ಬ್ರೇಕಿಂಗ್ ನ್ಯೂಸ್
13-08-22 04:37 pm Udupi Correspondent ಕ್ರೈಂ
ಪಡುಬಿದ್ರಿ, ಆಗಸ್ಟ್ 13 : ಮಹಿಳೆಯರಿದ್ದ ಮನೆಗೆ ಬಂದಿದ್ದ ಯುವಕನೊಬ್ಬ ಅವರಲ್ಲಿ ಒಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅವರು ಧರಿಸಿದ್ದ ಆಭರಣಗಳನ್ನೇ ಉಪಾಯದಿಂದ ಹೊತ್ತೊಯ್ದ ಘಟನೆ ಪಲಿಮಾರಿನಲ್ಲಿ ನಡೆದಿದ್ದು, ಈ ಬಗ್ಗೆ ಅಕ್ಕ-ತಂಗಿ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಮೇ ತಿಂಗಳ ಮೊದಲ ವಾರದಲ್ಲಿ ತನ್ನನ್ನು ಹರೀಶ್ ಪುತ್ತೂರು ಎಂದು ಪರಿಚಯಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಆ ಮನೆಗೆ ಬಂದಿದ್ದ. ವಿಶ್ವಕರ್ಮ ಸಮುದಾಯದ ವ್ಯಕ್ತಿಯೆಂದು ಹೇಳಿಕೊಂಡಿದ್ದಲ್ಲದೆ, ತನಗೆ ಕುಂದಾಪುರದಲ್ಲಿ 80 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದೆಯೆಂದು ಹೇಳಿಕೊಂಡಿದ್ದ. ಅದನ್ನು ಮಾರಾಟ ಮಾಡಲು ನೋಡುತ್ತಿದ್ದೇನೆ. ಆದರೆ, ಆಸ್ತಿ ದಾಖಲೆ ಪತ್ರಗಳು ಬ್ಯಾಂಕಿನಲ್ಲಿದ್ದು, ಅದನ್ನು ಮರಳಿ ಪಡೆಯಲು ಒಂದಷ್ಟು ಹಣ ಬೇಕಾಗಿದೆ ಎಂದು ಹೇಳಿದ್ದಾನೆ.
ಮನೆಯಲ್ಲಿದ್ದ ಶೋಭಾ ಮತ್ತು ಆಕೆಯ ಅಕ್ಕ ಶ್ಯಾಮಲಾ ತಮ್ಮಲ್ಲಿ ಹಣ ಇಲ್ಲವೆಂದು ಹೇಳಿದ್ದಾರೆ. ಆನಂತರ, ಯುವಕ ಅಕ್ಕ-ತಂಗಿಯರನ್ನು ನಂಬಿಸಿದ್ದು, ನೀವು ಏನಾದ್ರೂ ಮಾಡಿ ಹಣ ಕೊಟ್ಟರೆ ಅದಕ್ಕೆ ಒಂದಷ್ಟು ಬಡ್ಡಿ ಸೇರಿಸಿ ಮರಳಿ ಕೊಡುತ್ತೇನೆ, ಎರಡೇ ದಿನದಲ್ಲಿ ಹಣ ಹಿಂತಿರುಗಿಸುತ್ತೇನೆ ಎಂದು ನಂಬಿಸಿದ್ದಾನೆ. ನಮ್ಮಲ್ಲಿ ಹಣ ಇಲ್ಲವೆಂದು ಹೇಳಿದಾಗ, ಒಮ್ಮೆಗೆ ಬಂಗಾರ ಇದ್ದರೂ ಆಗಬಹುದು ಎಂದು ಹೇಳಿದ್ದಾನೆ. ಕೊನೆಗೆ ಯುವಕನ ಬಣ್ಣನೆ ಮಾತುಗಳನ್ನು ನಂಬಿದ ಅಕ್ಕ-ತಂಗಿಯರು ತಮ್ಮಲ್ಲಿದ್ದ ಉಂಗುರ, ಕಿವಿಯೋಲೆ, ಎರಡೂವರೆ ಪವನ್ ತೂಕದ ಚಿನ್ನದ ಸರ ತೆಗೆದು ಕೊಟ್ಟಿದ್ದಾರೆ. ಒಟ್ಟು 1.65 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಆತನಿಗೆ ಕೊಟ್ಟಿದ್ದಾರೆ.
ಅಲ್ಲಿಂದ ಹಿಂತಿರುಗುವ ಸಂದರ್ಭದಲ್ಲಿ ಎರಡೇ ದಿನದಲ್ಲಿ ಹಿಂತಿರುಗಿ ಕೊಡುತ್ತೇನೆ. ತನ್ನ ಜಾಗ ಸೇಲ್ ಆಗಲಿದ್ದು, ಮೇ 16ರಂದು ಖಂಡಿತ ಬರುತ್ತೇನೆ ಎಂದು ಭರವಸೆ ಕೊಟ್ಟು ಹೋಗಿದ್ದ. ಆದರೆ ಚಿನ್ನಾಭರಣ ತೆಗೆದುಕೊಂಡು ಹೋದವನು ಮತ್ತೆ ಬಂದಿಲ್ಲ. ಅಂದು ಮನೆಯಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡು ನಂಬಿಕೆ ಹುಟ್ಟಿಸಿದ್ದ. ಮುಂದೆ ಮದುವೆ ಆಗೋದಾಗಿಯೂ ಭರವಸೆ ನೀಡಿದ್ದ. ಮೋಸ ಮಾಡುವ ಉದ್ದೇಶದಿಂದಲೇ ಚಿನ್ನ ತೆಗೆದುಕೊಂಡು ಹೋಗಿದ್ದಾನೆ ಎಂದು ಪಡುಬಿದ್ರಿ ಠಾಣೆಗೆ ನೀಡಿರುವ ದೂರಿನಲ್ಲಿ ಶೋಭಾ ತಿಳಿಸಿದ್ದಾರೆ.
A case is filed at Padubidri police station in which it is accused that a stranger, who introduced himself as Harish Puttur and belonging to Vishwakarma community, came to the house of Shobha, resident of Palimaru on May 6 and took Rs 1.65 lac worth golden ornaments and cheater her.The accused stranger said to complainant Shobha that his property at Kundapur is sold for Rs 80 lac and the documents are in bank and he needs money to get the documents.
11-01-25 09:14 pm
Bangalore Correspondent
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm