ಬಾಗಲಕೋಟ ಡಿಸಿಸಿ ಬ್ಯಾಂಕಿನಲ್ಲಿ ಭಾರೀ ವಂಚನೆ ; 12 ಕೋಟಿ ಗುಳುಂ ಮಾಡಿದ 22 ಮಂದಿ ವಿರುದ್ಧ ಎಫ್ಐಆರ್ 

18-07-22 01:41 pm       HK News Desk   ಕ್ರೈಂ

ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ ಅಟೆಂಡರ್ ಸೇರಿದಂತೆ ಮೂರು ಶಾಖೆಗಳ ಸಿಬಂದಿಯೇ ಸೇರಿಕೊಂಡು ಅಂದಾಜು 12 ಕೋಟಿ ರೂಪಾಯಿ ವಂಚನೆ ಎಸಗಿದ್ದು 22 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಾಗಲಕೋಟೆ, ಜುಲೈ 18 : ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ ಅಟೆಂಡರ್ ಸೇರಿದಂತೆ ಮೂರು ಶಾಖೆಗಳ ಸಿಬಂದಿಯೇ ಸೇರಿಕೊಂಡು ಅಂದಾಜು 12 ಕೋಟಿ ರೂಪಾಯಿ ವಂಚನೆ ಎಸಗಿದ್ದು 22 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಾಗಲಕೋಟೆಯ ಸಿಇಎನ್ ಕ್ರೈಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಟೆಂಡರ್ ಪ್ರವೀಣ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ವಿರುದ್ಧ ತನಿಖೆ ಆರಂಭಗೊಂಡಿದೆ. ಬಾಗಲಕೋಟೆ ಡಿಸಿಸಿ ಬ್ಯಾಂಕಿನ ಮೂರು ಶಾಖೆಗಳಲ್ಲಿ 12,27,40,947 ಹಣ ದುರುಪಯೋಗ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

Home - BAGALKOTE DISTRICT POLICE

ಕಮತಗಿ, ಅಮೀನಗಡ, ಗುಡೂರು ಸೇರಿ ಒಟ್ಟು 3 ಬ್ಯಾಂಕ್ ಶಾಖೆಗಳಲ್ಲಿ ಹಣದ ದುರುಪಯೋಗ ಆಗಿದ್ದು ಬ್ಯಾಂಕ್ ಸಿಬ್ಬಂದಿಯೇ ಐಡಿ ಹ್ಯಾಕ್ ಮಾಡಿ ಹಣ ದುರುಪಯೋಗ ಮಾಡಿದ್ದಾರೆ. ಬ್ಯಾಂಕಿನ ಲಾಭದ ಖಾತೆಯಿಂದಲೇ ಹಣ ಹೊಡೆದಿದ್ದಾರೆ ಎನ್ನುವ ಮಾಹಿತಿಗಳಿವೆ. ಬಾಗಲಕೋಟೆ ಡಿಸಿಸಿ ಬ್ಯಾಂಕ್ ಪ್ರಮುಖರು ವಂಚನೆ ಬಗ್ಗೆ ಸಿಇಎನ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Big fraud exposed inside DCC Bank in Bagalkot, 22 booked for cheating around 12 crores.