ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಮಹಾರಾಷ್ಟ್ರದಲ್ಲಿ ಫಾರ್ಮ್ ಡೈರಿ ಹೆಸರಲ್ಲಿ ಕೋಟಿಗೂ ಮಿಕ್ಕಿ ಸಾಲ ; ಭದ್ರತೆ ನಿಂತ ಮಂಗಳೂರಿನ ವ್ಯಕ್ತಿಗೆ ಮೋಸ, ಮೂವರ ವಿರುದ್ಧ ಕೇಸು  

06-08-22 01:32 pm       Mangalore Correspondent   ಕ್ರೈಂ

ನಂಬಿಕಸ್ಥರಂತೆ ನಟಿಸಿದ್ದಲ್ಲದೆ, ಮಹಾರಾಷ್ಟ್ರದಲ್ಲಿ ಫಾರ್ಮ್ ಡೈರಿ ಮಾಡುತ್ತಿದ್ದೇವೆಂದು ಹೇಳಿ 1.75 ಕೋಟಿ ಬ್ಯಾಂಕ್ ಸಾಲ ಪಡೆದು ಅದಕ್ಕೆ ಜಾಮೀನು ನಿಲ್ಲಿಸಿ ಮೋಸಗೈದ ಬಗ್ಗೆ ವ್ಯಕ್ತಿಯೊಬ್ಬರು ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಗಳೂರು, ಆಗಸ್ಟ್ 6: ನಂಬಿಕಸ್ಥರಂತೆ ನಟಿಸಿದ್ದಲ್ಲದೆ, ಮಹಾರಾಷ್ಟ್ರದಲ್ಲಿ ಫಾರ್ಮ್ ಡೈರಿ ಮಾಡುತ್ತಿದ್ದೇವೆಂದು ಹೇಳಿ 1.75 ಕೋಟಿ ಬ್ಯಾಂಕ್ ಸಾಲ ಪಡೆದು ಅದಕ್ಕೆ ಜಾಮೀನು ನಿಲ್ಲಿಸಿ ಮೋಸಗೈದ ಬಗ್ಗೆ ವ್ಯಕ್ತಿಯೊಬ್ಬರು ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಧ್ವರಾಯ ಭಟ್ ಎಂಬವರು ಮೋಸ ಹೋದವರಾಗಿದ್ದು, ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ. ರಕ್ಷಾ ಬಾಳಿಗ, ನಿಧಿ ವಾಸುದೇವ ಕಾಮತ್ ಮತ್ತು ವಾಸುದೇವ ಕಾಮತ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ವಾಸುದೇವ ಕಾಮತ್ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಮಧ್ವರಾಯ ಭಟ್ ಅವರಿಗೆ ಪರಿಚಿತರೇ ಆಗಿದ್ದರು. ಹೀಗಾಗಿ ಮಹಾರಾಷ್ಟ್ರದಲ್ಲಿ ಡೈರಿ ಫಾರ್ಮ್ ಮಾಡುತ್ತಿದ್ದೇವೆಂದು ಹೇಳಿ ನಂಬಿಸಿದ್ದಲ್ಲದೆ, ಮಂಗಳೂರಿನ ಭಾರತ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ 1.75 ಕೋಟಿ ರುಪಾಯಿ ಸಾಲ ಪಡೆದಿದ್ದಾರೆ.

ಸಾಲದ ಮೊತ್ತಕ್ಕೆ ಮಧ್ವರಾಯ ಭಟ್ ಅವರನ್ನು ಜಾಮೀನು ನಿಲ್ಲುವಂತೆ ಪುಸಲಾಯಿಸಿದ್ದು ಭಟ್ ಅವರಿಗೆ ಸೇರಿದ 2.5 ಕೋಟಿ ಮೌಲ್ಯದ ಆಸ್ತಿಯ ದಾಖಲೆಯನ್ನು ಭದ್ರತೆಯಾಗಿ ಇರಿಸಿದ್ದರು. ಆರು ತಿಂಗಳಿಗಷ್ಟೇ ನಿಮ್ಮ ಭದ್ರತೆ ಸಾಕು, ಆಮೇಲೆ ನಾವು ಜಾಮೀನಿಗೆ ಬೇರೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಅದರಂತೆ, ವಿಶ್ವಾಸದಲ್ಲಿ ನಂಬಿದ್ದ ಮಧ್ವರಾಯ ಭಟ್ ಭದ್ರತೆ ನಿಲ್ಲುವುದಕ್ಕೆ ಒಪ್ಪಿದ್ದರು. ಆದರೆ, ವಾಸುದೇವ ಕಾಮತ್ ಮತ್ತು ಇತರರು ಬ್ಯಾಂಕಿಗೆ ಸಾಲ ಪಾವತಿ ಮಾಡದೆ ಮೋಸ ಮಾಡಿದ್ದಾರೆ. ಬ್ಯಾಂಕಿನಿಂದ ಮಧ್ವರಾಯ ಭಟ್ ಗೆ ನೋಟೀಸ್ ಬಂದಿದ್ದು, ಈ ಬಗ್ಗೆ ಆ ಮೂವರ ಗಮನಕ್ಕೆ ತಂದಾಗ ಬೆದರಿಸಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಲ್ಲದೆ, ನಾಪತ್ತೆಯಾಗಿದ್ದಾರೆ.

ನಂಬಿಕಸ್ಧರಂತೆ ನಟಿಸಿ ಮೋಸಗೈದ ಮೂವರು ಆರೋಪಿಗಳ ವಿರುದ್ಧ ಮಧ್ವರಾಯ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಬ್ಯಾಂಕಿನಿಂದ ಸಾಲ ತೆಗೆದುಕೊಂಡವರು ನಾಪತ್ತೆಯಾಗಿದ್ದರಿಂದ ಭಟ್ ಅವರಿಗೆ ನೋಟೀಸ್ ಬಂದಿದ್ದು ನೀವೇ ಸಾಲ ಪಾವತಿ ಮಾಡುವಂತೆ ಸೂಚಿಸಿದೆ. ಹೀಗಾಗಿ ಮಧ್ವರಾಯ ಭಟ್ ಕಂಗಾಲಾಗಿದ್ದಾರೆ.

A man filed complaint over three people of cheating his faith in them in posing as a guarantor for their bank loan by pledging his property  worth Rs 2.5 crore. Madhwaraya Bhat is the person who is taken for ride by Raksha Baliga, Nidhi Vasudeva Kamath and Vasudeva Kamath.