಾ ಪೈಗಂಬರ್ ಬಗ್ಗೆ ನೀಡಿದ್ದ ಹೇಳಿಕೆಯ ವಿಚಾರದಲ್ಲಿ ಗ್ರೂಪಿನಲ್ಲಿ ಸಾಕಷ್ಟು ಚರ್ಚೆಯೂ ಆಗಿತ್ತು. ನೂಪುರ್ ಶರ್ಮಾ ಬಂಧಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳ ಸಂದರ್ಭದಲ್ಲಿಯೇ ಕೆಲವು ಬಿಜೆಪಿ ಕಾರ್ಯಕರ್ತರು ನೂಪುರ್ ಶರ್ಮಾ ಪರವಾಗಿ ಐ ಸ್ಟಾಂಡ್ ವಿತ್ ನೂಪುರ್ ಶರ್ಮಾ ಎಂದು ತಮ್ಮ ವಾಟ್ಸಪ್ ಸ್ಟೇಟಸ್, ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಕ್ಕೊಂಡಿದ್ದರು.

ಇದೇ ವೇಳೆ, ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕ್ಕೊಂಡಿದ್ದರು. ಅಲ್ಲದೆ, ತಾನಿದ್ದ ವಾಟ್ಸಪ್ ಗ್ರೂಪಿನಲ್ಲೂ ಅದೇ ರೀತಿಯ ಪೋಸ್ಟ್ ಒಂದನ್ನು ಷೇರ್ ಮಾಡಿದ್ದರು. ಆದರೆ, ಅದೇ ಗ್ರೂಪಿನಲ್ಲಿ ಉಮೇಶ್ ಕೊಲ್ಹೆ ಪರಿಚಯದ ಯೂಸುಫ್ ಖಾನ್ ಕೂಡ ಇದ್ದ. ಯೂಸುಫ್, ಅಮರಾವತಿ ಪೇಟೆಯಲ್ಲಿ ವೆಟರಿನರಿ ಕ್ಲಿನಿಕ್ ನಡೆಸುತ್ತಿದ್ದು, ಉಮೇಶ್ ಕೊಲ್ಹೆ ಅವರ ಪಶು ವೈದ್ಯಕೀಯದ ಮೆಡಿಕಲ್ ಶಾಪ್ ಮತ್ತು ಅವರ ಜೊತೆಗೆ ವ್ಯವಹಾರ ಹೊಂದಿದ್ದ ಪರಿಚಯದ ವ್ಯಕ್ತಿಯಾಗಿದ್ದ. ಉಮೇಶ್ ರಾವ್ ಪೋಸ್ಟ್ ಮಾಡಿದ್ದನ್ನು ಯೂಸುಫ್ ಖಾನ್, ತಮ್ಮ ತೀವ್ರವಾದಿಗಳ ಗುಂಪಿಗೆ ಷೇರ್ ಮಾಡಿದ್ದ. ಹೆಚ್ಚುವರಿಯಾಗಿ ತೀವ್ರವಾದಿ ಗುಂಪಿನಲ್ಲಿ ಸೋಶಿಯಲ್ ಮೀಡಿಯಾದ ಮೇಲೆ ನಿಗಾ ಇರಿಸುವ ಜವಾಬ್ದಾರಿ ಹೊಂದಿದ್ದ ಯೂಸುಫ್ ಖಾನ್, ತನ್ನ ಕೆಲಸವನ್ನು ನಿಭಾಯಿಸಿದ್ದ.

