ಬ್ರೇಕಿಂಗ್ ನ್ಯೂಸ್
31-07-22 10:38 pm HK News Desk ಕ್ರೈಂ
ಕೊಲ್ಲಂ, ಜುಲೈ 31 : ಪಾರ್ಟಿಗಳಲ್ಲಿ ಬಳಕೆಯಾಗುವ ಎಂಡಿಎಂಎ ಡ್ರಗ್ಸ್ ಮತ್ತು ಸೆಕ್ಸ್ ಟಾಯ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು ಯುವತಿ ಸಹಿತ ಐವರನ್ನು ಪತ್ತನಂತಿಟ್ಟ ಜಿಲ್ಲೆಯ ಪಂದಳಂ ನಗರದಲ್ಲಿ ಬಂಧಿಸಿದ್ದಾರೆ.
ಕೊಲ್ಲಂ ಜಿಲ್ಲೆಯ ಶಾಹಿನಾ ಪಳ್ಳಿಕಲ್, ಅಡೂರಿನ ರಾಹುಲ್ (ಮೊನೈ), ಪೆರಿಂಗನಾಡಿನ ಆರ್ಯನ್, ಪಂದಳಂನ ವಿಧು ಕೃಷ್ಣನ್ ಮತ್ತು ಕೊಡುಮೋನಿನ ಸಜಿನ್ ಬಂಧಿತರು. ಶುಕ್ರವಾರ ಸಂಜೆ ಶಾಹಿನಾ ಮತ್ತು ರಾಹುಲ್ ಪಂದಳಂನ ರಿವರ್ವಾಕ್ ಹೊಟೇಲ್ ಲಾಡ್ಜ್ನಲ್ಲಿ ರೂಂ ಬುಕ್ ಮಾಡಿದ್ದರು. ಇದೇ ವೇಳೆ ಕೆಲವು ಗ್ರಾಹಕರು ಅವರನ್ನು ಭೇಟಿ ಮಾಡಿದ್ದಾರೆ.
ಡ್ರಗ್ಸ್ ಮಾಫಿಯಾ ಮೇಲೆ ಮೊದಲೇ ಕಣ್ಣಿಟ್ಟಿದ್ದ ನಾರ್ಕೋಟಿಕ್ ಸೆಲ್ ಪೊಲೀಸರಿಗೆ ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಮಾದಕ ವಸ್ತುಗಳು ರವಾನೆಯಾಗಿರುವ ಖಚಿತ ಮಾಹಿತಿ ಲಭಿಸಿತ್ತು. ಹೀಗಾಗಿ ವಿಶೇಷ ತಂಡವನ್ನು ರಚಿಸಿ ಮಾದಕ ವಸ್ತುಗಳ ಜಾಲದ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಅದರಂತೆ ರಿವರ್ವಾಕ್ ಲಾಡ್ಜ್ನಿಂದ ಡ್ರಗ್ಸ್ ಸಪ್ಲೈ ಆಗುತ್ತಿರುವ ಖಚಿತ ಮಾಹಿತಿ ಪಡೆದ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯಪಡೆ ಹೊಟೇಲ್ ಮೇಲೆ ದಾಳಿ ನಡೆಸಿದೆ.
ಕೊಠಡಿ ಪಡೆದಿದ್ದವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಎಂಡಿಎಂಎ ಮಾದಕ ಮಾತ್ರೆಗಳು ಹಾಗೂ ಸೆಕ್ಸ್ ಟಾಯ್ಸ್ಗಳು ರೂಂನಲ್ಲಿ ಪತ್ತೆಯಾಗಿದೆ. ತಂಡವು ಮಾದಕ ವಸ್ತುಗಳನ್ನು ಲಾಡ್ಜ್ನಿಂದ ಇತರೆಡೆಗೆ ರವಾನಿಸಲು ಪ್ಲ್ಯಾನ್ ರೂಪಿಸಿತ್ತು. ದಾಳಿ ವೇಳೆ ಅಪಾರ ಪ್ರಮಾಣದ ಎಂಡಿಎಂಎ ಡ್ರಗ್ಸ್ ಸಿಕ್ಕಿರುವುದಾಗಿ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಕೆಎ ವಿದ್ಯಾಧರನ್ ತಿಳಿಸಿದ್ದಾರೆ.
ಆರೋಪಿಗಳೆಲ್ಲರೂ ಡ್ರಗ್ಸ್ ಡೀಲರ್‌ಗಳಾಗಿದ್ದು, ಎಂಡಿಎಂಎ ಅನ್ನು ಬೆಂಗಳೂರಿನಿಂದ ತರಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮಾರಾಟಕ್ಕೂ ಮುನ್ನ ಪಂದಳಂನಲ್ಲಿರುವ ಹೋಟೆಲ್ ಕೊಠಡಿಗೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರ ಜೊತೆಗೆ ಸೆಕ್ಸ್ ಟಾಯ್ಸ್ಗಳನ್ನು ಇದೇ ತಂಡ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಯಾರಿಗೂ ಅನುಮಾನ ಮೂಡಬಾರದೆಂಬ ಉದ್ದೇಶದಿಂದ, ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿದಾಗ ಶಾಹಿನಾಳನ್ನು ಜೊತೆಗೆ ಕರೆದುಕೊಂಡು ಬಂದಿದ್ದಾಗಿ ಆರೋಪಿಗಳು ಪ್ರಾಥಮಿಕ ತನಿಖೆಯ ವೇಳೆ ಬಾಯಿಬಿಟ್ಟಿದ್ದಾರೆ.
Police on Saturday arrested five persons, including a woman, for selling party drug MDMA and sex toys from a hotel room in Pandalam here. The narcotics were seized from Riverwalk Hotel, near Manikandan Althara in Pandalam, on Saturday afternoon by a District Anti-Narcotics Special Action Force (DANSAF) team led by Narcotics Cell Deputy Superintendent of Police K A Vidyadharan.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm