ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಕಾರಿನ ಗಾಜು ಒಡೆದು 4.50 ಲಕ್ಷ ದೋಚಿದ ಖದೀಮರು 

24-07-22 12:53 pm       Bangalore Correspondent   ಕ್ರೈಂ

ನಗರದ ಇನ್ಫೆಂಟ್ರಿ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿ ಬಳಿ ಪಾರ್ಕ್ ಮಾಡಿದ್ದ ಕಾರಿನ ಗಾಜು ಒಡೆದು ದುಷ್ಕರ್ಮಿಗಳು ರೂ. 4.50 ಲಕ್ಷ ನಗದು ಇದ್ದ ಬ್ಯಾಗನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.

 bnಬೆಂಗಳೂರು, ಜುಲೈ 24 : ನಗರದ ಇನ್ಫೆಂಟ್ರಿ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿ ಬಳಿ ಪಾರ್ಕ್ ಮಾಡಿದ್ದ ಕಾರಿನ ಗಾಜು ಒಡೆದು ದುಷ್ಕರ್ಮಿಗಳು ರೂ. 4.50 ಲಕ್ಷ ನಗದು ಇದ್ದ ಬ್ಯಾಗನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.

ಹಣ ಕಳೆದುಕೊಂಡ ಲಕ್ಷ್ಮೀಶ್ ಎಂಬವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಓಜಿಕುಪ್ಪಂ ತಂಡದವರು ಕೃತ್ಯ ಎಸಗಿರುವ ಅನುಮಾನವಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಮನೆ ಸಾಲದ ಕಂತು ಕಟ್ಟಲೆಂದು ಲಕ್ಷ್ಮೀಶ್ ಅವರು ಮಹದೇವಪುರದ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ₹ 4.50 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿದ್ದರು. ಅದನ್ನು ಬೇರೆ ಬ್ಯಾಂಕ್‌ಗೆ ಪಾವತಿಸಲು ನಗರಕ್ಕೆ ಬಂದಿದ್ದರು. ಇದರ ನಡುವೆ, ಇನ್ಫೆಂಟ್ರಿ ರಸ್ತೆಯ ಕಾನೂನು ಮಾಪನ ಇಲಾಖೆ ಕಟ್ಟಡದ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ, ಕೆಲಸದ ನಿಮಿತ್ತ ತನ್ನ ಕಚೇರಿಗೆ ಹೋಗಿದ್ದರು. 

ಲಕ್ಷ್ಮೀಶ್ ಕಾರಿನಲ್ಲಿ ಹಣ ಇಟ್ಟಿರುವುದನ್ನು ತಿಳಿದಿದ್ದ ದುಷ್ಕರ್ಮಿಗಳು, ಮಹದೇವಪುರದಿಂದ ಪಲ್ಸರ್ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಲಕ್ಷ್ಮೀಶ್ ಕಾರು ಪಾರ್ಕಿಂಗ್ ಮಾಡಿದ್ದ ಜಾಗದಲ್ಲಿ ಗಾಜು ಒಡೆದು, ಒಳಗಿದ್ದ ಹಣದ ಬ್ಯಾಗನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಲಕ್ಷ್ಮೀಶ್ ತನ್ನ ಕೆಲಸ ಮುಗಿಸಿ ವಾಪಸು ಕಾರಿನ ಬಳಿ ಬಂದಾಗ ವಿಷಯ ಗೊತ್ತಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Thieves break car parked near Bangalore Commissioner office and take 4.50 lakhs.