ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಕತ್ತು ಸೀಳಿದ ಶರ್ಮಾ ಆಂಟಿ ; ಬ್ಯಾಗಿನಲ್ಲಿ ಶವವನ್ನು ಅಡಗಿಸಿಟ್ಟ ರಾಕ್ಷಸಿ, ಡಿಂಗ್ ಡಾಂಗ್ ಲವ್ ಸ್ಟೋರಿ...! 

09-08-22 01:38 pm       HK News Desk   ಕ್ರೈಂ

ಪ್ರಿಯಕರನ ಕತ್ತು ಸೀಳಿ ಕೊಲೆ ಮಾಡಿ, ಮೃತದೇಹವನ್ನು ಟ್ರಾಲಿ ಬ್ಯಾಗ್​ನಲ್ಲು ತುಂಬಿ ಸಾಗಿಸುತ್ತಿದ್ದ ಆರೋಪಿ ಮಹಿಳೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. 

ಲಖನೌ, ಆಗಸ್ಟ್ 9: ಪ್ರಿಯಕರನ ಕತ್ತು ಸೀಳಿ ಕೊಲೆ ಮಾಡಿ, ಮೃತದೇಹವನ್ನು ಟ್ರಾಲಿ ಬ್ಯಾಗ್​ನಲ್ಲು ತುಂಬಿ ಸಾಗಿಸುತ್ತಿದ್ದ ಆರೋಪಿ ಮಹಿಳೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. 

ಕೊಲೆಯಾದ ಪ್ರಿಯಕರನ್ನು 22 ವರ್ಷದ ಫಿರೋಜ್​ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಕ್ಷೌರಿಕನಾಗಿದ್ದ. 36 ವರ್ಷದ ಪ್ರೇಯಸಿ ಪ್ರೀತಿ ಶರ್ಮಾ ಎಂಬಾಕೆಯಿಂದ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮದುವೆ ಆಗಲು ನಿಕಾರಿಸಿದ್ದಕ್ಕೆ ಪ್ರೀತಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಪ್ರೀತಿ ಮತ್ತು ಫಿರೋಜ್​ ಕಳೆದ 4 ವರ್ಷಗಳಿಂದ ಒಟ್ಟಿಗೆ ಬಾಳುತ್ತಿದ್ದರು ಅಂದರೆ, ಲಿವಿಂಗ್​ ರಿಲೇಶನ್ ಶಿಪ್ ನಲ್ಲಿದ್ದರು. ಪ್ರೀತಿಗೆ ಈಗಾಗಲೇ ಮದುವೆ ಆಗಿದ್ದು, ಮಕ್ಕಳ ಸಾವಿನ ಬಳಿಕ ಗಂಡನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ವೇಳೆ ಆಕೆಗೆ ಫಿರೋಜ್​ ಪರಿಚಯವಾಗಿದೆ. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಪ್ರೀತಿ ಮದುವೆ ಆಗುವಂತೆ ದುಂಬಾಲು ಬಿದ್ದಾಗ, ಮದುವೆ ಆಗಲು ಫಿರೋಜ್​ ನಿರಾಕರಿಸುತ್ತಿದ್ದ. ಕೋಮುಗಲಭೆಗೆ ಕಾರಣವಾಗಬಹುದು ಎಂಬ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಾಗ, ತಾಳ್ಮೆ ಕಳೆದುಕೊಂಡ ಪ್ರೀತಿ, ರೇಜರ್​ ತೆಗೆದುಕೊಂಡು ಫಿರೋಜ್​ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಬಳಿಕ ದೊಡ್ಡದಾಗ ಟ್ರಾಲಿ ಬ್ಯಾಗ್​ ತೆಗೆದುಕೊಂಡು ಮೃಹದೇಹವನ್ನು ಬೀಸಾಡಿ ಬರಲು ಹೋದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. 

ಸುಮಾರು ಒಂದು ದಿನಗಳ ಕಾಲ ಮೃತದೇಹವಿದ್ದ ಬ್ಯಾಗ್​ ಅನ್ನು ಅಪಾರ್ಟ್​ಮೆಂಟ್​ ಒಳಗೆ ಇಟ್ಟಿದ್ದಳು. ಜನಜಂಗುಳಿ ಇರುವ ಪ್ರದೇಶದಲ್ಲಿ ಎಸೆದು ಬರಲು ಯತ್ನಿಸುತ್ತಿದ್ದಳು. ಆದರೆ, ಅದೇ ಏರಿಯಾದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಗೊಂಡು ಆಕೆಯನ್ನು ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ, ಬ್ಯಾಗ್​ ಓಪನ್​ ಮಾಡುವಂತೆ ಕೇಳಿದ್ದಾರೆ. ಮೃತದೇಹ ಇದ್ದುದ್ದನ್ನು ನೋಡಿ ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಇದೊಂದು ಅಪಘಾತ ಎಂದು ಹೇಳಿದ್ದ ಪ್ರೀತಿ, ಕೊನೆಗೆ ತಪ್ಪು ಒಪ್ಪಿಕೊಂಡು ಜೈಲು ಪಾಲಾಗಿದ್ದಾಳೆ.

Ghaziabad Police has arrested a woman identified as Preeti Sharma for allegedly killing her live-in partner identified as a barber Firoz. Police said Sharma killed Firoz by slitting his throat with a razor. She was arrested by the Police while attempting to dispose of the body that she had stuffed in a trolley bag. She was planning to leave the dead body-stuffed suitcase on a train.