ಇಷ್ಟಕ್ಕೇ ಸಂಚು ಹೆಣೆದಿದ್ದ ಇರ್ಫಾನ್ ಖಾನ್, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಅವರನ್ನು ಮುಗಿಸಲು ಪ್ಲಾನ್ ಹಾಕಿದ್ದ. ಪೈಗಂಬರ್ ಅವಹೇಳನಕ್ಕೆ ಇದೇ ರೀತಿಯಲ್ಲಿ ಸೇಡು ತೀರಿಸಬೇಕೆಂಬ ಹಿಡನ್ ಅಜೆಂಡಾ ಇಟ್ಟುಕೊಂಡು, ಆ ಕೃತ್ಯಕ್ಕಾಗಿ ಕೆಲವು ಯುವಕರನ್ನು ರೆಡಿ ಮಾಡಿಸಿದ್ದ. ಆಗಷ್ಟೇ ಮೌಲಾನಾ ಆಗಿ ಗುರುತಿಸಿಕೊಂಡಿದ್ದ ಮುದಾಸಿರ್ ಅಹ್ಮದ್ ಮತ್ತು ಸಾಮಾನ್ಯ ಕೂಲಿ ಕಾರ್ಮಿಕರಾಗಿದ್ದ ಶಾರುಖ್ ಪಠಾಣ್, ಅಬ್ದುಲ್ ತೌಫಿಕ್, ಶೋಯಿಬ್ ಖಾನ್, ಅತೀಬ್ ರಶೀದ್ ಹಾಗೂ ಯೂಸುಫ್ ಖಾನ್ ಅವರ ಬ್ರೇನ್ ವಾಷ್ ಮಾಡಿದ್ದಲ್ಲದೆ, ಕೊಲೆ ಕೃತ್ಯ ಜಾರಿ ಮಾಡುವ ಹೊಣೆ ಹೊತ್ತ ನಾಲ್ವರು ಕೂಲಿ ಕಾರ್ಮಿಕರಿಗೆ ದೊಡ್ಡ ಮೊತ್ತದ ಹಣವನ್ನು ನೀಡುವುದಾಗಿ ಮತ್ತು ಕೃತ್ಯದ ಬೆನ್ನಲ್ಲೇ ಕಾರಿನಲ್ಲಿ ಎಸ್ಕೇಪ್ ಮಾಡಿಸುವುದಾಗಿ ನಂಬಿಸಿದ್ದ. ಅದರಂತೆ, ಜೂನ್ 21ರ ರಾತ್ರಿ 10 ಗಂಟೆಗೆ ಉಮೇಶ್ ಕೊಲ್ಹೆ ಎಂದಿನಂತೆ ತಮ್ಮ ಮೆಡಿಕಲ್ ಶಾಪ್ ಬಂದ್ ಮಾಡಿ ಬೈಕಿನಲ್ಲಿ ತೆರಳುತ್ತಿದ್ದುದನ್ನು ಯೂಸುಫ್ ಖಾನ್ ತೋರಿಸಿದ್ದರೆ, ಇತರ ನಾಲ್ವರು ಬೈಕಿನಲ್ಲಿ ಅಡ್ಡಗಟ್ಟಿ ಕುತ್ತಿಗೆ ಸೀಳಿ ಕೊಲೆ ಮಾಡಿದ್ದರು.
ಕೊಲೆ ಪ್ರಕರಣದಲ್ಲಿ ಸದ್ಯಕ್ಕೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮೊನ್ನೆಯ ವರೆಗೂ ಯಾಕಾಗಿ ಕೊಲೆ ಕೃತ್ಯ ನಡೆಸಿದ್ದಾರೆ ಅನ್ನುವುದನ್ನು ಸ್ಥಳೀಯ ಪೊಲೀಸರು ಬಹಿರಂಗ ಪಡಿಸಿರಲಿಲ್ಲ. ಕೊಲೆಯ ಹಿಂದಿನ ನೈಜ ಕಾರಣ ತಿಳಿದು ಸ್ಥಳೀಯ ಪೊಲೀಸರು ಮುಚ್ಚಿಟ್ಟಿದ್ದರೋ ಗೊತ್ತಿಲ್ಲ. ನಾಲ್ಕು ದಿನಗಳ ಹಿಂದೆ ಉದಯಪುರದಲ್ಲಿ ಟೈಲರ್ ಕನ್ನಯ್ಯಲಾಲ್ ಕೊಲೆಗೈದಿದ್ದು ದೇಶದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಉಮೇಶ್ ಕೊಲೆ ಪ್ರಕರಣವೂ ಸ್ಥಳೀಯ ಮಟ್ಟದಲ್ಲಿ ಅದೇ ರೂಪದಲ್ಲಿ ಸುದ್ದಿ ಮಾಡಿತ್ತು. ಉಮೇಶ್ ರಾವ್ ಕೊಲ್ಹೆ ಕೂಡ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದರು ಮತ್ತು ಅದೇ ಕಾರಣಕ್ಕಾಗಿ ಅವರನ್ನು ಕೊಲೆ ನಡೆಸಲಾಗಿದೆಯೇ ಅನ್ನುವ ಬಗ್ಗೆ ತನಿಖೆ ನಡೆಸಬೇಕೆಂದು ಸ್ಥಳೀಯ ಬಿಜೆಪಿ ಮುಖಂಡರು ಆಗ್ರಹ ಮಾಡಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ ಬೆನ್ನಲ್ಲೇ ಪ್ರಕರಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಎನ್ಐಎ ತನಿಖೆಗೆ ವಹಿಸಿದ್ದರು. ಅದಕ್ಕೂ ಮೊದಲೇ ಐವರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರೂ, ಕೊಲೆಯ ಹಿಂದಿನ ಕಾರಣವನ್ನು ಬಯಲು ಮಾಡಿರಲಿಲ್ಲ. ಇತ್ತ ಎನ್ಐಎ ತನಿಖೆ ಕೈಗೆತ್ತಿಕೊಂಡಾಗಲೇ, ನಾಗಪುರದಲ್ಲಿ ಅಡಗಿದ್ದ ಇರ್ಫಾನ್ ಖಾನನ್ನು ಪೊಲೀಸರು ಬಂಧಿಸಿ ಅಮರಾವತಿಗೆ ಕರೆತಂದಿದ್ದಾರೆ.

ಕನ್ನಯ್ಯ ಲಾಲ್ ಮತ್ತು ಉಮೇಶ್ ಕೊಲ್ಹೆ ಪ್ರಕರಣದಲ್ಲಿ ಹತ್ತಿರದ ಸಾಮ್ಯತೆಯೂ ಇದೆ. ಕನ್ನಯ್ಯ ಲಾಲ್ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದನ್ನು ಆತನ ಅಂಗಡಿ ಪಕ್ಕದಲ್ಲೇ ಇದ್ದ ಮುಸ್ಲಿಂ ವ್ಯಕ್ತಿಯೊಬ್ಬ ತೀವ್ರವಾದಿ ಕಾರ್ಯಕರ್ತರ ಗಮನಕ್ಕೆ ತಂದಿದ್ದ. ಆನಂತರ, ಅಂಗಡಿ ತೆರೆಯದಂತೆ ಬೆದರಿಕೆಯನ್ನೂ ಹಾಕಿದ್ದ. ಉಮೇಶ್ ಕೊಲ್ಹೆ ಪ್ರಕರಣದಲ್ಲಿಯೂ ಆತನ ಪರಿಚಿತನೇ ಆಗಿದ್ದ ಯೂಸುಫ್ ಖಾನ್, ಇವರ ವಾಟ್ಸಪ್ ಪೋಸ್ಟ್ ಬಗ್ಗೆ ತೀವ್ರವಾದಿಗಳ ಗಮನಕ್ಕೆ ತಂದಿದ್ದ. ಆಮೂಲಕ ಎರಡೂ ಪ್ರಕರಣದಲ್ಲೂ ಪರಿಚಿತ ವ್ಯಕ್ತಿಗಳೇ ಇವರ ಸಾವಿಗೆ ಕಾರಣರಾಗಿದ್ದಾರೆ. ಆದರೆ ಉಮೇಶ್ ರಾವ್ ಪ್ರಕರಣದಲ್ಲಿ ಬಂಧಿತರಾದ ಯಾರೊಬ್ಬರೂ ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ ಎಂದು ಅಲ್ಲಿನ ಪೊಲೀಸರು ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
The killing of a chemist in eastern Maharashtra’s Amravati city was related to social media posts supporting suspended BJP leader Nupur Sharma, police said on Saturday, 2 July, even as the case was handed over to the National Investigation Agency (NIA). The alleged master-mind of the killing was also arrested during the day, said a senior official. This was the seventh arrest in the case. The crime branch of Amravati city police arrested Irfan Khan (32), a local resident, from Nagpur in the evening.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm