ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮೂವರು ಕಳ್ಳಿಯರ ಸೆರೆ

04-10-20 02:47 pm       Headline Karnataka News Network   ಕ್ರೈಂ

ಮಂಗಳೂರಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮೂರು ಮಹಿಳೆಯರನ್ನು ಬಂಧಿಸುವಲ್ಲಿ ಮಂಗಳೂರು ಕದ್ರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ

ಮಂಗಳೂರು, ಅಕ್ಟೋಬರ್. 04 : ಮನೆಯಲ್ಲಿ ಯಾರೂ ಇಲ್ಲದ ವೇಳೆ  ಸಮಯ ನೋಡಿಕೊಂಡು ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಮೂವರು ಮಹಿಳೆಯರನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ಹಾಸನ ಜಿಲ್ಲೆಯ ಹೊಳೆ ನರಸೀಪುರದ ಶಿವಗಾಮಿ(37), ಮಂಜು(26), ಲಚುಮಿ(30) ಎಂದು ಗುರುತಿಸಲಾಗಿದೆ. 

ಮಂಗಳೂರು ನಗರದ ಶಿವಬಾಗ್ ನ ತಾರೆತೋಟದ  ಬಳಿ ಸೆಪ್ಟೆಂಬರ್ 13 ರಂದು ರೂಪಾ ಎಂಬವರು ಮಧ್ಯಾಹ್ನ ಹೊತ್ತಿಗೆ ಮಕ್ಕಳ ಜೊತೆ ಅಂಗಡಿಗೆ ತೆರಳಿದ್ದರು. ಸ್ವಲ್ಪ ಹೊತ್ತಿನಲ್ಲಿ ಮರಳಿ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಮನೆಯಲ್ಲಿದ್ದ 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ,000 ನಗದು ಕಳವಾಗಿತ್ತು. ಬಳಿಕ ರೂಪಾ, ಕದ್ರಿ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರು ಮಹಿಳಾ ಕಳ್ಳಿಯರನ್ನು ಬಂಧಿಸಿದ್ದಾರೆ.

ಅಪರಾಧಿಗಳಿಂದ ಕಳವಾಗಿದ್ದ ಚಿನ್ನಾಭರಣ ಹಾಗೂ ಕಳವು ಮಾಡಲು ಉಪಯೋಗಿಸಿದ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್, ಉಪ ಪೊಲೀಸ್ ಆಯುಕ್ತ  ಅರುನಂಶಗಿರಿ, ಉಪ ಪೊಲೀಸ್ ಆಯುಕ್ತ ಅಪರಾಧ ಹಾಗೂ ಸಂಚಾರ ವಿಭಾಗ ವಿನಯ್ ಗಾವಂಕರ್,  ಸಹಾಯಕ ಪೊಲೀಸ್ ಆಯುಕ್ತ ಎಂ ಜಗದೀಶ್, ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಸವಿತೃ ತೇಜ ಪಿ.ಡಿ, ಪಿ ಎಸ್ ಐ ಅನಿತಾ ನಿಕ್ಕಂ, ಪಿ ಎಸ್ ಐ ಜ್ಞಾನಶೇಕರ್, ಎ ಎಸ್ ಐ ಶಶಿಧರ್ ಶೆಟ್ಟಿ ಜನಾರ್ಧನ ನಾಯ್ಕ್ ಮತ್ತು ಸಿಬ್ಬಂದಿಗಳಾದ ಜಯಾನಂದ, ಉಮೇಶ್  ಕೊಟ್ಟಾರಿ, ಆಶಿತ್, ದಿನೇಶ್, ರಾಘವೇಂದ್ರ, ನಾಗರಾಜ, ದೇವಿ ಪ್ರಸಾದ್, ಪ್ರಮೀಳಾ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.