ಬ್ರೇಕಿಂಗ್ ನ್ಯೂಸ್
10-08-22 09:02 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 10: ತನಗೆ ಐಎಎಸ್, ಐಪಿಎಸ್ ಅಧಿಕಾರಿಗಳ ಪರಿಚಯ ಇದೆಯೆಂದು ನಂಬಿಸಿ ತಹಸೀಲ್ದಾರ್ ಹುದ್ದೆ ತೆಗೆಸಿಕೊಡುವುದಾಗಿ ಹೇಳಿ ಯುಪಿಎಸ್ಸಿ ಪರೀಕ್ಷೆಗೆ ರೆಡಿ ಮಾಡಿಕೊಳ್ತಿದ್ದ ಯುವತಿಯೊಬ್ಬಳಿಂದ ಬರೋಬ್ಬರಿ 59 ಲಕ್ಷ ರೂ. ಪೀಕಿಸಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು ವಿಜಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯಪುರ ಮೂಲದ ಸಿದ್ದರಾಜು ಕಟ್ಟಿಮನಿ ಕೆಎಎಸ್ ಪಾಸ್ ಮಾಡುವುದಾಗಿ ಹೇಳಿ ವಂಚಿಸಿರುವಾತ. ವಂಚನೆಗೊಳಗಾದ ಸವಿತಾ ಶಾಂತಪ್ಪ ಎಂಬ ಯುವತಿಯ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಸವಿತಾ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರದವರಾಗಿದ್ದು ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಸವಿತಾಗೆ ಆರೋಪಿ ಸಿದ್ದರಾಜ್ ಕಟ್ಟಿಮನಿ ಪರಿಚಿತನಾಗಿದ್ದ. ತಾನು ಹಲವು ಬಾರಿ ಕೆಎಎಸ್ ಪರೀಕ್ಷೆ ಬರೆದಿದ್ದು ಐಪಿಎಸ್, ಐಎಎಸ್ ಅಧಿಕಾರಿಗಳ ಪರಿಚಯ ಇದೆ. ಹಣ ಕೊಟ್ಟರೆ ಮಾತ್ರ ಪೋಸ್ಟ್ ಆಗೋದಾಗಿ ಹೇಳುತ್ತಿದ್ದ. ತಹಸೀಲ್ದಾರ್ ಪೋಸ್ಟ್ ತೆಗೆಸಿಕೊಡುತ್ತೇನೆ, ನಂಗೆ ಡಿಜಿಪಿ ಪ್ರವೀಣ್ ಸೂದ್, ಶಾಲಿನಿ ರಜನೀಶ್ ಅವರ ಪರಿಚಯ ಇದೆಯೆಂದು ಹೇಳಿಕೊಂಡು ನಂಬಿಸಿದ್ದ.
ಅದರಂತೆ, ಸವಿತಾ ತನ್ನ ತಂದೆಗೆ ಹೇಳಿ ಹಣ ರೆಡಿ ಮಾಡಿಸಿದ್ದು ಮೊದಲ ಹಂತದಲ್ಲಿ 15 ಲಕ್ಷ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದರು. ಆನಂತರ, ಹುದ್ದೆ ತೆಗೆಸಿಕೊಡುವವರು ಅಷ್ಟು ಹಣಕ್ಕೆ ಒಪ್ಪುತ್ತಿಲ್ಲ. ಮತ್ತಷ್ಟು ಹಣ ಕೇಳುತ್ತಿದ್ದಾರೆ. ಕೊಡದೇ ಇದ್ದರೆ ಹಳೆಯದು ಕೊಟ್ಟದ್ದೂ ವೇಸ್ಟ್ ಆಗುತ್ತದೆ ಎಂದು ನಂಬಿಸಿದ್ದಾನೆ. ಆಮೇಲೆ ತಾಯಿ, ಆಂಟಿ ಸೇರಿದಂತೆ ಹತ್ತಿರದ ಸಂಬಂಧಿಕರ ಆಭರಣ ಪಡೆದು ಅಡವಿಟ್ಟು 24 ಲಕ್ಷ ರೂ. ಸಂಗ್ರಹಿಸಿ ಸವಿತಾ ಮತ್ತು ಅವರ ತಂದೆ ಶಾಂತಪ್ಪ ಬೆಂಗಳೂರಿಗೆ ತಂದು ನೀಡಿದ್ದರು.
2020ರ ನಂತರ ಪದೇ ಪದೇ ಹಣ ಕೊಟ್ಟರೂ ಕೆಲಸ ತೆಗೆಸಿಕೊಡದೇ ಇದ್ದುದರಿಂದ ಸವಿತಾಗೆ ಸಂಶಯ ಉಂಟಾಗಿತ್ತು. ಒಂದು ವರ್ಷದ ನಂತರ ಹಣ ಕೇಳಿದಾಗ, 39 ಲಕ್ಷ ಕೊಟ್ಟಿದ್ದೀರಿ. ಈಗ ಮತ್ತೆ 20 ಲಕ್ಷ ಕೇಳುತ್ತಿದ್ದಾರೆ. ಅದನ್ನು ಕೊಟ್ಟಲ್ಲಿ ತಹಸೀಲ್ದಾರ್ ಕೆಲಸ ಖಚಿತ. ನೀವು ಹಿಂದೆ ಸರಿದರೆ ಈಗ ಕೊಟ್ಟದ್ದೂ ಹೋಗುತ್ತದೆ. ಯಾಕೆ ಹಣ ಕಳಕೊಳ್ತೀರಿ, ಏನಾದ್ರೂ ಮಾಡಿ ತಂದುಕೊಡಿ ಎಂದು ಸಿದ್ದರಾಜು ಕಟ್ಟೀಮನಿ ಹೇಳಿದ್ದ. ಯುವತಿ ಮತ್ತು ಆಕೆಯ ತಂದೆ ಶಾಂತಪ್ಪಗೆ ಸಿದ್ದರಾಜು ಮಾತು ಕೇಳಿ ಏನು ಮಾಡುವುದೆಂದು ತೋಚಲಿಲ್ಲ. ಹಣ ವಾಪಸ್ ಕೇಳಿದಲ್ಲಿ ಐಎಎಸ್ ಅಧಿಕಾರಿಗಳಿಗೆ ಹೇಳಿ ಕಿರುಕುಳ ನೀಡುತ್ತೇನೆಂದು ಬೆದರಿಸಿದ್ದ. ಕೊನೆಗೆ, ತಂದೆ ಶಾಂತಪ್ಪ ಅವರು ತನ್ನಲ್ಲಿದ್ದ 3.5 ಎಕರೆ ಜಮೀನನ್ನು ಅಡವಿಟ್ಟು ಬಡ್ಡಿಗೆ ಹಣ ಸಾಲ ಪಡೆದು 20 ಲಕ್ಷ ರೂ. ಒಟ್ಟು ಮಾಡಿ ಹಣವನ್ನು ನೀಡಿದ್ದರು. ಹೀಗೆ ಹಂತ ಹಂತವಾಗಿ ಒಟ್ಟು 59 ಲಕ್ಷ ರೂಪಾಯಿ ಹಣವನ್ನು ಸಿದ್ದರಾಜು ಮತ್ತು ಆತನ ತಂದೆ ಸುಭಾಸ್ ಕಟ್ಟೀಮನಿ ಮತ್ತು ಆತನ ಸ್ನೇಹಿತ ಶ್ರಿಧರ ಕೊಲ್ಲಾಪುರ ಎಂಬವರು ಪಡೆದಿದ್ದಾರೆ. ನಗದು ಕ್ಯಾಶ್ ಸೇರಿದಂತೆ ಈ ಮೂವರ ಖಾತೆಗೆ ಹಣವನ್ನು ಹಾಕಿಸಿದ್ದಾನೆ ಎಂದು ಯುವತಿ ಸವಿತಾ ದೂರಿನಲ್ಲಿ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಪ್ರವೀಣ್ ಸೂದ್ ತನಗೆ ಪರಿಚಿತರೆಂದು ಅವರ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಫೋಟೊ ತೋರಿಸಿ ಸಿದ್ದರಾಜು ನಂಬಿಸಿದ್ದ. ತಂದೆ ತನ್ನ ಜಮೀನು ಅಡಮಾನವಿಟ್ಟು ಹಣ ನೀಡಿದ್ದಾರೆ. ಈಗ ಹಣ ಕೇಳಿದರೆ, ಏನ್ ಮಾಡ್ತಿಯೋ ಮಾಡ್ಕೋ, ಹಣ ವಾಪಸ್ ಕೊಡಲ್ಲ ಅಂದಿದ್ದಾನೆ. ಮತ್ತೆ ಮತ್ತೆ ಹಣ ಕೇಳಿದ್ರೆ ನಿಮ್ಮ ಮನೆಯಲ್ಲಿ ಯಾರನ್ನೂ ಉಳಿಸಲ್ಲವೆಂದು ಬೆದರಿಕೆ ಹಾಕಿದ್ದಾನೆ. ಕೆಲಸ ಸಿಗದೇ ಹಣವೂ ಕಳೆದುಕೊಂಡು ಸವಿತಾ ಕುಟುಂಬ ಕಣ್ಣೀರು ಹಾಕಿದೆ. ಸದ್ಯ ತನಗಾದ ಅನ್ಯಾಯದ ಬಗ್ಗೆ ವಿಜಯನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತಾಳಿಕೋಟೆ ನಿವಾಸಿ ಸಿದ್ದರಾಜು ಕಟ್ಟೀಮನಿಯನ್ನು ಬಂಧಿಸಿದ್ದಾರೆ.
Bangalore Man cheats of Rs 59 lakhs promising to give Tahsildar jobs posing he knows IAS officers. The arrested has been identified as Siddaraju Kattimani from Vijayapura. He shows photos himself with IAS and IPS officers and has looted lakhs from innocents.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm