ರುಂಡ ಇಲ್ಲದ ಶವ ಪತ್ತೆ ಹಿಂದೆ ಬಿದ್ದ ಪೊಲೀಸರಿಗೇ ಶಾಕ್ ; ವೇಶ್ಯೆಯನ್ನೇ ಪ್ರೀತಿಸಿ ಆಗಿದ್ದ ಸೈಕೋ ಕಿಲ್ಲರ್ ! ಮೂವರ ಕೊಲೆ, ಇನ್ನೂ ಐವರು ಮಹಿಳೆಯರಿಗೆ ಸ್ಕೆಚ್ ! 

05-08-22 03:23 pm       HK News Desk   ಕ್ರೈಂ

ರುಂಡ ಇಲ್ಲದೆ ಪತ್ತೆಯಾಗಿದ್ದ ಇಬ್ಬರು ಮಹಿಳೆಯರ ಶವ ಪತ್ತೆ ಪ್ರಕರಣದ ಬೆನ್ನತ್ತಿದ ಶ್ರೀರಂಗಪಟ್ಟಣ ಪೊಲೀಸರು ಎರಡು ತಿಂಗಳ ಬಳಿಕ ಭಯಾನಕ ವಿಚಾರವನ್ನು ಪತ್ತೆ ಮಾಡಿದ್ದಾರೆ.

ಮಂಡ್ಯ, ಆಗಸ್ಟ್ 5: ರುಂಡ ಇಲ್ಲದೆ ಪತ್ತೆಯಾಗಿದ್ದ ಇಬ್ಬರು ಮಹಿಳೆಯರ ಶವ ಪತ್ತೆ ಪ್ರಕರಣದ ಬೆನ್ನತ್ತಿದ ಶ್ರೀರಂಗಪಟ್ಟಣ ಪೊಲೀಸರು ಎರಡು ತಿಂಗಳ ಬಳಿಕ ಭಯಾನಕ ವಿಚಾರವನ್ನು ಪತ್ತೆ ಮಾಡಿದ್ದಾರೆ. ಒಬ್ಬ ಪುರುಷ ಮತ್ತು ಮಹಿಳೆಯನ್ನು ಬಂಧಿಸಿದ್ದು ಇಬ್ಬರಲ್ಲ ಮೂವರು ಮಹಿಳೆಯರನ್ನು ಭೀಭತ್ಸವಾಗಿ ಕೊಂದಿರುವ ಪ್ರಕರಣವನ್ನು ಬಯಲು ಮಾಡಿದ್ದಾರೆ. ‌

ಮಂಡ್ಯದಲ್ಲಿ ದಕ್ಷಿಣ ವಲಯ ಐಜಿಪಿ ಮಧುಕರ್ ಪವಾರ್ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‌ರಾಮನಗರ ಮಾಗಡಿ ಮೂಲದ ಸಿದ್ದಲಿಂಗಪ್ಪ ಮತ್ತು ಮಂಡ್ಯ ಜಿಲ್ಲೆಯ ಪಾಂಡವಪುರದ ಮಹಿಳೆ ಚಂದ್ರಕಲಾ ಬಂಧಿತರು. ಇವರಿಬ್ಬರು ಸೇರಿ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆ ಉದ್ದೇಶಕ್ಕೆ ಮೈಸೂರಿಗೆ ಕರೆದೊಯ್ದು ಕೊಲೆ ನಡೆಸಿದ್ದರು.‌ ಸಿದ್ಧಲಿಂಗಪ್ಪ ವೇಶ್ಯೆಯರ ಪ್ರೀತಿಯ ಬಲೆಗೆ ಬಿದ್ದು ಕೊನೆಗೆ ಸೈಕೋ ಕಿಲ್ಲರ್ ಆಗಿ ಬದಲಾಗಿದ್ದ. ದಕ್ಷಿಣ ಕನ್ನಡದಲ್ಲಿ 19 ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಒಬ್ಬೊಬ್ಬರನ್ನೇ ಚಿನ್ನದಾಸೆಗೆ ಬಿದ್ದು ಕೊಂದು ಹಾಕಿದ್ದ ಸೈನೇಡ್ ಮೋಹನ್ ರೀತಿಯಲ್ಲೇ ಸೈಕೋ‌ ಕಿಲ್ಲರ್ ಆಗಿದ್ದ ಸಿದ್ಧಲಿಂಗಪ್ಪ. ತನ್ನ ಕೃತ್ಯಕ್ಕೆ ಚಂದ್ರಕಲಾ ಎಂಬ ಮಹಿಳೆಯನ್ನೇ ಬಳಸಿಕೊಂಡಿದ್ದ. ಅಲ್ಲದೆ, ಆಕೆಯ ನೆಟ್ವರ್ಕಲ್ಲಿ ಇರುತ್ತಿದ್ದ ಹಣಕ್ಕಾಗಿ ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರನ್ನೇ ಟಾರ್ಗೆಟ್ ಮಾಡಿದ್ದ. 

ಬೆನ್ನು ಬೆನ್ನಿಗೆ ಪತ್ತೆಯಾಗಿತ್ತು ಎರಡು ಶವ ! 

ಜೂನ್ 3 ಮತ್ತು 6ರಂದು ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಮೃತದೇಹ ಪತ್ತೆಯಾಗಿದ್ದವು. ಕುತ್ತಿಗೆಯಿಂದ ರುಂಡವನ್ನು ಕಡಿದು ಹಾಕಿದ್ದರಿಂದ ಶವದ ಪತ್ತೆ ಭಾರೀ ಸವಾಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಸಾವಿರಾರು ನಾಪತ್ತೆ ಪ್ರಕರಣಗಳನ್ನ ಜಾಲಾಡಿದ್ರು ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ, ಜು.25 ರಂದು ಚಾಮರಾಜನಗರದಲ್ಲಿ ಮಹಿಳೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದರ ಹಿಂದೆ ಬಿದ್ದ ಪೊಲೀಸರಿಗೆ ಕೆಲವೊಂದು ಸುಳಿವು ಲಭಿಸಿತ್ತು.‌ ಆಕೆಯ ಫೋನ್ ಕರೆ ಆಧರಿಸಿ ತನಿಖೆ ನಡೆಸಿದಾಗ, ಭಯಾನಕ ವಿಚಾರಗಳು ಬಯಲಾಗಿವೆ. ಜು.3 ರಂದು ನಾಪತ್ತೆಯಾಗಿದ್ದ ಚಾಮರಾಜನಗರದ ಮಹಿಳೆಯ ಕುರಿತು ಜು.25 ರಂದು ದೂರು ನೀಡಲಾಗಿತ್ತು. ಆಕೆಗೂ ಬೆಂಗಳೂರು, ಮೈಸೂರು ನೆಟ್ವರ್ಕ್ ಇದ್ದುದು ತನಿಖೆಯಲ್ಲಿ ಕಂಡುಬರ್ತಿದ್ದಂತೆ ಫೋನಲ್ಲಿ ಕೊನೆಯ ಬಾರಿಗೆ ಹೆಚ್ಚು ಸಂಪರ್ಕದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಅಷ್ಟರಲ್ಲಿ ಮತ್ತೆರಡು ಕೊಲೆ ರಹಸ್ಯಗಳೂ ಬಯಲಾಗಿದ್ದವು. 

2 dead after drowning in Badlapur; bodies recovered | Mumbai news -  Hindustan Times

ಮೇ 30 ರಂದು ಚಿತ್ರದುರ್ಗ ಮೂಲದ ಮಹಿಳೆ ಕೊಲೆಯಾಗಿದ್ದು, ಜುಲೈ 3 ರಂದು ಚಾಮರಾಜನಗರ ಮೂಲದ ಮತ್ತೊಂದು ಮಹಿಳೆಯನ್ನು ಮನೆಗೆ ಕರೆಸಿ ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿತ್ತು. ಮಹಿಳೆಯರ ರುಂಡ ಮುಂಡ ಬೇರ್ಪಡಿಸಿ ಕಾಲುವೆಗೆ ಎಸೆದಿದ್ದರಿಂದ ಗುರುತು ಸಿಗದಂತಾಗಿತ್ತು. ಈ ಎರಡು ಕೊಲೆಗೂ ಮುನ್ನ ಬೆಂಗಳೂರಿನಲ್ಲಿ ಓರ್ವ ಮಹಿಳೆಯನ್ನು ರಾಕ್ಷಸರು ಕೊಲೆಗೈದಿದ್ದರು. ವಿಚಾರಣೆಯಲ್ಲಿ ಮೂರು ಕೊಲೆ ಹಾಗೂ ಇನ್ನೂ ಐದು ಹತ್ಯೆಗೆ ಸ್ಕೆಚ್ ಹಾಕಿದ್ದನ್ನು ಪಾಪಿಗಳು ಬಾಯ್ಬಿಟ್ಟಿದ್ದಾರೆ.

Karnataka cop deals with 100 more persons than UN standard | Bengaluru News  - Times of India

Man arrested in Kolkata with Rs 10 lakh cash

ಸುಳಿವಿತ್ತವರಿಗೆ ಲಕ್ಷ ರೂ. ಘೋಷಿಸಿದ್ದ ಪೊಲೀಸರು ! 

ಅಪರಿಚಿತ ಮಹಿಳೆಯರಿಬ್ಬರ ಶವ ಪತ್ತೆ ಹಿನ್ನೆಲೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಮಂಡ್ಯ ಪೊಲೀಸರು ಆಫರ್ ನೀಡಿದ್ದರು. ಪ್ರತ್ಯೇಕ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಶವ ಪತ್ತೆಯಾಗಿತ್ತು. ಪಾಂಡವಪುರ ವ್ಯಾಪ್ತಿಯ ಬೇಬಿ ಗ್ರಾಮದ ನಾಲೆಯಲ್ಲಿ ಒಂದು ಶವ ಪತ್ತೆಯಾದರೆ, ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಇನ್ನೊಂದು ಶವ ಪತ್ತೆಯಾಗಿತ್ತು. ಎರಡು ಮೃತದೇಹಗಳು ಒಂದೇ ಮಾದರಿಯಲ್ಲಿ ಪತ್ತೆಯಾಗಿದ್ದರಿಂದ ಒಂದೇ ಹಂತಕರು ಈ ರೀತಿ ಮಾಡಿದ್ದಾರೆಂದು ನಂಬಲಾಗಿತ್ತು. ಕೊನೆಗೂ ಅದೇ ನಿಜವಾಗಿದ್ದು ಹಂತಕರು ಸೆರೆಯಾಗಿದ್ದಾರೆ. 

ಮಹಿಳೆಯರನ್ನು ಪ್ರೀತಿಸುವ ನೆಪದಲ್ಲಿ ವೇಶ್ಯೆಯರನ್ನಾಗಿಯೂ ಬಳಸಿಕೊಳ್ಳುತ್ತಿದ್ದರು. ಕೊನೆಗೆ ಗಾರ್ಮೆಂಟ್ಸ್ ನಲ್ಲಿ ಉದ್ಯೋಗ ದೊರಕಿಸುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಕೊಯ್ದು ಭಯಾನಕವಾಗಿ ಕೊಲ್ಲುತ್ತಿದ್ದರು. ಅವರ ಬಳಿ ಇರುತ್ತಿದ್ದ ಹಣ, ಚಿನ್ನಾಭರಣವನ್ನು ದೋಚಿಕೊಂಡು ಹೋಗುತ್ತಿದ್ದರು. ಚಿನ್ನದ ಆಸೆಯಿಂದಲೇ ಈ ರೀತಿ ಕೊಲೆ ಮಾಡುತ್ತಿದ್ದರು ಎನ್ನೋದು ತನಿಖೆಯಲ್ಲಿ ಕಂಡುಬಂದಿದೆ. ‌

Srirangapatna Sub-Division Police have cracked the case of headless bodies of two women which were found discarded at two different places. While one woman’s body was found near Arakere, the body of another woman was found between Bebi Betta and K. Bettahalli on June 7.