ಬ್ರೇಕಿಂಗ್ ನ್ಯೂಸ್
11-08-22 03:10 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 11: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಲ್ಪಟ್ಟ ಕೃತ್ಯದಲ್ಲಿ ನೇರ ಶಾಮೀಲಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಗಡಿಭಾಗ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27) ಮತ್ತು ಬಶೀರ್ ಎಲಿಮಲೆ (28) ಬಂಧಿತರು. ಶಿಹಾಬ್ ಸುಳ್ಯದಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದ. ರಿಯಾಜ್, ಬೆಳ್ಳಾರೆ ಮತ್ತು ಸುಳ್ಯದಲ್ಲಿ ಅಂಗಡಿಗಳಿಗೆ ಚಿಕನ್ ಸಪ್ಲೈ ಮಾಡುತ್ತಿದ್ದ. ಬಶೀರ್ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ. ಇವರನ್ನು ಸುಳ್ಯ ಇನ್ಸ್ ಪೆಕ್ಟರ್ ನವೀನಚಂದ್ರ ಜೋಗಿ ಅವರ ತಂಡವು ನಿಗಾ ಇಟ್ಟು ಬಂಧಿಸಿದೆ.
ಸಿಐಡಿ ಎಸ್ಪಿ ಅನುಚೇತ್, ಹಾಸನ ಎಸ್ಪಿ ಹರಿರಾಮ್ ಶಂಕರ್ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಸಹಕಾರ ನೀಡಿದ್ದಾರೆ. ಅಲ್ಲದೆ, ಚಿಕ್ಕಮಗಳೂರು, ಮಂಡ್ಯ, ಉಡುಪಿ ಪೊಲೀಸರು ಸಹಕಾರ ನೀಡಿದ್ದಾರೆ. ಪ್ರವೀಣ್ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಯವರು ಒತ್ತಡಕ್ಕೆ ಒಳಗಾಗಿದ್ದರು. ಪದೇ ಪದೇ ವಾಸಸ್ಥಳ ಬದಲಿಸುತ್ತಿದ್ದರಿಂದ ಆರೋಪಿಗಳ ಪತ್ತೆ ಸವಾಲಾಗಿತ್ತು. ಕೇರಳ ಗಡಿಭಾಗದಲ್ಲಿ ನಿಗಾ ಇಟ್ಟಿದ್ದ ಪೊಲೀಸರು ಇವರು ಜಾಗ ಬದಲಿಸುತ್ತಿದ್ದ ವೇಳೆಯಲ್ಲಿ ಬಂಧಿಸಿದ್ದಾರೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಆರೋಪಿಗಳಿಗೆ ಯಾವುದೇ ಸಂಘಟನೆಗಳ ಲಿಂಕ್ ಇದೆಯೇ ಎಂಬ ಪ್ರಶ್ನೆಗೆ, ಇವರು ಮೇಲ್ನೋಟಕ್ಕೆ ಪಿಎಫ್ಐ- ಎಸ್ಡಿಪಿಐ ಜೊತೆ ಲಿಂಕ್ ಹೊಂದಿರುವ ಬಗ್ಗೆ ಶಂಕೆಯಿದೆ. ಆದರೆ ಈಗಲೇ ಅದರ ಬಗ್ಗೆ ನಾವು ಹೇಳಲು ಬರುವುದಿಲ್ಲ. ಅವರ ಹಿನ್ನೆಲೆ ಏನು, ಯಾಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆ ಎಂಬ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ. ಇವರು ಕೃತ್ಯ ಎಸಗಿದ ಬಳಿಕ ಮೊದಲು ಕಾಸರಗೋಡಿನ ಮಾಲಿಕುದ್ದೀನಾರ್ ಮಸೀದಿ ಬಳಿಗೆ ಹೋಗಿದ್ದರು. ಅಲ್ಲಿಂದ ಬೇರೆ ಬೇರೆ ಕಡೆಗಳಿಗೆ ತೆರಳಿ ಅಡಗಿಕೊಂಡಿದ್ದರು. ಜಾಗ ಬದಲಿಸಲು ಯಾರೆಲ್ಲ ಸಹಾಯ ಮಾಡಿದ್ದಾರೆ, ಅವರ ಮೇಲೆ ಕ್ರಮ ಕೈಗೊಳ್ತೇವೆ. ಆರೋಪಿಗಳು ಪತ್ತೆಯಾಗದೇ ಇದ್ದರೆ ವಾರೆಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಲು ಮುಂದಾಗಿದ್ದೆವು. ಆದರೆ ಆರೋಪಿಗಳು ಈಗ ಸಿಕ್ಕಿಬಿದ್ದಿದ್ದಾರೆ.
ಪ್ರವೀಣ್ ಯಾಕಾಗಿ ಟಾರ್ಗೆಟ್ ಆಗಿದ್ದ ಅನ್ನೋದ್ರ ಬಗ್ಗೆ ತಿಳಿಯಲು ಇನ್ನಷ್ಟು ತನಿಖೆ ನಡೆಸಲಾಗುವುದು. ಕೃತ್ಯಕ್ಕೆ ಸ್ಪ್ಲೆಂಡರ್ ಬೈಕನ್ನು ಬಳಕೆ ಮಾಡಿದ್ದರು. ಆನಂತರ, ಪರಾರಿಯಾಗಲು ಐದಾರು ವಾಹನ ಬಳಕೆ ಮಾಡಿದ್ದಾರೆ. ಅವನ್ನು ವಶಕ್ಕೆ ಪಡೆಯಲಾಗುವುದು. ಕೃತ್ಯಕ್ಕೆ ಬಳಸಿದ್ದ ಹತ್ಯಾರುಗಳನ್ನು ವಶಕ್ಕೆ ತೆಗೆಯಲಾಗುವುದು ಎಂದರು ಎಡಿಜಿಪಿ. ಈಗಾಗಲೇ ಎನ್ಐಎ ಅಧಿಕಾರಿಗಳು ತನಿಖೆಗೆ ಸಾಥ್ ನೀಡಿದ್ದಾರೆ. ಮುಂದಿನ ತನಿಖೆಯನ್ನು ಎನ್ಐಎ ಅಧಿಕಾರಿಗಳು ಮಾಡಲಿದ್ದಾರೆ. ಯಾರೆಲ್ಲ ಸಹಕಾರ ನೀಡಿದ್ದಾರೆ ಎಂಬುದನ್ನು ಅವರು ಪತ್ತೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
Praveen Bellare murder three arrested including one who was the mastermind to murder Praveen have been arrested from Kerala border says ADGP Alok Kumar.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm