ವಿದೇಶದಲ್ಲಿ ಅಕ್ರಮ ಆಸ್ತಿ ಹಿನ್ನೆಲೆ ; ಮುಕ್ಕ ಗ್ರೂಪ್ ಆಫ್ ಕಂಪನಿಯ ಮುಖ್ಯಸ್ಥನಿಗೆ ಸೇರಿದ ಮಂಗಳೂರಿನ ಕಾರ್ಖಾನೆ ಇಡಿ ಜಪ್ತಿ ! 

13-07-22 10:49 pm       Bangalore Correspondent   ಕ್ರೈಂ

ಮುಕ್ಕಾ ಗ್ರೂಪ್‌ ಆಫ್ ಕಂಪೆನಿಯ ಮುಖ್ಯಸ್ಥ ಕೆ. ಮೊಹಮದ್‌ ಹ್ಯಾರಿಸ್‌ಗೆ ಸೇರಿದ ಮಂಗಳೂರಿನ ವಿವಿಧೆಡೆಯಲ್ಲಿರುವ 17.34 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 

ಬೆಂಗಳೂರು, ಜುಲೈ 13: ಮುಕ್ಕಾ ಗ್ರೂಪ್‌ ಆಫ್ ಕಂಪೆನಿಯ ಮುಖ್ಯಸ್ಥ ಕೆ. ಮೊಹಮದ್‌ ಹ್ಯಾರಿಸ್‌ಗೆ ಸೇರಿದ ಮಂಗಳೂರಿನ ವಿವಿಧೆಡೆಯಲ್ಲಿರುವ 17.34 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 

ಹ್ಯಾರಿಸ್‌ ಮಂಗಳೂರಿನಲ್ಲಿ ಹೊಂದಿದ್ದ 2 ವಸತಿಗೃಹಗಳು ಹಾಗೂ 1 ಕಾರ್ಖಾನೆಯನ್ನು ಇ.ಡಿ. ಜಪ್ತಿ ಮಾಡಿದೆ. ಹ್ಯಾರಿಸ್‌ ಅಕ್ರಮವಾಗಿ ಕೋಟ್ಯಂತರ ರೂ. ವಿದೇಶಿ ಬಂಡವಾಳ ಹೂಡಿಕೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಪತ್ತೆಯಾಗಿದ್ದು ಈ ಸಂಬಂಧ ತನಿಖೆ ಮುಂದುವರಿಸಿದೆ. 

Foreign Exchange Management Act Service | FEMA Services

ಇಡಿ ಅಧಿಕಾರಿ ಗಳು ಫಾರಿನ್‌ ಎಕ್ಸ್‌ಚೇಂಜ್‌ ಮ್ಯಾನೇಜ್‌ಮೆಂಟ್‌ ಕಾಯ್ದೆ (ಫೇಮಾ) ಅಡಿ ಹ್ಯಾರಿಸ್‌ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ತನಿಖೆ ವೇಳೆ ದುಬೈನ ಅಜ್ಮಾನ್‌ನಲ್ಲಿ ಪ್ಲ್ಯಾಟ್ ಖರೀದಿಸಿರುವುದು ಪತ್ತೆಯಾಗಿದೆ. ವಿದೇಶಿ ಬ್ಯಾಂಕ್‌ ಖಾತೆಗಳು ಮತ್ತು ವಿದೇಶಿ ವ್ಯಾಪಾರ ಘಟಕದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವುದು, ಷೇರುಗಳನ್ನು ಹೊಂದಿರುವುದು ತನಿಖೆಯಲ್ಲಿ ಕಂಡುಬಂದಿದೆ.

What you need to know about inter-state arrest - iPleaders

ದೇಶದ ಪ್ರಜೆಗಳು ಅಕ್ರಮ ಹಣ ವರ್ಗಾವಣೆ ಮೂಲಕ ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿದ್ದರೆ, ಆ ಮೌಲ್ಯಕ್ಕೆ ಸಮನಾದ ಇಲ್ಲಿನ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅಧಿಕಾರ ಇದೆ ಎನ್ನಲಾಗಿದೆ. ಈ ಪ್ರಕರಣದಲ್ಲೂ ಹ್ಯಾರಿಸ್‌ ವಿದೇಶದಲ್ಲಿ ಅಕ್ರಮವಾಗಿ ಹೊಂದಿರುವ ಆಸ್ತಿಗೆ ಸಮನಾದ ಮಂಗಳೂರಿನಲ್ಲಿ ಹೊಂದಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Illegal wealth abroad,  Mangalore based Mukka fish oil company assets of 17 crore seized. Mukka company is run by Nalapad Ahmed Haris. It's a Proteins Limited company, primarily engaged in the production of, Fish Meal, Fish Oil and Fish Soluble Paste. After officials found undeclared illegal wealth abroad they have their assets here in Mangalore.