ಬ್ರೇಕಿಂಗ್ ನ್ಯೂಸ್
13-07-22 09:12 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 13: ತನ್ನ ಪತ್ನಿಯನ್ನು ರೇಪ್ ಮಾಡಿದ್ದಲ್ಲದೆ, ವಿಡಿಯೋ ಮಾಡಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಆಕೆಯ ಗಂಡನೇ ಕೊಂದು ಸಿಮೆಂಟ್ ಚೀಲದಲ್ಲಿ ತುಂಬಿಸಿ ಕಸದ ತೊಟ್ಟಿಗೆಸೆದು ಪತ್ನಿಯೊಂದಿಗೆ ಮಂಗಳೂರಿನಲ್ಲಿ ಅಡಗಿಕೊಂಡಿದ್ದಾತನನ್ನು ಕಾಡುಗೋಡಿ ಪೊಲೀಸರು ಸದ್ದಿಲ್ಲದೆ ಬಂಧಿಸಿದ್ದಾರೆ.
ಜುಲೈ 5ರಂದು ಕಾಡುಗೋಡಿ ಠಾಣೆ ವ್ಯಾಪ್ತಿಯ ಬೆಳತ್ತೂರಿನ ಕಸದ ತೊಟ್ಟಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿದ್ದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಬಿಹಾರ ಮೂಲದ ವ್ಯಕ್ತಿ ಓಮನಾಥ್ ಸಿಂಗ್ (48) ಎನ್ನುವುದು ಪತ್ತೆಯಾಗಿತ್ತು. ಗುಟ್ಕಾ ವ್ಯಾಪಾರಿಯಾಗಿದ್ದ ಓಮನಾಥ್ ಸಿಂಗ್ ನನ್ನು ಕುತ್ತಿಗೆ ಹಿಸುಕಿ ಕೊಲೆಗೈದು ಗೋಣಿ ಚೀಲದಲ್ಲಿ ಎಸೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.
ಆನಂತರ ಪೊಲೀಸರು ಮೊಬೈಲ್ ನಂಬರ್ ಜಾಡು ಹಿಡಿದು ತನಿಖೆ ನಡೆಸಿದಾಗ, ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕುಟುಂಬ ಅಕ್ಕ ಪಕ್ಕದಲ್ಲಿ ವಾಸ ಇದ್ದುದು ಕಂಡುಬಂದಿತ್ತು. ಓಮನಾಥ್ ಸಿಂಗ್ ಮತ್ತು ವಿಶಾಲ್ ಪ್ರಜಾಪತಿ ನಡುವೆ ಸಂಪರ್ಕ ಇರುವುದೂ ತಿಳಿದುಬಂದಿತ್ತು. ವಿಶಾಲ್ ಪ್ರಜಾಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲು ಮುಂದಾದಾಗ, ಆತ ನಾಪತ್ತೆಯಾಗಿದ್ದ. ಮೊಬೈಲ್ ಲೊಕೇಶನ್ ಆಧರಿಸಿ ಹುಡುಕಾಟ ನಡೆಸಿದಾಗ, ವಿಶಾಲ್ ಮತ್ತು ಆತನ ಪತ್ನಿ ರೂಬಿ ಮಂಗಳೂರಿನಲ್ಲಿ ಅಡಗಿರುವುದು ಪತ್ತೆಯಾಗಿತ್ತು. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರೇಪ್, ಬ್ಲಾಕ್ಮೇಲ್ ಮತ್ತು ಕೊಲೆ ನಡೆಸಿರುವ ವಿಚಾರ ತಿಳಿದುಬಂದಿತ್ತು.
ಓಮನಾಥ್ ಸಿಂಗ್, ಬೆಂಗಳೂರಿನಲ್ಲಿ ಗುಟ್ಕಾ ವ್ಯಾಪಾರಿಗಳಿಗೆ ಸಾಮಗ್ರಿಗಳನ್ನು ಪೂರೈಸುವ ವ್ಯವಹಾರ ಮಾಡುತ್ತಿದ್ದ. ಸಾಕಷ್ಟು ಹಣದ ಚಲಾವಣೆ ಇತ್ತು. ಬೆಳತ್ತೂರಿನಲ್ಲಿ ವಿಶಾಲ್ ಮತ್ತು ಓಮನಾಥ್ ಸಿಂಗ್ ಕುಟುಂಬದ ಮನೆ ಇದ್ದು ಇಬ್ಬರೂ ಪರಿಚಯ ಹೊಂದಿದ್ದರು. ಈ ನಡುವೆ, ಓಮನಾಥ್ ಸಿಂಗ್ ಬಳಿಯಿಂದ ವಿಶಾಲ್ ಆರು ಲಕ್ಷ ರೂಪಾಯಿ ಹಣ ಸಾಲ ಪಡೆದುಕೊಂಡಿದ್ದ. ವಿಶಾಲ್ ಟೈಲ್ಸ್ ವರ್ಕ್ ಮಾಡುತ್ತಿದ್ದುದರಿಂದ ಬೇರೆ ಬೇರೆ ಕಡೆ ತೆರಳಿ ಅಲ್ಲಿಯೇ ಇದ್ದುಕೊಂಡಿದ್ದರಿಂದ ಮನೆಯಲ್ಲಿ ಆತನ ಪತ್ನಿ ಒಬ್ಬಂಟಿಯಾಗೇ ಇದ್ದಳು. ಇದರ ಬಗ್ಗೆ ತಿಳಿದ ಓಮನಾಥ್ ಸಿಂಗ್, ಆತನಿಲ್ಲದ ವೇಳೆ ಮನೆಗೆ ತೆರಳಿ 23 ವರ್ಷದ ರೂಬಿಯನ್ನು ಅತ್ಯಾಚಾರ ಮಾಡಿದ್ದ. ಅಲ್ಲದೆ, ಅತ್ಯಾಚಾರ ನಡೆಸಿದ್ದ ವಿಡಿಯೋವನ್ನು ತನ್ನ ಮೊಬೈಲಲ್ಲಿ ಚಿತ್ರೀಕರಿಸಿ, ಅದೇ ವಿಡಿಯೋ ಮುಂದಿಟ್ಟು ಮತ್ತೆ ಮತ್ತೆ ಬಲಾತ್ಕಾರ ಮಾಡುತ್ತಿದ್ದ.
ಇತ್ತೀಚೆಗೆ ತನ್ನ ಪತ್ನಿಯ ಜೊತೆಗೆ ಓಮನಾಥ್ ಸಿಂಗ್ ಏನೋ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ವಿಶಾಲ್ ಗೆ ಶಂಕೆ ಮೂಡಿತ್ತು. ವಿಶಾಲ್ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ, ನಿಜ ವಿಚಾರ ಹೇಳುವಂತೆ ಪೀಡಿಸಿದ್ದಾನೆ. ರೂಬಿ ನಡೆದಿರುವ ವಿಚಾರವನ್ನು ಹೇಳಿದ್ದಾಳೆ. ಇದರಿಂದ ವಿಶಾಲ್ ಕೆರಳಿದ್ದಲ್ಲದೆ, ಆರು ಲಕ್ಷ ಹಣದ ಸಾಲಕ್ಕಾಗಿ ತನ್ನನ್ನೂ ಪೀಡಿಸುತ್ತಿದ್ದ ಓಮನಾಥ್ ಸಿಂಗ್ ಗೆ ಗತಿ ಕಾಣಿಸಬೇಕೆಂದು ಸಂಚು ಹೂಡಿದ್ದ. ಒಂದು ದಿನ ತನ್ನ ಮನೆಗೆ ಬಂದಿದ್ದ ಓಮನಾಥ್ ಸಿಂಗನ್ನು ಕುತ್ತಿಗೆ ಹಿಸುಕಿ ಕೊಂದು ಹಾಕಿದ್ದ. ಬಳಿಕ ಗೋಣಿ ಚೀಲದಲ್ಲಿ ಕಟ್ಟಿ ಕಸದ ತೊಟ್ಟಿಗೆ ಎಸೆದು ಬಂದಿದ್ದರು. ಇವರ ನಡುವೆ ಜಗಳವಾಗಿ ಕೊಲೆ ಮಾಡಿದ್ದು ಓಮನಾಥ್ ಸಿಂಗ್ ಪತ್ನಿ ಗುಂಜಾ ದೇವಿಗೂ ತಿಳಿದಿತ್ತು. ಆದರೆ, ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದ. ಹಾಗಾಗಿ ಗುಂಜಾ ದೇವಿ ಏನೂ ತಿಳಿಯದಂತೆ ತನ್ನ ಮನೆಯಲ್ಲೇ ಬಾಯಿಗೆ ಬೀಗ ಹಾಕಿದವಳಂತೆ ಇದ್ದುಬಿಟ್ಟಿದ್ದಳು. ಗಂಡನ ಕುಕೃತ್ಯದ ಬಗ್ಗೆಯೂ ತಿಳಿದಿದ್ದ ಗುಂಜಾದೇವಿ, ಅದರಿಂದ ರೋಸಿ ಹೋಗಿದ್ದಳು.
ಪೊಲೀಸರು ತನಿಖೆ ನಡೆಸಿದಾಗ, ವಿಶಾಲ್ ಮತ್ತು ಆತನ ಪತ್ನಿ ರೂಬಿ ಕೊಲೆ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ರೇಪ್, ಬ್ಲಾಕ್ಮೇಲ್ ವಿಚಾರವನ್ನೂ ತಿಳಿಸಿದ್ದಾರೆ. ಕೊಲೆ ಕೃತ್ಯದ ವಿಷಯ ಓಮನಾಥ್ ಸಿಂಗ್ ಪತ್ನಿಗೂ ಗೊತ್ತು ಎಂದು ತಿಳಿಸಿದ್ದಾರೆ. ಇದರಿಂದಾಗಿ ಕಾಡುಗೋಡಿ ಪೊಲೀಸರು ಕೊಲೆಯಾದ ಓಮನಾಥ್ ಸಿಂಗ್ ಪತ್ನಿ ಸೇರಿ ಮೂವರನ್ನೂ ಬಂಧಿಸಿದ್ದಾರೆ.
The Kadugodi police of Bengaluru have arrested three persons including a couple and a woman in Mangaluru in connection with a murder of a gutka trader. The arrested have been identified as Vishal Prajapathi (24) and wife Ruby Prajapathi (23) who hail from Uttar Pradesh and Gunjadevi (35), wife of Omnath Singh (40) of Bihar who was murdered. Vishal Prajapathi and his wife Ruby Prajapathi were living in a rented house in Kadugodi in Bengaluru. All the three accused had tied up gutka trader Omnath Singh and kept him in the house for three days while subjecting him to torture. Subsquently, Omnath Singh was murdered and his body was packed in a gunny bag and thrown into the open drainage near the Ayyappa Swamy temple on the Belathuru-Kodigehalli Main Road, police sources said.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 02:25 pm
Mangaluru Correspondent
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm