ಬ್ರೇಕಿಂಗ್ ನ್ಯೂಸ್
24-07-22 03:52 pm HK News Desk ಕ್ರೈಂ
ಬೆಳ್ತಂಗಡಿ, ಜುಲೈ 24: ಹಾಡಹಗಲೇ ವೃದ್ಧ ಮಹಿಳೆಯನ್ನು ಮನೆಗೆ ನುಗ್ಗಿ ಕೊಲೆಗೈದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ಅಕ್ಕು ಗೌಡ (85) ಎಂಬ ವೃದ್ಧೆಯನ್ನು ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಂದು ಹಾಕಿದ್ದ ಘಟನೆ ನಡೆದಿತ್ತು.
ಈ ಬಗ್ಗೆ ವೃದ್ಧೆಯ ಮಗ ಡೀಕಯ್ಯ ಗೌಡ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಇವರು ಶನಿವಾರ ಬೆಳಗ್ಗೆ ಎಂದಿನಂತೆ ಪತ್ನಿಯೊಂದಿಗೆ ಕೂಲಿ ಕೆಲಸಕ್ಕೆ ತೆರಳಿದ್ದರು. 12 ವರ್ಷದ ಮಗಳು ಶಾಲೆಗೆ ಹೋಗಿದ್ದರೆ, ಮನೆಯಲ್ಲಿ ವೃದ್ಧೆ ತಾಯಿ ಅಕ್ಕು ಗೌಡ ಮಾತ್ರ ಇದ್ದರು. ಮೊಮ್ಮಗಳು ಮೌಲ್ಯ ಮಧ್ಯಾಹ್ನ ಎರಡು ಗಂಟೆಗೆ ಶಾಲೆಯಿಂದ ಮನೆಗೆ ಬಂದಿದ್ದು, ಈ ವೇಳೆ ಅಕ್ಕು ಗೌಡ ಮನೆಯಲ್ಲಿ ಕಾಣಿಸಿರಲಿಲ್ಲ.
ಬಳಿಕ ಅಜ್ಜಿಯನ್ನು ಕರೆಯುತ್ತಾ ಹುಡುಕಾಟ ನಡೆಸಿದಾಗ, ಅಜ್ಜಿ ಮನೆ ಹಿಂಬದಿಯ ಹಟ್ಟಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡುಬಂದಿತ್ತು. ಮೊಮ್ಮಗಳು ಬಳಿಕ ಪಕ್ಕದ ಮನೆಯವರಿಗೆ ತಿಳಿಸಿ, ಆನಂತರ ಹೆತ್ತವರು ಬಂದು ನೋಡಿದಾಗ ಅಜ್ಜಿ ಮೃತಪಟ್ಟಿದ್ದರು. ಘಟನೆ ಬೆಳಗ್ಗೆ 8.30ರಿಂದ ಮಧ್ಯಾಹ್ನ 2ರ ಮಧ್ಯೆ ನಡೆದಿದ್ದು, ಕಿವಿಯ ಓಲೆ ಎಗರಿಸಿದ್ದರಿಂದ ಯಾರೋ ಚಿನ್ನಕ್ಕಾಗಿ ಕೊಲೆ ಮಾಡಿದ್ದಾರೆಂದು ಅವರ ಮಗ ಡೀಕಯ್ಯ ಗೌಡ ದೂರು ನೀಡಿದ್ದರು. ಬೆಳ್ತಂಗಡಿ ಸರ್ಕಲ್ ಇನ್ ಸ್ಪೆಕ್ಟರ್ ಶಿವಕುಮಾರ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣೆಯ ಕೃಷ್ಣಕಾಂತ್ ಪಾಟೀಲ್ ನೇತೃತ್ವದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸೋಮಂತಡ್ಕ ಎಂಬಲ್ಲಿ ಶನಿವಾರ ಸಂಜೆಯೇ ಆರೋಪಿಯನ್ನು ಬಂಧಿಸಿದ್ದಾರೆ.
ಪಕ್ಕದ ಮನೆಯಾತ ನೀಡಿದ್ದ ಸುಳಿವು
ಮಧ್ಯಾಹ್ನ ವೇಳೆಗೆ ವೃದ್ಧೆಯ ಮನೆಗೆ ಯುವಕನೊಬ್ಬ ಬಂದಿರುವುದನ್ನು ಪಕ್ಕದ ಮನೆಯವರು ನೋಡಿದ್ದರು. ಆ ಯುವಕ ಹತ್ತಿರದ ಸಂಬಂಧಿಕನೇ ಆಗಿದ್ದು ಕೆಲವೊಮ್ಮೆ ಅಜ್ಜಿ ಮನೆಗೆ ಬಂದು ಹೋಗುತ್ತಿದ್ದ. ಹಾಗಾಗಿ ಆತನ ಬಗ್ಗೆ ಹೆಚ್ಚು ಸಂಶಯ ಇರಲಿಲ್ಲ. ಆದರೆ, ವೃದ್ಧೆಯನ್ನು ಈ ರೀತಿ ಹೊಡೆದು ಹಾಕಿದ್ದು ತಿಳಿಯುತ್ತಲೇ ಮಧ್ಯಾಹ್ನ ಬಂದು ಹೋಗಿದ್ದ ವ್ಯಕ್ತಿಯ ಬಗ್ಗೆ ಡೀಕಯ್ಯ ಗೌಡರಿಗೆ ಮಾಹಿತಿ ನೀಡಿದ್ದರು. ಡೀಕಯ್ಯ ಗೌಡರು ತಕ್ಷಣವೇ ಆತನಿಗೆ ಫೋನಾಯಿಸಿದ್ದರು. ಫೋನ್ ಮಾಡಿದಾಗ, ನಾರಾವಿಯಲ್ಲಿದ್ದೇನೆ ಎಂದು ಹೇಳಿದ್ದ. ಈ ಬಗ್ಗೆ ಡೀಕಯ್ಯ ಗೌಡ ಕೂಡಲೇ ಧರ್ಮಸ್ಥಳ ಠಾಣೆಯ ಪೊಲೀಸರಿಗೂ ಮಾಹಿತಿ ನೀಡಿದ್ದರು. ಪೊಲೀಸರು ಆತನ ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ, ಉಜಿರೆಯಲ್ಲಿ ಕಂಡುಬಂದಿತ್ತು. ಸುಳ್ಳು ಹೇಳಿದ್ದು ದೃಢವಾಗುತ್ತಲೇ ಸಂಶಯಗೊಂಡ ಪೊಲೀಸರು ಬೆನ್ನು ಬಿದ್ದಿದ್ದು ಸಂಜೆಯ ವೇಳೆಗೆ ಸೋಮಂತಡ್ಕದ ಬಾರ್ ಒಂದರಲ್ಲಿ ಕುಡಿದು ಟೈಟ್ ಆಗಿ ಕುಳಿತಿದ್ದ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ.
ಪೊಲೀಸರು ಕಾಲರ್ ಹಿಡಿದು ಎಳೆದೊಯ್ದಿದ್ದು ಠಾಣೆಗೊಯ್ದು ಎರಡೇಟು ಬಿಗಿಯುತ್ತಲೇ ನಿಜ ಬಾಯ್ಬಿಟ್ಟಿದ್ದಾನೆ. ಯಾರೋ ಆಗಂತುಕರು ಒಂಟಿ ಮಹಿಳೆಯನ್ನು ಹೊಡೆದು ಕೊಂದು ಚಿನ್ನಾಭರಣ ದೋಚಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಡೀಕಯ್ಯ ಗೌಡರ ಪತ್ನಿಯ ಅಕ್ಕನ ಮಗನೇ ಈ ಕೃತ್ಯ ಎಸಗಿದ್ದಾನೆ ಅನ್ನೋದನ್ನು ಸಂಬಂಧಿಕರಿಗೂ ನಂಬಲಿಕ್ಕಾಗಲಿಲ್ಲ. 28 ವರ್ಷದ ಅಶೋಕ್ ಎಂಬ ಯುವಕ ಕುಡಿಯಲು ಹಣ ಇಲ್ಲದೆ, ವೃದ್ಧೆಯ ಮನೆಗೆ ಬಂದು ಹಣ ಕೇಳಿ ಸಿಗದಿದ್ದಕ್ಕೆ ಹೊಡೆದು ಕಿವಿಯೋಲೆಯನ್ನೇ ಎಗರಿಸಿಕೊಂಡು ಹೋಗಿದ್ದ. ಅಲ್ಲದೆ, ಮನೆಯಲ್ಲಿ ಇಟ್ಟಿದ್ದ 20 ಸಾವಿರ ನಗದನ್ನೂ ಕದ್ದೊಯ್ದಿದ್ದ. ಈ ಹಿಂದೆಯೂ ಮನೆಗೆ ಬಂದು ಹೋಗುತ್ತಿದ್ದ ಯುವಕ ಹಣ ಸಾಲ ಕೇಳಿಕೊಂಡು ಹೋಗುತ್ತಿದ್ದ. ಈ ಬಾರಿ ಅಜ್ಜಿಯನ್ನೇ ಹೊಡೆದು ಕೊಲೆ ಮಾಡಿದ್ದಾನೆ. ತನ್ನ ಬಗ್ಗೆ ಯಾರಿಗೂ ಅನುಮಾನ ಬಾರದು ಎಂದುಕೊಂಡಿದ್ದ ಯುವಕ, ಕೃತ್ಯ ಎಸಗಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪೊಲೀಸರು ಆರೋಪಿ ವಿರುದ್ಧ ದರೋಡೆ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
An elderly woman was murdered in broad daylight at Kerekodi of Belalu village of the taluk by close relative of the woman. The killer took cash and golden ornaments in the house but was arrested quickly by the police. This incident occurred on Saturday July 23.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 04:57 pm
Mangaluru Correspondent
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm