ಬ್ರೇಕಿಂಗ್ ನ್ಯೂಸ್
11-07-22 08:46 pm Mangaluru Correspondent ಕ್ರೈಂ
ಮಂಗಳೂರು, ಜುಲೈ 11: ಮಂಗಳೂರಿನಲ್ಲಿ ಇಸ್ಪೀಟ್ ಕ್ಲಬ್ ನಡೆಸೋದು, ಕ್ಲಬ್ ನೆಪದಲ್ಲಿ ಜೂಜಾಡುವುದು, ಅದರ ಲೆಕ್ಕದಲ್ಲಿ ಪೊಲೀಸರಿಗೆ ಮಾಮೂಲಿ ಕೊಡುವುದು ಇತ್ಯಾದಿ ಎಲ್ಲ ಮಾಮೂಲಿಯೇ ಆಗಿತ್ತು. ಆದರೆ, ಹೊಸತೇನಂದ್ರೆ, ಇದೇ ರಿಕ್ರಿಯೇಶನ್ ಕ್ಲಬ್ ಗಳಲ್ಲಿ ನಿಷೇಧಿತ ಮಟ್ಕಾ ದಂಧೆಯೂ ನಡೀತಿದೆ ಅನ್ನೋದು. ಅಷ್ಟೇ ಅಲ್ಲ, ಈ ಮಟ್ಕಾ ದಂಧೆಯಲ್ಲಿ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳೇ ತೊಡಗಿಸಿಕೊಂಡಿದ್ದಾರೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು 18 ಕಡೆ ರಿಕ್ರಿಯೇಶನ್ ಕ್ಲಬ್ ಗಳಿವೆ. ಎಲ್ಲ ಕಡೆಯೂ ಮಟ್ಕಾ ದಂಧೆ ಆಗ್ತಿದೆ ಅನ್ನೋದನ್ನು ಹೇಳಕ್ಕಾಗಲ್ಲ. ಆದರೆ, ಅಲ್ಲೆಲ್ಲಾ ಅಂದರ್ ಬಾಹರ್ ಇನ್ನಿತರ ಜೂಜಾಟವಂತೂ ನಿರಂತರ ಇರುತ್ತದೆ. ಮಂಗಳೂರು ನಗರದ ಒಳಗಿರುವ ಹಲವು ಕ್ಲಬ್ ಗಳಲ್ಲೀಗ ಮಟ್ಕಾ ದಂಧೆ ದಿನದ 24 ಗಂಟೆಯೂ ನಡೀತಿದ್ಯಂತೆ. ಹಂಪನಕಟ್ಟೆ, ಬಿಜೈ, ಕಂಕನಾಡಿ, ಫಳ್ನೀರ್, ಜ್ಯೋತಿ ಹೀಗೆ ಎಲ್ಲ ಕಡೆಯೂ ರಾತ್ರಿ- ಹಗಲೆನ್ನದೆ ಮಟ್ಕಾ ಆಟ ಆಡಲಾಗುತ್ತಿದೆ ಅನ್ನೋ ವಿಚಾರವನ್ನು ಮಂಗಳೂರಿನ ಯೂತ್ ಕಾಂಗ್ರೆಸ್ ಘಟಕದ ನಾಯಕರು ಹೆಡ್ ಲೈನ್ ಕರ್ನಾಟಕ ಗಮನಕ್ಕೆ ತಂದಿದ್ದಾರೆ.
ಕಳೆದ ಐದಾರು ತಿಂಗಳಿಂದಲೂ ಮಟ್ಕಾ ದಂಧೆ ನಡೀತಿದ್ದರೂ, ಹೊಸ ಬೆಳವಣಿಗೆಯಲ್ಲಿ ಕಾಲೇಜು ಹುಡುಗರು ರಾತ್ರಿ- ಹಗಲು ಅಲ್ಲಿನ ಗಿರಾಕಿಗಳಾಗಿದ್ದಾರೆ. ಪ್ರಮುಖವಾಗಿ ಕೇರಳದಿಂದ ಬಂದು ಮಂಗಳೂರಿನಲ್ಲಿ ಉಳ್ಕೊಂಡಿರುವ ಕಾಲೇಜು ವಿದ್ಯಾರ್ಥಿಗಳು ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಂಗಳೂರಿನ ಸ್ಥಳೀಯ ವಿದ್ಯಾರ್ಥಿಗಳನ್ನೂ ಹಣದಾಸೆ ತೋರಿಸಿ ಮಟ್ಕಾ ದಂಧೆಗೆ ಕರೆತರುತ್ತಿದ್ದಾರೆ. ಇಂತಿಷ್ಟು ವಿದ್ಯಾರ್ಥಿಗಳನ್ನು ದಂಧೆಗೆ ತಂದು ತೊಡಗಿಸಿದರೆ, ಆ ವಿದ್ಯಾರ್ಥಿಗೆ ಇಂತಿಷ್ಟು ಗಿಂಬಳವನ್ನು ಕೊಡುತ್ತಿದ್ದಾರಂತೆ. ವಿದ್ಯಾರ್ಥಿಗಳನ್ನು ಕರೆತರುವುದಕ್ಕೇ ಮಂಗಳೂರಿನಲ್ಲಿ ಕೆಲವು ಏಜಂಟರಿದ್ದಾರೆ. ಆ ಏಜಂಟರು ವಿದ್ಯಾರ್ಥಿಗಳೇ ಆಗಿದ್ದಾರೆ ಅನ್ನೋದು ಶೋಚನೀಯ ಸಂಗತಿ. ಎಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಏಜಂಟರಿದ್ದಾರೆ ಅನ್ನುವ ವಿಚಾರವನ್ನು ಯೂತ್ ಕಾಂಗ್ರೆಸ್ ನಾಯಕರು ಹೇಳುತ್ತಾರೆ.
ಮಟ್ಕಾ ದಂಧೆ ಪೂರ್ತಿ ನಿಷೇಧಿತ ಚಟುವಟಿಕೆ. ಕೇರಳದ ಕಾಸರಗೋಡು ಸೇರಿದಂತೆ ಅಲ್ಲಿನ ಹಲವು ಜಿಲ್ಲೆಗಳಲ್ಲಿ ಲಾಟರಿಯಂತೆ ಮಟ್ಕಾನೂ ಭರಪೂರ ನಡೀತಿದೆ. ಬೆಳಗ್ಗೆ ಸಿಂಗಲ್ ನಂಬರ್, ಡಬಲ್ ನಂಬರ್ ಎಂದು ಹಣ ಹೂಡಿಕೆ ಮಾಡಿದರೆ, ಸಂಜೆಯ ವೇಳೆಗೆ ಲಾಟರಿ ನಂಬರ್ ಬಿಡುಗಡೆಯಾಗುತ್ತದೆ. ನಂಬರ್ ಮೇಲೆ ಎಷ್ಟು ಹಣ ಹೂಡಿಕೆ ಮಾಡಿರುತ್ತಾರೋ ಅದರ ಹತ್ತು ಪಟ್ಟು ಹಣ ಸಿಗುತ್ತದೆ ಎನ್ನಲಾಗುತ್ತದೆ. ಅದೇ ಮಾದರಿಯ ಮಟ್ಕಾ ದಂಧೆಯನ್ನು ಕೇರಳದ ವ್ಯಕ್ತಿಯೊಬ್ಬ ಮಂಗಳೂರಿನಲ್ಲಿ ನಡೆಸುತ್ತಿದ್ದಾನೆ ಅನ್ನೋ ಮಾತು ಕೇಳಿಬರುತ್ತಿದೆ. ಮಂಗಳೂರಿನಲ್ಲಿಯೂ ಹಣ ತೊಡಗಿಸಿದವರ ವಾಟ್ಸಪ್ ಗ್ರೂಪ್ ಇದ್ದು, ಬೆಳಗ್ಗೆ ಕಲೆಕ್ಷನ್ ಆಗುತ್ತದೆ, ಸಂಜೆಯ ಹೊತ್ತಿಗೆ ಲಾಟರಿ ನಂಬರನ್ನು ವಾಟ್ಸಪ್ ಗ್ರೂಪ್ ಗಳಲ್ಲಿಯೇ ರವಾನಿಸಲಾಗುತ್ತದೆ. ಗೆದ್ದ ಒಂದಿಬ್ಬರಿಗೆ ಭರಪೂರ ಲಾಭ ಸಿಕ್ಕಿದರೆ, ಉಳಿದವರೆಲ್ಲ ಭಾರೀ ದೊಡ್ಡ ಮಟ್ಟದಲ್ಲಿ ಹಣ ಕಳಕೊಳ್ಳುತ್ತಾರೆ. ಮನೆಯಲ್ಲಿ ಸಿರಿವಂತಿಕೆ ಇರುವ ಕಾಲೇಜು ವಿದ್ಯಾರ್ಥಿಗಳು ಒಂದೆರಡು ತಿಂಗಳಲ್ಲಿ 50-60 ಸಾವಿರ ಹಣ ಕಳಕೊಂಡಿದ್ದಾರಂತೆ.
