ಬ್ರೇಕಿಂಗ್ ನ್ಯೂಸ್
23-07-22 05:59 pm HK News Desk ಕ್ರೈಂ
ನವದೆಹಲಿ, ಜುಲೈ 23: ರಾಷ್ಟ್ರ ರಾಜಧಾನಿ ದೆಹಲಿಯ ಪೈಶಾಚಿಕ ಕೃತ್ಯವೊಂದು ವರದಿಯಾಗಿದೆ. ಹೊಸ ರೈಲು ನಿಲ್ದಾಣದ ರೈಲ್ವೆ ಫ್ಲಾಟ್ಫಾರ್ಮ್ನಲ್ಲಿ 30 ವರ್ಷದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಸಂಬಂಧ ನಾಲ್ವರು ರೈಲ್ವೆ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸತೀಶ್ ಕುಮಾರ್ (35), ವಿನೋದ್ ಕುಮಾರ್ (38), ಮಂಗಲ್ ಚಾಂದ್ (33) ಹಾಗೂ ಜಗದೀಶ್ ಚಾಂದ್ (37) ಎಂದು ಗುರುತಿಸಲಾಗಿದೆ. ನಾಲ್ವರು ಆರೋಪಿಗಳು ಕೂಡ ರೈಲ್ವೆ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳು. ಗುರುವಾರ ತಡರಾತ್ರಿ ಪ್ಲಾಟ್‌ಫಾರ್ಮ್‌ನಲ್ಲಿರುವ ರೈಲು ದೀಪದ ಗುಡಿಸಲಿನೊಳಗೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಆರೋಪಿಗಳು ಹೊರಗಡೆ ನಿಂತು ಕಾವಲು ಕಾದರೆ, ಇನ್ನುಳಿದ ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ಬೆಳಗಿನ ಜಾವ 3.27ಕ್ಕೆ ಠಾಣೆಗೆ ಕರೆ ಮಾಡಿ, ಘಟನೆಯ ಬಗ್ಗೆ ಮಾಹಿತಿ ನೀಡಿದಳು. ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ರೈಲ್ವೆ ಡಿಸಿಪಿ ಹರೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯು ಹರಿಯಾಣದ ಫರಿದಾಬಾದ್ನಲ್ಲಿ ವಾಸವಿದ್ದಾರೆ. ಎರಡು ವರ್ಷಗಳ ಹಿಂದೆ ಗಂಡನಿಂದ ಪ್ರತ್ಯೇಕವಾಗಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತೆಗೆ ಸ್ನೇಹಿತರೊಬ್ಬರಿಂದ ಆರೋಪಿಗಳಲ್ಲಿ ಒಬ್ಬನಾಗಿರುವ ಸತೀಶ್ ಪರಿಚಯವಾಗಿತ್ತು. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆತ ಭರವಸೆ ನೀಡಿದ್ದ ಎಂದು ಸಂತ್ರಸ್ತೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಸಂತ್ರಸ್ತ ಮಹಿಳೆಗೆ ಕರೆ ಮಾಡಿದ ಸತೀಶ್, ಗುರುವಾರ ನಮ್ಮ ಹೊಸ ಮನೆಯಲ್ಲಿ ಮಗನ ಬರ್ತಡೇ ಪಾರ್ಟಿ ಇದೆ ಎಂದು ಆಹ್ವಾನಿಸಿದ್ದಾನೆ. ಅಂದು ರಾತ್ರಿ 10.30ಕ್ಕೆ ಸಂತ್ರಸ್ತೆ ಕೀರ್ತಿ ನಗರ್ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಿದ್ದಾಳೆ. ಬಳಿಕ ಆಕೆಯನ್ನು ಅಲ್ಲಿಂದ ದೆಹಲಿಯ ರೈಲು ನಿಲ್ದಾಣವೊಂದಕ್ಕೆ ಕರೆದೊಯ್ದು ಇನ್ನುಳಿದ ಆರೋಪಿಗಳಿಗೆ ಪರಿಚಯ ಮಾಡಿದ್ದಾನೆ. ಇದಾದ ಬಳಿಕ ರೈಲು ದೀಪದ ಗುಡಿಸಲಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ದೂರಿದ್ದಾರೆ.
ಘಟನೆ ನಡೆದ ಎರಡೇ ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
DCP (Railways) Harendra Singh has informed that the four accused were railway employees and have been arrested.The four accused identified as Satish Kumar (35), Vinod Kumar (38), Mangal Chand Meena (33) and Jagdish Chand (37) were arrested within two hours of an FIR being registered against them.According to the police, the woman was rescued by police from the station where she made the help call.
26-05-26 11:03 pm
HK News Desk
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 12:42 pm
HK News Staffer
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm