ಬ್ರೇಕಿಂಗ್ ನ್ಯೂಸ್
02-08-22 10:32 pm HK News Desk ಕ್ರೈಂ
ಮುಂಬೈ, ಆಗಸ್ಟ್ 2 : ಖತರ್ನಾಕ್ ಮಹಿಳೆಯೊಬ್ಬಳು ತನ್ನದೇ ಬೆತ್ತಲೆ ವಿಡಿಯೋ ಇಟ್ಟುಕೊಂಡು ಇಬ್ಬರು ಹಿರಿಯ ನಾಗರಿಕರನ್ನು ಬೆದರಿಸಿ 3.63 ಲಕ್ಷ ರೂಪಾಯಿ ಹಣ ಪೀಕಿಸಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ಅಪರಿಚಿತ ಮಹಿಳೆಯೊಬ್ಬಳು ಜುಲೈ 28ರಂದು ಅಂಧೇರಿಯ 86 ವರ್ಷದ ನಿವಾಸಿಗೆ ವಿಡಿಯೋ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ಹಿರಿಯ ವ್ಯಕ್ತಿ ಬೆತ್ತಲೆಯಾಗಿದ್ದ ಮಹಿಳೆಯನ್ನು ನೋಡಿ ಶಾಕ್ ಆಗಿದ್ದರು. ಆದರೆ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಮಹಿಳೆ, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಳು.
ಇದರಿಂದ ಭೀತನಾಗಿದ್ದ ಹಿರಿಯ ವ್ಯಕ್ತಿ ಹಣ ಕೊಡಲು ಒಪ್ಪಿಕೊಂಡು, 2.99 ಲಕ್ಷ ರೂಪಾಯಿ ಹಣವನ್ನು ಎರಡು ಬ್ಯಾಂಕ್ ಖಾತೆಗಳಿಗೆ ಹಾಕಿದ್ದ. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಜುಲೈ 29ರಂದು ಅಂಬೋಲಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದ.
ಇದೇ ರೀತಿಯ ಮತ್ತೊಂದು ಪ್ರಕರಣ ಅದೇ ಏರಿಯಾದಲ್ಲಿ ನಡೆದಿದ್ದು ಹಿರಿಯ ನಾಗರಿಕನನ್ನು ಟಾರ್ಗೆಟ್ ಮಾಡಿದ್ದ ಖತರ್ನಾಕ್ ಲೇಡಿ ಜುಲೈ 9 ಮತ್ತು ಜುಲೈ 19ರ ನಡುವೆ ಎರಡು ಬಾರಿ ಬೆತ್ತಲೆ ವಿಡಿಯೋ ಕರೆ ಮಾಡಿದ್ದಳು. ರೆಕಾರ್ಡ್ ಮಾಡಿಕೊಂಡು ಬೆದರಿಸಿ, 64 ಸಾವಿರ ರೂ. ಹಣವನ್ನು ವಸೂಲಿ ಮಾಡಿದ್ದಳು. ಪೊಲೀಸರು ಎರಡೂ ದೂರುಗಳನ್ನು ಪಡೆದು ಐಪಿಸಿ ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.
A woman allegedly cheated two senior citizens of Rs 3.63 lakh by blackmailing them with a nude call video. The incident took place in Mumbai's Andheri area and Amboli police have registered an FIR in the case.An unknown woman reportedly made a video call to an 86-year-old Andheri resident on July 28. When he answered the call, the man was shocked to see a naked woman. The woman recorded the video call and blackmailed him to pay by threatening him to upload the video on social media.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm