ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ದೆವ್ವ ಬಿಡಿಸಲು ಹೋಗಿ ಮಗುವನ್ನು ಹೊಡೆದು ಕೊಂದೇ ಬಿಟ್ಟ ಹೆತ್ತವರು ! ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದೇ ಸಾಕ್ಷ್ಯ !

07-08-22 09:12 pm       HK News Desk   ಕ್ರೈಂ

ಮೂಢನಂಬಿಕೆಗೆ ಜೋತು ಬಿದ್ದ ಹೆತ್ತವರು ತಮ್ಮ ಐದು ವರ್ಷದ ಕರುಳ ಕುಡಿಯನ್ನೇ ಹೊಡೆದು ಸಾಯಿಸಿದ ಘಟನೆ ನಾಗಪುರದಲ್ಲಿ ನಡೆದಿದೆ. ಶನಿವಾರ ನಸುಕಿನಲ್ಲಿ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ನಾಗಪುರ್, ಆಗಸ್ಟ್ 7: ಮೂಢನಂಬಿಕೆಗೆ ಜೋತು ಬಿದ್ದ ಹೆತ್ತವರು ತಮ್ಮ ಐದು ವರ್ಷದ ಕರುಳ ಕುಡಿಯನ್ನೇ ಹೊಡೆದು ಸಾಯಿಸಿದ ಘಟನೆ ನಾಗಪುರದಲ್ಲಿ ನಡೆದಿದೆ. ಶನಿವಾರ ನಸುಕಿನಲ್ಲಿ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮಗುವಿನ ತಂದೆ ಸಿದ್ಧಾರ್ಥ್ ಚಿಮ್ನೆ(45), ತಾಯಿ ರಂಜನಾ (42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ಬಂಧಿತರು. ನಾಗಪುರ ಜಿಲ್ಲೆಯ ಸುಭಾಸ್ ನಗರ ನಿವಾಸಿಯಾಗಿರುವ ಸಿದ್ಧಾರ್ಥ್ ಚಿಮ್ನೆ ಸ್ಥಳೀಯವಾಗಿ ಯೂಟ್ಯೂಬ್ ನ್ಯೂಸ್ ಚಾನೆಲ್ ನಡೆಸುತ್ತಿದ್ದ. ಒಂದು ತಿಂಗಳ ಹಿಂದೆ ಗುರು ಪೂರ್ಣಿಮೆಯಂದು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತಕಲ್ಘಾಟ್ ಎಂಬಲ್ಲಿರುವ ಮಸೀದಿಗೆ ತೆರಳಿದ್ದ. ಅಲ್ಲಿಂದ ಹಿಂತಿರುಗಿ ಬಂದ ಬಳಿಕ ಐದು ವರ್ಷದ ಹೆಣ್ಣು ಮಗುವಿನಲ್ಲಿ ವರ್ತನೆ ಬದಲಾಗಿತ್ತು. ವಿಚಿತ್ರವಾಗಿ ವರ್ತಿಸುತ್ತಿದ್ದರಿಂದ ಏನೋ ಪ್ರೇತ ಹಿಡಿದಿರಬೇಕೆಂದು ಕುಟುಂಬ ಸದಸ್ಯರು ನಂಬಿಕೊಂಡಿದ್ದರು.

Murder under Indian Penal Code: All you need to know about it

ಹೀಗಾಗಿ ದೆವ್ವ ಬಿಡಿಸಲು ಶುಕ್ರವಾರ ಮಧ್ಯರಾತ್ರಿ ಮನೆಯಲ್ಲೇ ಪ್ರೇತ ಬಿಡಿಸುವ ಕಾರ್ಯ ನಡೆಸಿದ್ದರು. ತಂದೆ, ತಾಯಿ ಮತ್ತು ಚಿಕ್ಕಮ್ಮ ಸೇರಿ ಕ್ರಿಯೆ ನಡೆಸಿದ್ದು ಅದನ್ನು ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಣವನ್ನೂ ಮಾಡಿದ್ದರು. ಕ್ರಿಯಾ ವಿಧಿಗಳನ್ನು ನಡೆಸುತ್ತಿದ್ದಾಗ ಮಗುವನ್ನು ಮುಂದಿಟ್ಟು ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು. ಉತ್ತರಿಸಲಾಗದ ಪ್ರಶ್ನೆಗಳಿಗೆ ಹೆದರಿ ಮಗು ಅಳುತ್ತಿತ್ತು. ಆದರೆ ದೆವ್ವ ಬಾಧೆಯಿಂದ ಮಗು ಉತ್ತರಿಸುತ್ತಿಲ್ಲ ಎಂದು ಅದರ ಮುಖಕ್ಕೆ ಹೊಡೆಯುತ್ತಿದ್ದರು. ಮೂವರೂ ಸೇರಿ ಮಗುವಿಗೆ ಹೊಡೆಯುವುದು ವಿಡಿಯೋದಲ್ಲಿ ದಾಖಲಾಗಿದೆ. ಪೊಲೀಸರು ಬಳಿಕ ಆರೋಪಿಗಳನ್ನು ಬಂಧಿಸಿದಾಗ, ಅವರ ಮೊಬೈಲಿನಲ್ಲಿ ವಿಡಿಯೋ ಇರುವುದು ಘಟನೆಗೆ ಸಾಕ್ಷ್ಯ ಸಿಕ್ಕಂತಾಗಿದೆ.

ತಲೆಗೆ ಬಿದ್ದ ಏಟಿನಿಂದಾಗಿ ಮಗು ಪ್ರಜ್ಞೆ ತಪ್ಪಿದ್ದು, ಕುಸಿದು ಬಿದ್ದಿದೆ. ಆನಂತರ, ಮನೆಯವರು ಆರೈಕೆ ಮಾಡಿದ್ದು ಬೆಳಗ್ಗಿನ ಹೊತ್ತಿಗೆ ತಕಲ್ಘಾಟ್ ಮಸೀದಿಗೆ ಕರೆತಂದಿದ್ದಾರೆ. ಬಳಿಕ, ಸ್ಥಳೀಯರ ಸೂಚನೆಯಂತೆ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಕರೆ ತರುವಾಗಲೇ ಮಗು ಮೃತಪಟ್ಟಿತ್ತು. ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಕುಟುಂಬ ಸದಸ್ಯರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಆದರೆ ಕುಟುಂಬಸ್ಥರ ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ಆಸ್ಪತ್ರೆ ಸೆಕ್ಯುರಿಟಿ ಗಾರ್ಡ್, ಅವರು ಬಂದಿದ್ದ ಕಾರಿನ ಫೋಟೋ ತೆಗೆದಿದ್ದ. ವೈದ್ಯರು ಮಗು ಸಾವನ್ನಪ್ಪಿದ್ದರಿಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಸೆಕ್ಯುರಿಟಿ ಗಾರ್ಡ್ ತೆಗೆದಿದ್ದ ಫೋಟೋವನ್ನೂ ಕೊಟ್ಟಿದ್ದರು. ಕಾರಿನ ರಿಜಿಸ್ಟರ್ ನಂಬರ್ ಆಧರಿಸಿ ಪೊಲೀಸರು ಮನೆಯವರನ್ನು ಪತ್ತೆಹಚ್ಚಿದ್ದು, ಮೂವರನ್ನೂ ಬಂಧಿಸಿ ಕರೆತಂದಿದ್ದಾರೆ. ರಾಣಾ ಪ್ರತಾಪ್ ನಗರ್ ಪೊಲೀಸರು ಆರೋಪಿಗಳ ವಿರುದ್ಧ ಮೂಢನಂಬಿಕೆ ವಿರೋಧಿ ಕಾನೂನು ಸೇರಿದಂತೆ ವಿವಿಧ ಸೆಕ್ಷನ್ ಅಡಿ ಕೇಸು ದಾಖಲಿಸಿದ್ದಾರೆ. 

The incident took place on the intervening night of Friday-Saturday following which police arrested the child's father, mother and aunt.