ಮಂಗಳೂರಿನಲ್ಲಿ ವಿದ್ಯಾರ್ಥಿಗಳೇ ಈ ದಂಧೆಯಲ್ಲಿ ಹೆಚ್ಚು ತೊಡಗಿಸಿದ್ದಾರೆ ಅನ್ನೋದು ತಂಡವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಕಂಡುಬಂದಿದೆ. ಅಕ್ರಮ ಇಸ್ಪೀಟ್ ಕ್ಲಬ್ ಗಳನ್ನು ರಾಜಾರೋಷವಾಗಿ ನಡೆಸುತ್ತಿರುವ ಬಗ್ಗೆ ಈಗಾಗಲೇ ಹಲವರು ಸಾಮಾಜಿಕ ಜಾಲತಾಣದಲ್ಲಿ ದನಿಯೆತ್ತಿದ್ದಾರೆ. ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಪಕ್ಷ ರಹಿತರು ಕೂಡ ದನಿಯೆತ್ತಿದ್ದಾರೆ. ಆದರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದವರು ಮೌನ ವಹಿಸಿದ್ದಾರೆ. ಮಂಗಳೂರಿನಲ್ಲಿ ಆಡಳಿತ ಪಕ್ಷದ ನಾಯಕರೇ ಇಸ್ಪೀಟ್ ದಂಧೆಯ ಹಿಂದಿದ್ದಾರೆ, ಆತನೇ ಕಿಂಗ್ ಪಿನ್ ಅನ್ನುವ ಆರೋಪವನ್ನೂ ಮಾಡುತ್ತಿದ್ದಾರೆ. ಮಟ್ಕಾ ದಂಧೆಯಲ್ಲೂ ಮಾಮೂಲಿ ಪಡೆದು ಬಡವರ ಮಕ್ಕಳು, ಕಾಲೇಜು ಕಲಿಯುವ ವಿದ್ಯಾರ್ಥಿಗಳು ಬೀದಿ ಪಾಲಾದರೆ ಅದಕ್ಕೆ ಇಲ್ಲಿನ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯೇ ಹೊಣೆಯಾಗಬೇಕಾಗುತ್ತದೆ.
ನಿಜಕ್ಕಾದರೆ, ರಿಕ್ರಿಯೇಶನ್ ಕ್ಲಬ್ ಗಳಲ್ಲಿ ಸದಸ್ಯರಿಗೆ ಮಾತ್ರ ಪ್ರವೇಶ ಇರುತ್ತದೆ. ಸದಸ್ಯರಾಗಿ ತೋರಿಸೋದು, ಕೇವಲ ಏಳು ಅಥವಾ ಒಂಬತ್ತು ಮಂದಿಯನ್ನು ಮಾತ್ರ. ಜಿಲ್ಲಾಡಳಿತದ ಅನುಮತಿ ಪತ್ರದಲ್ಲೇ ಸದಸ್ಯರು ಮಾತ್ರ ಮನರಂಜನೆಗಾಗಿ ಆಡುವ ಕ್ಲಬ್ ಅನ್ನುವ ಹೊಣೆ ಪಟ್ಟಿಯನ್ನು ತೋರಿಸಲಾಗುತ್ತದೆ. ಆದರೆ ಇದು ನೆಪಕ್ಕಷ್ಟೇ. ಕ್ಲಬ್ ನಡೆಸೋದಕ್ಕೆ ಸರಕಾರಿ ನಿಮಯದ ಪ್ರಕಾರ ಇಂತಿಷ್ಟು ತೆರಿಗೆಯನ್ನೂ ಕಟ್ಟಲಾಗುತ್ತದೆ. ಆದರೆ, ಹೀಗೆ ವಿಧಿಸುವ ತೆರಿಗೆಯೇ ಅತ್ಯಂತ ಕನಿಷ್ಠ ಜುಜುಬಿ. ಬದಲಿಗೆ ಬೇರೆ ಬೇರೆ ವಿಭಾಗಕ್ಕೆ ಕ್ಲಬ್ ಪರವಾಗಿ ನೀಡಲಾಗುವ ಮಾಮೂಲಿಯೇ ಲಕ್ಷ ಲಕ್ಷದ್ದು. ಮಂಗಳೂರಿನ ಮಟ್ಟಿಗೆ ರಿಕ್ರಿಯೇಶನ್ ಕ್ಲಬ್ ಅಂದ್ರೆ ಸಾರ್ವಜನಿಕರು ಹಳ್ಳಿ ಕಟ್ಟೆಯಲ್ಲಿ ಲಂಗು ಲಗಾಮಿಲ್ಲದೆ ಕುಡಿದು ತೂರಾಡುತ್ತಾ ಹಣವನ್ನು ಪಣಕ್ಕಿಟ್ಟು ಆಡೋ ಆಟ ಅನ್ನುವಂತಾಗಿದೆ. ಇಲ್ಲಿ ಜೂಜಾಡುವುದಕ್ಕೂ ಹಳ್ಳಿ ಮಂದಿ ಕೋಳಿ ಅಂಕ ಹೆಸರಲ್ಲಿ ಜೂಜಾಡುವುದಕ್ಕೂ ಯಾವುದೇ ವ್ಯತ್ಯಾಸ ಇರಲ್ಲ.
Matka gambling rises high in Mangalore, college students appointed as agents, innocents looted. Many students from various college in city are brain washed and are made to gamble. Police who know the whereabouts are quite as many ruling party members themselves are involved in it.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 02:25 pm
Mangaluru Correspondent
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm