ಬ್ರೇಕಿಂಗ್ ನ್ಯೂಸ್
21-07-22 06:03 pm Mangalore Correspondent ಕ್ರೈಂ
ಪುತ್ತೂರು, ಜುಲೈ 21: ಎರಡು ದಿನಗಳ ಹಿಂದೆ ಬೆಳ್ಳಾರೆ ಬಳಿ ಮಾರಣಾಂತಿಕ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಸೂದ್ ಎಂಬ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಮಸೂದ್ (18) ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿದ್ದು, ಒಂದು ತಿಂಗಳ ಹಿಂದೆ ಸುಳ್ಯ ತಾಲೂಕಿನ ಕಳಂಜ ಗ್ರಾಮದ ಅಜ್ಜನ ಮನೆಗೆ ಬಂದಿದ್ದು ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಜುಲೈ 19ರಂದು ಸಂಜೆ ಮಸೂದ್ ಪೇಟೆಯಲ್ಲಿದ್ದಾಗ, ಸುಧೀರ್ ಮತ್ತಿತರರ ಜೊತೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆಸಿದ್ದರು. ಇದೇ ವಿಚಾರದಲ್ಲಿ ಮಸೂದ್ ನನ್ನು ಮಾತನಾಡುವುದಕ್ಕೆ ಕರೆತರುವಂತೆ ಕಳಂಜ ನಿವಾಸಿ ಇಬ್ರಾಹಿಂ ಶನೀಫ್ ಎಂಬಾತನಿಗೆ ಅಭಿಲಾಷ್, ಸುಧೀರ್ ಮತ್ತು ಇನ್ನಿತರರು ಹೇಳಿದ್ದರು. ಇವತ್ತೇ ಮಾತನಾಡಿ ಮುಗಿಸೋಣ ಎಂದು ಕರೆತರಲು ಸೂಚಿಸಿದ್ದರು.
ಇದರಂತೆ, ಇಬ್ರಾಹಿಂ ಶನೀಫ್ ಅದೇ ದಿನ ರಾತ್ರಿ 11 ಗಂಟೆಗೆ ಮಸೂದ್ ನನ್ನು ಕರೆತಂದಿದ್ದು, ಮಾತುಕತೆ ಮೂಲಕ ವಿವಾದ ಬಗೆಹರಿಸಲು ಮುಂದಾಗಿದ್ದರು. ಆದರೆ, ಈ ವೇಳೆ ಆರೋಪಿಗಳು ಒಟ್ಟು ಸೇರಿ ಮಸೂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಆನಂತರ, ತಳ್ಳಾಟ ನಡೆದಿದ್ದು ಇಬ್ರಾಹಿಂ, ಮಸೂದ್ ಮೇಲೆ ಹಲ್ಲೆ ನಡೆಸದಂತೆ ಪ್ರಯತ್ನ ಪಟ್ಟಿದ್ದು, ಈ ವೇಳೆ ನೆಲಕ್ಕೆ ಬಿದ್ದ ಇಬ್ಬರ ಮೇಲೆ ಆರೋಪಿಗಳು ಕಾಲಿನಿಂದ ತುಳಿದು ಹಾಕಿದ್ದರು. ಅಲ್ಲದೆ, ನೆಲಕ್ಕೆ ಬಿದ್ದ ಮಸೂದ್ ತಲೆಗೆ ಅಭಿಲಾಷ್ ಎಂಬಾತ ಬಾಟಲಿಯಲ್ಲಿ ಹಲ್ಲೆ ನಡೆಸಿದ್ದಾನೆ. ಆನಂತರ, ಇಬ್ರಾಹಿಂ ಮತ್ತು ಮಸೂದ್ ಓಡಿ ತಪ್ಪಿಸಿಕೊಂಡಿದ್ದರು. ಬಳಿಕ ಹುಡುಕಾಟ ನಡೆಸಿದಾಗ, ಮಸೂದ್ ಅಲ್ಲಿಯೇ ಸನಿಹದಲ್ಲಿ ಅಬುಬಕ್ಕರ್ ಎಂಬವರ ಮನೆ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ. ಆನಂತರ, ಇಬ್ರಾಹಿಂ ಮತ್ತು ಇತರರು ಸೇರಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಮಸೂದನ್ನು ಕರೆದೊಯ್ದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ಸಂಬಂಧಿಸಿ ಬೆಳ್ಳಾರೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿ, ಅಭಿಲಾಷ್, ಸುನಿಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬ ಎಂಟು ಮಂದಿಯನ್ನು ಬಂಧಿಸಿದ್ದರು. ಗಾಯಗೊಂಡಿದ್ದ ಯುವಕ ಮಸೂದ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಲಿದೆ.
A day after a gang attacked a youth brutally over a trivial reason in Kalenja of Bellare, he died after failing to respond to the treatment in a hospital. The deceased youth is Masood (18). It may be recalled that a gang of eight members had attacked Masood on July 19 night in Vishnunagara of Kalanja village. Masood was a resident of Mogral Puthur in Kasargod. As he was severely injured after he was assaulted with a soda bottle, he was shifted to a hospital in Mangaluru. He was treated in the Intensive Care Unit in a private hospital but he succumbed to the injury.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm