ಬ್ರೇಕಿಂಗ್ ನ್ಯೂಸ್
02-08-22 07:46 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 2 : ನಿರುದ್ಯೋಗಿ ಯುವಕರಿಗೆ ಆಮಿಷವೊಡ್ಡಿ ಮಾದಕ ವಸ್ತುವನ್ನು ಸಾಗಾಟ ಮಾಡಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿ ಮೂಲದ ಆರೋಪಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾದಕ ವಸ್ತು ಖರೀದಿಸುತ್ತಿದ್ದರು. ಮಾದಕ ವಸ್ತುವನ್ನು ಖರೀದಿಸಿ ಆ ಬಳಿಕ ಹಣದ ಆಮಿಷವೊಡ್ಡಿ ನಿರುದ್ಯೋಗಿ ಯುವಕರನ್ನು ಬಳಸಿ ಗ್ರಾಹಕರಿಗೆ ಪೂರೈಸುತ್ತಿದ್ದರು. ಡ್ರಗ್ಸ್ ಜಾಲದ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾದಕ ವಸ್ತುಗಳನ್ನು ದೇಶದ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈನಲ್ಲಿ ಮಾರಾಟ ಮಾಡುವುದಕ್ಕಾಗಿ ಆಯಾ ಪ್ರದೇಶಗಳಲ್ಲಿ ಕೆಲವು ಯುವಕರನ್ನು ಗೊತ್ತು ಮಾಡಿದ್ದರು. ಪ್ರಮುಖ ನಗರಗಳಲ್ಲಿ ತಾವೇ ಯುವಕರಿಗೆ ಪಿಜಿ ಮಾಡಿಕೊಟ್ಟು ಮಾದಕ ವಸ್ತುಗಳನ್ನು ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದರು. ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಿರುದ್ಯೋಗಿ ಯುವಕರಿಗೆ ಗಾಳ
Darknet ವೆಬ್ ಮೂಲಕ ವಿವಿಧ ಅಪ್ಲಿಕೇಷನ್ ಬಳಸಿ ವಿದೇಶಿ ಡ್ರಗ್ ವೆಂಡರ್ ಗಳಿಂದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಕ್ರಿಪ್ಟೋ ಕರೆನ್ಸಿ ಮುಖಾಂತರ ಖರೀದಿಸುತ್ತಿದ್ದರು. ಇದೇ ವೇಳೆ, ವಿನೂತನ ರೀತಿಯಲ್ಲಿ If U want to earn respect with money and also willing to do anything for it reach/ contact me ಎಂಬ ಟ್ಯಾಗ್ ಲೈನ್ ಬಳಸಿ ಜಾಹೀರಾತನ್ನು ನೀಡುತ್ತಿದ್ದರು. ಲೋಕ್ಯಾಂಟೋ ಅಪ್ಲಿಕೇಷನ್ ನಲ್ಲಿ ಜಾಹೀರಾತು ಹಾಕಿ ಡ್ರಗ್ಸ್ ಸರಬರಾಜು ಮಾಡಲು ನಿರುದ್ಯೋಗಿ ಯುವಕರನ್ನು ಆಕರ್ಷಿಸುತ್ತಿದ್ದರು.
ಮೆಟ್ರೋ ನಗರಗಳೇ ಡ್ರಗ್ಸ್ ಅಡ್ಡೆ !
ಬೆಂಗಳೂರು, ದೆಹಲಿ, ಮುಂಬೈ ಮತ್ತು ಚೆನ್ನೈ ಮೆಟ್ರೋ ಪಾಲಿಟನ್ ಸಿಟಿಗಳ ಪಿಜಿಗಳಲ್ಲಿ ಇರುತ್ತಿದ್ದ ಯುವಕರಿಗೆ ಪೋಸ್ಟಲ್ ಸರ್ವೀಸ್ ಮತ್ತು ಕೊರಿಯರ್ ಮೂಲಕ ಡ್ರಗ್ಸ್ ಕಳಿಸಿಕೊಡುತ್ತಿದ್ದರು. ಪಿಜಿಯಲ್ಲೇ ಡ್ರಗ್ಸ್ ಇಟ್ಟುಕೊಂಡು ಯುವಕರು ಟೆಲಿಗ್ರಾಂ, ಇನ್ಸ್ಟಾಗ್ರಾಂ ಗಳನ್ನು ಬಳಸಿಕೊಂಡು ಗ್ರಾಹಕರನ್ನು ಸೆಳೆಯುತ್ತಿದ್ದರು. ವಿವಿಧ ಬಗೆಯ ಡ್ರಗ್ಸ್ ಮತ್ತು ಅವುಗಳ ದರದ ಬಗ್ಗೆ ಮಾಹಿತಿ ನೀಡಿ, ಟೆಲಿಗ್ರಾಂನಲ್ಲಿಯೇ ಆರ್ಡರ್ ಪಡೆದು ಸರಬರಾಜು ಮಾಡುತ್ತಿದ್ದರು.
The Karnataka police on Tuesday claimed to have busted a drug peddling gang which procured and supplied drugs at the clients' doorsteps by using dark net, crypto currency and messenger applications such as Instagram, Telegram in the metro cities.The Anti-Narcotics Wing of the City Central Crime Branch (CCB) had carried out an operation in Marathalli and Whitefield and seized Rs 2 crore worth drug substances and arrested five persons from Delhi and Bihar, police said.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm