ಬ್ರೇಕಿಂಗ್ ನ್ಯೂಸ್
05-08-22 03:55 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 5: ಸಿಲಿಕಾನ್ ಸಿಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಜನ್ಮಕೊಟ್ಟ ತಾಯಿಯೇ ಮಗುವನ್ನು ಅಪಾರ್ಟ್ಮೆಂಟ್ ನಾಲ್ಕನೇ ಮಹಡಿಯಿಂದ ಕೆಳಕ್ಕೆಸೆದು ಹತ್ಯೆಗೈದ ಘಟನೆ ನಡೆದಿದೆ.
ಬುದ್ದಿಮಾಂದ್ಯ ಮಗು ಎಂದು ಸ್ವತಃ ತಾಯಿಯೇ ನಾಲ್ಕನೇ ಮಹಡಿಯಿಂದ ಮಗುವನ್ನು ಕೆಳಕ್ಕೆಸೆದು ಕೊಂದಿದ್ದಾಳೆ. ಎತ್ತರದಿಂದ ಬಿದ್ದ ಐದು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆ ಸಿಲಿಕಾನ್ ಸಿಟಿಯ ಸಂಪಂಗಿ ರಾಮನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.
ಸ್ವತಃ ವೈದ್ಯೆಯೂ ಆಗಿರುವ ತಾಯಿ ಮೂರು ತಿಂಗಳ ಹಿಂದೆಯೇ ಮಗುವನ್ನು ರೈಲ್ವೆ ಸ್ಟೇಷನ್ ನಲ್ಲಿ ಬಿಟ್ಟು ಬಂದಿದ್ದಳು. ಬಳಿಕ ತಂದೆಯೇ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಈ ಬಾರಿ ಅಪಾರ್ಟ್ಮೆಂಟ್ ಕಟ್ಟಡದಿಂದ ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹಾರಲು ಯೋಚನೆ ಮಾಡುತ್ತಿದ್ದಾಗಲೇ ಪಕ್ಕದ ಮನೆಯವರು ಬಂದು ಆಕೆಯನ್ನು ರಕ್ಷಿಸಿದ್ದಾರೆ.
ಯುವತಿ ಸುಷ್ಮಾ ಎಂಬವಳಾಗಿದ್ದು ದಂತ ವೈದ್ಯಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದಳು. ಆಕೆಯ ಪತಿ ಖಾಸಗಿ ಕಂಪನಿಯಲ್ಲಿ ಇಂಜೀನಿಯರ್ ಆಗಿದ್ದ. ಆರೋಪಿ ಸುಷ್ಮಾ ವಿರುದ್ದ ಸಂಪಂಗಿ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊರಗಡೆ ಸುತ್ತಾಡಲು ಅಡ್ಡಿಯಾಗಿತ್ತಂತೆ ಮಗು !
ಕಿರಣ್ ಹಾಗೂ ಆರೋಪಿ ಸುಷ್ಮಾ 11 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ಸುಷ್ಮಾಗೆ ಮಗುವನ್ನು ಮಾಡಿಕೊಳ್ಳೋದು ಇಷ್ಟವಿರಲಿಲ್ಲ.
ಆದ್ರಿಂದ ಮದ್ವೆಯಾಗಿ ಏಳು ವರ್ಷವಾದ್ರು ಮಕ್ಕಳು ಮಾಡಿಕೊಂಡಿರಲಿಲ್ಲ. ಸುಷ್ಮಾ ನಿತ್ಯ ಹೊರಗಡೆ ಸುತ್ತಾಡುವುದು, ಮೋಜು ಮಾಡುವುದು ಅಭ್ಯಾಸ ಮಾಡಿಕೊಂಡಿದ್ದಳು. ಆದರೆ ಮನೆಯವರ ಒತ್ತಾಯದಿಂದ ನಾಲ್ಕು ವರ್ಷದ ಹಿಂದೆ ಹೆಣ್ಣು ಮಗು ಜನಿಸಿತ್ತು. ಒಂದುವರೆ ವರ್ಷದವರೆಗೂ ಚೆನ್ನಾಗಿದ್ದ ಮಗು ಬಳಿಕ ಬುದ್ಧಿಮಾಂದ್ಯ ರೀತಿ ಲಕ್ಷಣ ತೋರಿಸಿತ್ತು. ಇದರಿಂದ ಚಿಂತೆಗೊಳಗಾಗಿದ್ದ ಮಗುವಿನ ತಂದೆ, ಮಗು ಗುಣಮುಖವಾಗಲೆಂದು ಆಸ್ಪತ್ರೆ ಸುತ್ತುತ್ತಿದ್ದ. ಪತಿ ಕಿರಣ್ ಆಸ್ಪತ್ರೆ ಅಲೆದಾಡುವುದು ಪತ್ನಿಗೆ ಇಷ್ಟವಿರಲಿಲ್ಲ. ಇದರಿಂದ ಸಮಯ ವ್ಯರ್ಥ ಎಂದು ಹೇಳುತ್ತಿದ್ದಳು. ಮಗು ಆದಬಳಿಕ ಹೊರಗಡೆ ಸುತ್ತಾಡಲು ಆಗುತ್ತಿಲ್ಲ ಎಂದು ನೊಂದುಕೊಂಡಿದ್ದಳು. ತನ್ನ ಸುಖ ಜೀವನಕ್ಕೆ ಅಡ್ಡಿಯೆಂದು ಮಗುವನ್ನೇ ಕೊಲೆ ಮಾಡಿರೋದಾಗಿ ಕಿರಣ್ ಕುಟುಂಬಸ್ಥರು ಆರೋಪಿಸಿದ್ದಾರೆ.
Shocking Mother throws her 11-year-old mentally ill child from the apartment in Bangalore. Mother is said to be a doctor by profession. After seven years of marriage, she delivered a child but the child turned to be mentally ill. After throwing the child even she tries to attempt suicide but was held by the neighbors. She was irritated to go shopping or elsewhere because if this child that's the reason she committed this crime says police report.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm