ಬ್ರೇಕಿಂಗ್ ನ್ಯೂಸ್
13-08-22 11:21 am Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 12: ವಾರೆಂಟ್ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಮೂಡುಬಿದ್ರೆ ಪೊಲೀಸರ ಮೇಲೆ ಚೂರಿಯಿಂದ ಇರಿಯಲು ಯತ್ನಿಸಿದ ಘಟನೆ ತೋಡಾರು ಬಳಿಯ ಹಿದಾಯತ್ ನಗರದಲ್ಲಿ ನಡೆದಿದೆ.
ಹಲವು ಪ್ರಕರಣಗಳಲ್ಲಿ ಕೋರ್ಟಿಗೆ ಹಾಜರಾಗದೆ ಬಂಧನ ವಾರೆಂಟ್ ಎದುರಿಸುತ್ತಿದ್ದ ತೋಡಾರು ಹಿದಾಯತ್ ನಗರ ನಿವಾಸಿ ಕ್ಯಾಬರ್ ಫೈಜಲ್ ಎಂಬಾತನನ್ನು ಬಂಧಿಸಲೆಂದು ಮೂಡುಬಿದ್ರೆ ಪೊಲೀಸರು ಆತನ ನಿವಾಸಕ್ಕೆ ತೆರಳಿದ್ದರು. ಶುಕ್ರವಾರ ಮಧ್ಯಾಹ್ನ ಪೊಲೀಸರು ತೆರಳಿದ್ದಾಗ, ಆತನ ತಂದೆ ಹಮೀದ್ ಮನೆಯ ಮುಂಭಾಗದಲ್ಲಿ ಅಡ್ಡ ನಿಂತು ಏಯ್ ಪೊಲೀಸ್ ನಾಯಿಗಳೇ ನನ್ನ ಮಗನನ್ನು ಅರೆಸ್ಟ್ ಮಾಡಲು ಬಿಡುವುದಿಲ್ಲ. ಏನು ಮಾಡುತ್ತೀರಿ ಎಂದು ಅವಾಚ್ಯ ಪದಗಳಿಂದ ನಿಂದಿಸಿ ಪೊಲೀಸರನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಇದೇ ವೇಳೆ, ಮನೆಯೊಳಗಿದ್ದ ಫೈಜಲ್ ಹಿಂಬಾಗಿಲ ಮೂಲಕ ತಪ್ಪಿಸಿಕೊಳ್ಳಲೆಂದು ಓಡಿದ್ದು, ಕೂಡಲೇ ಹೆಡ್ ಕಾನ್ಸ್ ಟೇಬಲ್ ಅಯ್ಯಪ್ಪ ಹೊರಗಿನಿಂದ ಹಿಂಬಾಗಿಲಿನತ್ತ ಹೋಗಿ ಅಡ್ಡ ನಿಂತಿದ್ದಾರೆ. ಅಯ್ಯಪ್ಪ ಅವರನ್ನು ಕೊಲೆಗೈಯುವ ಉದ್ದೇಶದಿಂದ ಫೈಜಲ್ ಹರಿತವಾದ ಡ್ರಾಗರ್ ಬೀಸಿದ್ದು ಹೊಟ್ಟೆಯ ಭಾಗಕ್ಕೆ ಇರಿಯಲು ಯತ್ನಿಸಿದ್ದಾನೆ. ಅಯ್ಯಪ್ಪ ತಪ್ಪಿಸಿಕೊಂಡಿದ್ದರಿಂದ ಡ್ರಾಗರ್ ತುದಿಯು ಬಲಗೈಗೆ ತಾಗಿದ್ದು ಗಾಯವಾಗಿದೆ. ಕೂಡಲೇ ಎಎಸ್ಐ ರಾಜೇಶ್ ಅಲ್ಲಿಗೆ ತೆರಳಿ ಫೈಜಲ್ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ, ಅವರಿಗೂ ಡ್ರಾಗರ್ ತೋರಿಸಿ ಮುಂದೆ ಬಂದಲ್ಲಿ ಕೊಲ್ಲುವುದಾಗಿ ಬೆದರಿಸಿ, ಮನೆಯ ಹಿಂಭಾಗದಲ್ಲಿರುವ ಹಾಡಿ ಪ್ರದೇಶದಲ್ಲಿ ತಪ್ಪಿಸಿಕೊಂಡಿದ್ದಾನೆ.
ಕೂಡಲೇ ಠಾಣೆಗೆ ವಿಷಯ ಮುಟ್ಟಿಸಿದ್ದು, ಎಸ್ಐ ಸುದೀಪ್ ಮತ್ತು ಎಸ್ಐ ದಿವಾಕರ ರೈ ಸಿಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಆರೋಪಿ ಓಡಿಹೋದ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ತೋಡಾರಿನ ಬದ್ರಿಯಾ ಸುನ್ನಿ ಜುಮ್ಮಾ ಮಸೀದಿಯ ಹಿಂಭಾಗದ ಗುಡ್ಡದಲ್ಲಿ ಅವಿತುಕೊಂಡಿದ್ದನ್ನು ಪತ್ತೆಹಚ್ಚಿ, ಪೊಲೀಸರು ರೌಂಡಪ್ ಮಾಡಿ ಡ್ರಾಗರ್ ಸಹಿತ ಬಂಧಿಸಿದ್ದಾರೆ. ಈ ಬಗ್ಗೆ ಎಎಸ್ಐ ರಾಜೇಶ್ ಮೂಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದು, ಮೊಹಮ್ಮದ್ ಫೈಜಲ್ ಮತ್ತು ಹಮೀದ್ ವಿರುದ್ಧ ಪ್ರಕರಣ ದಾಖಲಾಗಿದೆ. ಫೈಜಲ್ ವಿರುದ್ಧ ಮಂಗಳೂರು ಗ್ರಾಮಾಂತರ, ಮೂಡುಬಿದ್ರೆ, ಬಜ್ಪೆ, ವೇಣೂರು ಠಾಣೆ ಸೇರಿದಂತೆ ವಿವಿಧ ಕಡೆ 15 ಪ್ರಕರಣ ದಾಖಲಾಗಿದೆ. ಮೂರು ಪ್ರಕರಣಗಳಲ್ಲಿ ಮಂಗಳೂರು ಮತ್ತು ಮೂಡುಬಿದ್ರೆ ಕೋರ್ಟಿನಲ್ಲಿ ವಾರೆಂಟ್ ಜಾರಿಯಾಗಿತ್ತು.
The city police on Friday, August 12, arrested an accused who has several criminal cases against him in various police stations and was evading the arrest warrants repeatedly. The arrested accused is identified as Mohammed Faizal (33) alias Cabaret Faizal, a resident of Thodar village in Moodbidri.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm