ಬ್ರೇಕಿಂಗ್ ನ್ಯೂಸ್
 
            
                        25-07-22 06:10 pm HK News Desk ಕ್ರೈಂ
 
            ನವದೆಹಲಿ, ಜುಲೈ 25: ನೂರು ಕೋಟಿ ಕೊಟ್ಟರೆ ರಾಜ್ಯಸಭೆ ಅಥವಾ ರಾಜ್ಯಪಾಲರ ಹುದ್ದೆ ತೆಗೆಸಿಕೊಡುತ್ತೇವೆಂದು ಹೇಳಿ ಹಣ ಪಡೆದು ವಂಚಿಸಲು ಜಾಲ ಹೆಣೆದಿದ್ದ ಭಾರೀ ವಂಚನಾ ಜಾಲವನ್ನು ಸಿಬಿಐ ಅಧಿಕಾರಿಗಳು ಭೇದಿಸಿದ್ದು, ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಮೂಲದ ಐವರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ್ದರು.
ಮಹಾರಾಷ್ಟ್ರದ ಲಾತೂರಿನ ಕಮಲಾಕರ್ ಪ್ರೇಮ್ ಕುಮಾರ್ ಬಂಡಾಗರ್, ಕರ್ನಾಟಕದ ಬೆಳಗಾವಿಯ ರವೀಂದ್ರ ವಿಠಲ ನಾಯ್ಕ್, ರಾಜಧಾನಿ ದೆಹಲಿಯ ಮಹೇಂದ್ರ ಪಾಲ್ ಅರೋರ, ಅಭಿಷೇಕ್ ಬೂರ, ಮಹಮ್ಮದ್ ಇಜಾಸ್ ಖಾನ್ ಬಂಧಿತರು. ಕಮಲಾಕರ್ ಬಂಡಾಗರ್ ತಾನೊಬ್ಬ ಸಿಬಿಐ ಅಧಿಕಾರಿಯೆಂದು ಪೋಸು ನೀಡುತ್ತಾ, ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ನಂಟು ಹೊಂದಿದ್ದೇನೆ ಎಂದು ನಂಬಿಸುತ್ತಿದ್ದ. ಅಲ್ಲದೆ, ಯಾವುದೇ ವ್ಯವಹಾರಗಳನ್ನು ದೊಡ್ಡ ಡೀಲಿಂಗ್ ಮೂಲಕ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದ. ಅಲ್ಲದೆ, ರವೀಂದ್ರ ನಾಯ್ಕ್, ಮಹೇಂದ್ರ ಪಾಲ್, ಅಭಿಷೇಕ್ ಬೂರ, ಮಹಮ್ಮದ್ ಬಳಿ ಯಾವುದೇ ಡೀಲಿಂಗ್ ಇದ್ದರೂ ಕರೆದುಕೊಂಡು ಬನ್ನಿ ಎಂದು ಮಸಾಲೆ ಬೆರಸಿ ಹೇಳಿ ಅವರನ್ನು ಛೂಬಿಟ್ಟಿದ್ದ.

ಇದರಿಂದ ಉತ್ತೇಜಿತರಾಗಿದ್ದ ನಾಲ್ವರು ಹಣ ಇದ್ದ ರಾಜಕಾರಣಿಗಳನ್ನು ರಾಜ್ಯಸಭೆ, ರಾಜ್ಯಪಾಲರ ಹುದ್ದೆಯ ಬಗ್ಗೆ ಆಕರ್ಷಣೆ ತೋರಿಸುತ್ತಿದ್ದರು. ಅಲ್ಲದೆ, ಕೇಂದ್ರ ಸರಕಾರದ ವಿವಿಧ ಸಚಿವಾಲಯದಡಿ ಕಾರ್ಯ ಎಸಗುವ ಸರಕಾರಿ ಅಧೀನದ ಸಂಸ್ಥೆಗಳಿಗೆ ಅಧ್ಯಕ್ಷರಾಗಿ ಮಾಡಿಕೊಡುವುದಾಗಿಯೂ ನಂಬಿಸುತ್ತಿದ್ದರು. ಇದಕ್ಕಾಗಿ ದೊಡ್ಡ ಮೊತ್ತದ ಡೀಲಿಂಗ್ ಮಾಡಬೇಕಾಗುತ್ತದೆ. ಆನಂತರ, ಅದರ ಹತ್ತು ಪಟ್ಟು ಹಣವನ್ನು ಮಾಡಬಹುದು ಎಂದು ಮಾತಿನಲ್ಲೇ ಸ್ವರ್ಗ ತೋರಿಸುತ್ತಿದ್ದರು. ರಾಜ್ಯಸಭೆ ಚುನಾವಣೆಯ ಸಂದರ್ಭ 100 ಕೋಟಿ ರೂಪಾಯಿ ಕೊಟ್ಟರೆ, ಸೀಟ್ ಮಾಡಿಕೊಡುತ್ತೀವಿ ಎಂಬ ಆಮಿಷದ ಬಗ್ಗೆ ಸುಳಿವು ಪಡೆದ ಸಿಬಿಐ ಅಧಿಕಾರಿಗಳು ಅಭಿಷೇಕ್ ಬೂರ ಹಿಂದೆ ಬಿದ್ದಿದ್ದರು. ಮೊಬೈಲ್ ಕರೆಯನ್ನು ರೆಕಾರ್ಡ್ ಮಾಡಿದಾಗ, ಹಲವರು ಈ ಜಾಲದಲ್ಲಿ ತೊಡಗಿಸಿರುವುದು ಕಂಡುಬಂದಿತ್ತು. ಇದರಂತೆ, ವ್ಯವಸ್ಥಿತವಾಗಿ ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಲಾಗಿದೆ.
 
            
            
            The CBI has busted a multi-state racket of imposters attempting to cheat people to the tune of Rs 100 crore by falsely promising them Rajya Sabha seats and governorship, officials said. The agency had conducted searches recently in connection with the case, they said.In its FIR, the CBI has named Kamalakar Premkumar Bandgar of Maharashtra's Latur, Ravindra Vithal Naik of Karnataka's Belgaum, and Delhi-NCR-based Mahendra Pal Arora, Abhishek Boora and Mohammed Aijaz Khan in connection with the case, the officials said.
 
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm