ಬ್ರೇಕಿಂಗ್ ನ್ಯೂಸ್
05-07-22 09:53 pm Giridhar Shetty, Mangaluru ಕ್ರೈಂ
ಬಂಟ್ವಾಳ, ಜುಲೈ 5: ಮನುಷ್ಯ ಎಷ್ಟೆಂದರೂ ಭಾವಜೀವಿ. ಇದಕ್ಕಾಗಿಯೇ ತನ್ನ ಆಪ್ತರು, ನಂಬಿಕೊಂಡಿದ್ದ ಸಂಗಾತಿಗಳು ತಪ್ಪು ಮಾಡಿದರೆ, ಅರೆ ಕ್ಷಣದಲ್ಲಿ ಸಿಟ್ಟಿಗೆದ್ದು ಇನ್ನೇನೋ ಮಾಡಿಬಿಡುತ್ತಾನೆ. ಮೊನ್ನೆ ಮಾಣಿ ಸಮೀಪದ ನೇರಳಕಟ್ಟೆ ಹೆದ್ದಾರಿಯಲ್ಲಿ ನಲ್ವತ್ತರ ಆಸುಪಾಸಿನ ಮಹಿಳೆಯನ್ನು ನಡುಬೀದಿಯಲ್ಲೇ ಆಟೋ ಚಾಲಕ ಚೂರಿಯಿಂದ ತಿವಿದು ಬರ್ಬರವಾಗಿ ಕೊಲೆ ಮಾಡುವುದಕ್ಕೂ ಭಾವಜೀವಿಯೊಬ್ಬನ ಸಿಟ್ಟು ಮತ್ತು ಆಕೆಯ ಜೊತೆಗಿನ ಸೇಡು ಕಾರಣವಾಗಿತ್ತು ಅನ್ನೋದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಆಕೆಯ ಹೆಸರು ಶಕುಂತಳಾ. ವಿಟ್ಲ ಸಮೀಪದ ಅನಂತಾಡಿಯ ನಿವಾಸಿ. ಪುತ್ತೂರಿನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಈ ಮಹಿಳೆ ಮೊನ್ನೆ ಜೂ. 27ರಂದು ಸಂಜೆ ನಡುಬೀದಿಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದು ಸಾರ್ವಜಕರನ್ನು ಬೆಚ್ಚಿಬೀಳಿಸಿತ್ತು. ಸುದ್ದಿ ಕೇಳಿದ ಜನರಲ್ಲಿ ನಾನಾ ಪ್ರಶ್ನೆಗಳನ್ನೂ ಹುಟ್ಟು ಹಾಕಿತ್ತು. ಮದುವೆಯಾಗಿ ಇಬ್ಬರು ಮಕ್ಕಳು, ಸಂಸಾರ ಹೊಂದಿದ್ದ ಮಹಿಳೆಯನ್ನು ಹೆದ್ದಾರಿ ಮಧ್ಯೆ ಅಡ್ಡಗಟ್ಟಿ ಪರಿಚಯದವನೇ ಆಗಿದ್ದ ವ್ಯಕ್ತಿಯೊಬ್ಬ ಕುತ್ತಿಗೆ ಸೀಳಿ ಕೊಂದಿದ್ದಾನೆ ಅನ್ನುವುದನ್ನು ಯಾರು ಕೂಡ ಹಾಗೇ ನಂಬುವುದಕ್ಕೆ ತಯಾರಿರಲಿಲ್ಲ. ಇದರ ಹಿಂದೆ ಏನೋ ಕತೆ ಇರಬೇಕು ಅನ್ನೋ ಕುತೂಹಲವಂತೂ ಆವತ್ತೇ ಮನೆಮಾಡಿತ್ತು. ಪೊಲೀಸರು ಕೃತ್ಯ ನಡೆದ ದಿನವೇ ಸಂಜೆ ಆರೋಪಿ ಆಟೋ ಚಾಲಕ ಶ್ರೀಧರನನ್ನು ಹಿಡಿದು ಬಂಧಿಸುತ್ತಲೇ ಆತ ಅವರಿಬ್ಬರ ನಡುವಿನ ವರ್ಷಗಳ ನಂಟನ್ನು ಹೇಳಿಕೊಂಡಿದ್ದ.
ಶಕುಂತಳಾ ಮತ್ತು ಶ್ರೀಧರ ನಡುವೆ ಐದಾರು ವರ್ಷಗಳ ಹಿಂದಿನ ಸ್ನೇಹ. ವಿಟ್ಲದಲ್ಲಿ ಆಟೋ ಓಡಿಸುತ್ತಿದ್ದ ಅವಿವಾಹಿತ ಶ್ರೀಧರನ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ಆನಂತರ ಇಬ್ಬರ ನಡುವೆ ಆಚೆಗಿನ ಸಂಬಂಧಕ್ಕೂ ಹೊರಳಿತ್ತು. ಇದಕ್ಕೂ ಮೊದಲೇ ಶಕುಂತಲಾ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಅನಂತಾಡಿಯಲ್ಲಿ ಸಂಸಾರದಲ್ಲಿ ತೊಡಗಿದ್ದರೂ, ಶ್ರೀಧರನ ಸಖ್ಯ ಮಾತ್ರ ಮುಂದುವರಿದಿತ್ತು. ನಾಲ್ಕು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸಣ್ಣ ಕ್ಯಾಂಟೀನ್ ಆರಂಭಿಸುವುದಕ್ಕೆ ಮಹಿಳೆಗೆ ಶ್ರೀಧರನೇ ಹಣಕಾಸು ವ್ಯವಸ್ಥೆ ಮಾಡಿದ್ದ. ಆನಂತರ ದಿನವೂ ಆಕೆಯನ್ನು ಆಟೋದಲ್ಲಿ ವಿಟ್ಲದಿಂದ ಪುತ್ತೂರಿಗೆ ಬಿಟ್ಟು ಬರುವ ಕೆಲಸವನ್ನೂ ಮಾಡಿಕೊಂಡಿದ್ದ. ಆದರೆ ಒಂದು ವರ್ಷದ ಹಿಂದೆ ಶಕುಂತಳಾ ಸ್ವಂತಕ್ಕೆ ಸ್ಕೂಟರ್ ತೆಗೆದುಕೊಂಡು ತಾನೇ ಪುತ್ತೂರಿಗೆ ಹೋಗಿ ಬರಲು ಆರಂಭಿಸಿದ್ದಳು. ಇದೇ ಸಂದರ್ಭದಲ್ಲಿ ಕ್ಯಾಂಟೀನ್ ಪಕ್ಕದಲ್ಲಿ ಪಂಕ್ಚರ್ ಹಾಕುತ್ತಿದ್ದ ವ್ಯಕ್ತಿಯೂ ಆಕೆಗೆ ಹತ್ತಿರವಾಗಿದ್ದ. ಈ ವಿಷಯ ಆಟೋ ಚಾಲಕ ಶ್ರೀಧರನಿಗೆ ಗೊತ್ತಾಗಿತ್ತೋ ಏನೋ.. ವರ್ಷದ ಹಿಂದೆ ಆಕೆಯ ಕ್ಯಾಂಟೀನಿಗೆ ತೆರಳಿದ್ದಾಗ, ತನ್ನನ್ನು ನಿರ್ಲಕ್ಷ್ಯ ವಹಿಸಿದ್ದು ಯಾಕೋ ಸರಿ ಕಂಡಿರಲಿಲ್ಲ. ಬರ ಬರುತ್ತಾ ತನ್ನನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾಳೆ ಅನ್ನೋದು ಶ್ರೀಧರನಿಗೆ ತಿಳಿದು ಹೋಗಿತ್ತು. ಬದಲಿಗೆ, ಟೈರ್ ಅಂಗಡಿಯ ವ್ಯಕ್ತಿಯೊಬ್ಬ ತನ್ನ ಜಾಗವನ್ನು ತುಂಬಿದ್ದಾನೆ ಅನ್ನೋದೂ ಗೊತ್ತಾಗಿತ್ತು.
