ಮಂಗಳೂರಿನಲ್ಲಿ ಗಾಂಜಾ ಸೇವನೆ, ಮಾರಾಟ ಮಾಡುತ್ತಿದ್ದ ಕೇರಳ ಮೂಲದ 12 ವಿದ್ಯಾರ್ಥಿಗಳ ಬಂಧನ  

09-07-22 04:50 pm       Mangalore Correspondent   ಕ್ರೈಂ

ಗಾಂಜಾ ಸೇವಿಸುತ್ತಿದ್ದುದಲ್ಲದೆ, ಇತರೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ 12 ಮಂದಿ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಜುಲೈ 9: ಗಾಂಜಾ ಸೇವಿಸುತ್ತಿದ್ದುದಲ್ಲದೆ, ಇತರೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ 12 ಮಂದಿ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ವೆಲೆನ್ಸಿಯಾದ ಸೂಟರ್ ಪೇಟೆಯ ವಸತಿ ಗೃಹಕ್ಕೆ ದಾಳಿ ನಡೆಸಿದ ಪೊಲೀಸರು ಗಾಂಜಾ ಸಹಿತ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಕಣ್ಣೂರು ಜಿಲ್ಲೆ ಪಯಂಗಡಿ ನಿವಾಸಿ ಶಾನೂಫ್ ಅಬ್ದುಲ್ ಗಫೂರ್(21), ಮೊಹಮ್ಮದ್ ರಫೀಸ್(22), ಗುರುವಾಯೂರು ನಿವಾಸಿ ಗೋಕುಲಕೃಷ್ಣನ್(22), ಕಾಸರಗೋಡು ಹೊಸದುರ್ಗ ತೈಯಂಗಾಲ್ ನಿವಾಸಿ ಶಾರೂನ್ ಆನಂದ್(19), ಪಾಣತ್ತೂರು ನಿವಾಸಿ ಅನಂತು ಕೆಪಿ(18), ಪಾಪಿನಾಶ್ಶೇರಿ ನಿವಾಸಿ ಅಮಲ್(21), ಅಭಿಷೇಕ್(21), ಕಣ್ಣೂರು ಇರಿಟ್ಟಿ ನಿವಾಸಿ ನಿದಾಲ್ (21), ತ್ರಿಕರಿಪುರ ನಿವಾಸಿ ಶಾಹೀದ್ ಎಂ.ಟಿ.(22), ಕಲೂರು ಕೊಚ್ಚಿಯ ಫಹಾದ್ ಹಬೀಬ್(22), ಕಣ್ಣೂರು ಪಯಂಗಾಡಿ ಮೊಹಮ್ಮದ್ ರಿಶಿನ್(22), ಕೋಜಿಕ್ಕೋಡ್ ಮುಕ್ಕಂ ನಿವಾಸಿ ರಿಜಿನ್ ರಿಯಾಜ್ (22) ಬಂಧಿತರು. ಇವರು ಮಂಗಳೂರಿನ ವೆಲೆನ್ಸಿಯಾ, ಅತ್ತಾವರ, ಶಿವಭಾಗ್, ಕೊಡಿಯಾಲ್ ಬೈಲಿನಲ್ಲಿ ಪ್ರತ್ಯೇಕ ಫ್ಲಾಟ್ ಗಳಲ್ಲಿ ವಾಸವಿದ್ದರು.

ಆರೋಪಿಗಳ ಬಳಿಯಿಂದ 900 ಗ್ರಾಮ್ ತೂಕದ 20 ಸಾವಿರ ಮೌಲ್ಯದ ಗಾಂಜಾ, ಗಾಂಜಾ ಸೇದುವ ಸ್ಮೋಕಿಂಗ್ ಪೈಪ್, ರೋಲಿಂಗ್ ಪೇಪರ್, 4500 ರೂ. ನಗದು, 11 ಮೊಬೈಲ್ ಫೋನ್, ಡಿಜಿಟಲ್ ತೂಕದ ಮಾಪನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೊತ್ತಿನ ಒಟ್ಟು ಮೌಲ್ಯ 2.85 ಲಕ್ಷ ಆಗಬಹುದೆಂದು ತಿಳಿಸಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, 11 ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ಪೈಕಿ 9 ಮಂದಿ ಯೇನಪೋಯ ಕಾಲೇಜಿನಲ್ಲಿ ಬಿಬಿಎ, ಬಿಸಿಎ, ಫಾರೆನ್ಸಿಕ್ ಸೈನ್ಸ್ ಮತ್ತು ಓರ್ವ ಬಿಬಿಎ ಪದವಿ ಕಲಿಯುತ್ತಿದ್ದಾರೆ. ಮೂರು ಮಂದಿ ಇಂದಿರಾ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದು ಒಬ್ಬ ನರ್ಸಿಂಗ್, ರೇಡಿಯೋಲಜಿ ಹಾಗೂ ಇನ್ನೋರ್ವ ಅಲೈಡ್ ಸೈನ್ಸಸ್ ಪದವಿ ವ್ಯಾಸಂಗ ಮಾಡುತ್ತಿದ್ದರು.

City crime branch (CCB) police arrested 12 students for possessing ganja. They were supplying ganja to the public and students in the city. Acting on a tip-off that students are supplying ganja to college students and to the public, CCB inspector Mahesh Prasad and police sub-inspector Rajendra B and their team nabbed the students from an apartment at Sooterpete in Valencia.