ಒಂದು ವರ್ಷದ ಹಿಂದೆ ಇದೇ ವಿಚಾರದಲ್ಲಿ ಶಕುಂತಳಾ ಮತ್ತು ಶ್ರೀಧರನ ನಡುವೆ ಜಗಳ ನಡೆದಿತ್ತು. ಆನಂತರ, ಶಕುಂತಳಾ ವಿಟ್ಲ ಠಾಣೆಗೆ ಹೋಗಿ ಶ್ರೀಧರ ತನ್ನ ಕ್ಯಾಂಟೀನಿಗೆ ಬಂದು ಗುರಾಯಿಸುತ್ತಾನೆ, ತನಗೆ ಹೆದರಿಕೆ ಆಗುತ್ತದೆ ಎಂದು ಹೇಳಿ ದೂರು ಕೊಟ್ಟಿದ್ದಳು. ಪೊಲೀಸರು ಶ್ರೀಧರನನ್ನು ಠಾಣೆಗೆ ಕರೆಸಿ ಎರಡು ದಿನ ಇಟ್ಟುಕೊಂಡು ಬಸ್ಕಿ ತೆಗೆಸಿದ್ದೂ ಆಗಿತ್ತು. ಇದರಿಂದ ಮತ್ತಷ್ಟು ಕ್ರುದ್ಧನಾಗಿದ್ದ ಶ್ರೀಧರ ತನ್ನಷ್ಟಕ್ಕೇ ಮಾನಸಿಕವಾಗಿ ನೊಂದುಕೊಂಡಿದ್ದ. ಏನೇ ಆದರೂ, ಆಕೆಯ ನೆನಪ ಕಾಲ ಕಳೆಯುತ್ತಿದ್ದ ಶ್ರೀಧರ ಮೊನ್ನೆ ಜೂನ್ 27ರಂದು ಪುತ್ತೂರಿನಲ್ಲಿರುವ ಕ್ಯಾಂಟೀನಿಗೆ ಹೋಗಿದ್ದ. ಅಲ್ಲಿ ಶಕುಂತಳಾ ಇರಲಿಲ್ಲ. ತಂಗಿಯಷ್ಟೇ ಇದ್ದಳು. ಅಕ್ಕ ಎಲ್ಲಿದ್ದಾರೆ ಎಂದು ಕೇಳಿದ್ದಕ್ಕೆ, ಮನೆಗೆ ಹೋಗಿದ್ದಾರೆ ಅಂತಾ ತಂಗಿ ಹೇಳಿದ್ದಳು. ನೇರವಾಗಿ ಬಂದವನೇ ಟೈರ್ ಪಂಕ್ಚರ್ ಅಂಗಡಿಯನ್ನು ಗಮನಿಸಿದ್ದಾನೆ. ಅಲ್ಲಿ ಶಟರ್ ಹಾಕಿದ್ದನ್ನು ನೋಡುತ್ತಲೇ ಮನಸ್ಸಿನಲ್ಲಿ ಹಳೆಯದೆಲ್ಲ ಕಣ್ಣಿನ ಪಟಲಕ್ಕೆ ಬಂದು ಹೋಗಿತ್ತು. ತನ್ನ ಜಾಗಕ್ಕೆ ಹೊಸಬ ಬಂದಿದ್ದಾನೆ ಅಂದ್ಕೊಂಡು ಇವತ್ತೊಂದು ಗತಿ ಕಾಣಿಸಲೇಬೇಕೆಂದು ನಿರ್ಧಾರಕ್ಕೆ ಬಂದಿದ್ದ ಶ್ರೀಧರ, ಅಲ್ಲಿಂದಲೇ ಅಂಗಡಿಯಿಂದ ಹೊಸ ಚೂರಿ ಒಂದನ್ನು ಖರೀದಿಸಿ ಜೊತೆಗಿಟ್ಟುಕೊಂಡು ಆಟೋವನ್ನು ನೇರವಾಗಿ ಅನಂತಾಡಿ ಕಡೆಗೆ ತಿರುಗಿಸಿದ್ದ.
ಅನಂತಾಡಿಯ ಎಸ್ಸಿ ಕಾಲನಿಯ ಮೂಲೆಯಲ್ಲಿ ಶಕುಂತಳಾ ಮನೆ ಇತ್ತು. ಮನೆಯಲ್ಲಿ ಅವರಿಬ್ಬರು ಇದ್ದಾರೆ ಅನ್ಕೊಂಡಿದ್ದ ಶ್ರೀಧರ, ಸಿಟ್ಟು ಮತ್ತು ಸೇಡು ತೀರಿಸಲು ತುಸು ದೂರದಲ್ಲಿ ಆಟೋ ನಿಲ್ಲಿಸಿ ಕಾದು ಕುಳಿತಿದ್ದ. ಸ್ವಲ್ಪ ಹೊತ್ತಲ್ಲಿ ಶಕುಂತಳಾ ತನ್ನ ಸ್ಕೂಟಿಯಲ್ಲಿ ಹೊರಟು ಬರುತ್ತಿದ್ದುದು ಕಂಡುಬಂದಿತ್ತು. ಸ್ಕೂಟರ್ ಹೋಗುತ್ತಲೇ ಆಟೋದಲ್ಲಿ ಆಕೆಯನ್ನು ಹಿಂಬಾಲಿಸಿದ್ದ ಶ್ರೀಧರ, ನೇರಳಕಟ್ಟೆ ಹೆದ್ದಾರಿ ಮಧ್ಯೆ ಅಡ್ಡಗಟ್ಟಿ ಮತ್ತೆ ಜಗಳ ಶುರು ಹಚ್ಚಿದ್ದಾನೆ. ಅಷ್ಟೇ ಅಲ್ಲ, ಕೈಯಲ್ಲಿದ್ದ ಚೂರಿಯಿಂದ ಆಕೆ ಸ್ಕೂಟರಲ್ಲಿ ಕುಳಿತಿದ್ದಲ್ಲಿಗೇ ಹೋಗಿ ಕುತ್ತಿಗೆಯ ಭಾಗಕ್ಕೆ ಚುಚ್ಚಿದ್ದಾನೆ. ಕುತ್ತಿಗೆಯ ನರಗಳು ಸೀಳಿದ್ದರಿಂದ ಶಕುಂತಳಾ ಅಲ್ಲಿಯೇ ನೆಲಕ್ಕುರುಳಿದ್ದಾಳೆ. ಇತ್ತ ಶ್ರೀಧರ, ನಡು ರಸ್ತೆಯಲ್ಲೇ ಮಹಿಳೆಯ ಮೇಲೆ ಕೈಮಾಡಿದ್ದನ್ನು ದೂರದಿಂದಲೇ ಬಸ್ ಚಾಲಕನೊಬ್ಬ ಗಮನಿಸಿದ್ದ. ಕೆಲವೇ ಕ್ಷಣದಲ್ಲಿ ಶ್ರೀಧರನೂ ತನ್ನ ಆಟೋದಲ್ಲಿ ರಿವರ್ಸ್ ತೆಗೆದು ಚಲಾಯಿಸಿದ್ದ. ಬಸ್ ಚಾಲಕ ತನ್ನ ಮೊಬೈಲಿನಲ್ಲಿ ಮುಂದಿನಿಂದ ತೆರಳುತ್ತಿದ್ದ ಆಟೋದ ವಿಡಿಯೋ ಮಾಡಿದ್ದು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.
ಆರೋಪಿ ಶ್ರೀಧರ ಆಟೋವನ್ನು ವೇಗವಾಗಿ ಓಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ಆನಂತರ, ಉಪ್ಪಿನಂಗಡಿ, ಗುಂಡ್ಯ ಮೂಲಕ ಚಾರ್ಮಾಡಿಯತ್ತ ತೆರಳಿದ್ದಾನೆ. ಅಷ್ಟರಲ್ಲಿ ಪೊಲೀಸರು ಆತನನ್ನು ಟ್ರೇಸ್ ಮಾಡಿದ್ದು, ಚಾರ್ಮಾಡಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ಚಾರ್ಮಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ತೆರಳುತ್ತಿದ್ದುದಾಗಿ ಶ್ರೀಧರ್ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ, ಒಟ್ಟು ಕೃತ್ಯದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾನೆ. ತನ್ನ ಜೊತೆಗಿನ ಆಕೆಯ ಸಂಬಂಧ ಮತ್ತು ಹಣಕಾಸು ನೆರವು ಎಲ್ಲವನ್ನೂ ಹೇಳಿಕೊಂಡಿದ್ದಾನೆ. ಇಷ್ಟಾಗುತ್ತಿದ್ದಂತೆ ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ಟೈರ್ ಪಂಕ್ಚರ್ ಹಾಕುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ವಿಟ್ಲ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆಯಲು ತೆರಳಿದ್ದಾಗ, ಮನೆಯನ್ನೇ ಬಿಟ್ಟು ಎಸ್ಕೇಪ್ ಆಗಿರುವುದು ತಿಳಿದುಬಂದಿದೆ. ಒಟ್ಟಿನಲ್ಲಿ ಮಹಿಳೆಯ ತ್ರಿಕೋನ ಸಂಬಂಧ ನಡುಬೀದಿಯಲ್ಲಿ ಆಕೆಯ ಪ್ರಾಣವನ್ನೇ ಕಸಿದು ಬಿಟ್ಟಿದ್ದರೆ, ಇದ್ಯಾವುದನ್ನೂ ಅರಿಯದ ಆಕೆಯ ಇಬ್ಬರು ಪುಟಾಣಿ ಮಕ್ಕಳು ಹೆತ್ತಮ್ಮನಿಲ್ಲದೆ ಅನಾಥರಾಗಿದ್ದಾರೆ.
Puttur married woman murder gets big twist, triangle love of woman was the reason for the murder reveals accused Auto Driver during investigation. It may be recalled that Sridhar had fished out a knife at Shakuntala at the Neralakatte junction of Netlamudnooru village on Monday when she was on her way towards Puttur on her two-wheeler. Sridhar was engaged in a conversation with the woman resulting in a verbal spat between the two when Sridhar stabbed Shakuntala fiercely
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm