ಬ್ರೇಕಿಂಗ್ ನ್ಯೂಸ್
13-08-22 09:17 pm HK News Desk ಕ್ರೈಂ
ಹಾಸನ, ಆಗಸ್ಟ್ 13: ಕೋರ್ಟ್ ಆವರಣದಲ್ಲೇ ತನ್ನ ಪತ್ನಿಯ ಕತ್ತನ್ನೇ ಕೊಯ್ದು ಗಂಡನೇ ಬರ್ಬರವಾಗಿ ಹತ್ಯೆಗೈದ ಭಯಾನಕ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಶನಿವಾರ ನಡೆದಿದೆ. ಪತ್ನಿ ಚೈತ್ರಾಳನ್ನು ಕೊಂದ ಆರೋಪಿ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್, ಹೊನಮಾರನಹಳ್ಳಿ ಗ್ರಾಮದ ನಿವಾಸಿ ಚೈತ್ರಾಳನ್ನು 7 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡೂ ಮಕ್ಕಳು ಹೆಣ್ಣು ಎಂಬ ಕಾರಣಕ್ಕೆ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ. ಇದೇ ವಿಚಾರದಲ್ಲಿ ಕೊರೊನಾ ಲಾಕ್ಡೌನ್ ವೇಳೆ ಭಾರೀ ಗಲಾಟೆ ಆಗಿತ್ತು. ಚೈತ್ರಾಳ ಸರ, ಕಿವಿಯೋಲೆ ಕಿತ್ತುಕೊಂಡು ಗಂಡನೇ ಹಲ್ಲೆ ಮಾಡಿದ್ದ. ಗಂಡನ ಕಾಟ ತಾಳಲಾರದೆ ಚೈತ್ರಾ ತವರು ಮನೆಯಲ್ಲೇ ಇದ್ದಳು. ಇತ್ತೀಚೆಗೆ ಗಂಡನಿಂದ ವಿಚ್ಚೇದನ ಕೋರಿ ಚೈತ್ರಾ ಕೋರ್ಟ್ ಮೆಟ್ಟಿಲೇರಿದ್ದಳು. ಆದರೆ ಅಲ್ಲಿಗೆ ಬಂದಿದ್ದ ಶಿವಕುಮಾರ್, ಕೋರ್ಟ್ ಆವರಣದಲ್ಲಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಪುಟ್ಟ ಮಕ್ಕಳಿಗೆ ತಾಯಿ ಇಲ್ಲದಂಗೆ ಮಾಡಿಬಿಟ್ಟ ಎಂದು ಚೈತ್ರಾಳ ಚಿಕ್ಕಮ್ಮ ಆಸ್ಪತ್ರೆಯ ಶವಾಗಾರದ ಬಳಿ ಗೋಳಾಡುತ್ತಿದ್ದರು. ಗಂಡನಿಂದ ವಿಚ್ಚೇದನ ಮತ್ತು ಜೀವನಾಂಶ ಕೋರಿ ಚೈತ್ರಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಶನಿವಾರ ಹೊಳೆನರಸೀಪುರ ಕೋರ್ಟ್ಗೆ ಚೈತ್ರಾ ಆಗಮಿಸಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಕೋರ್ಟ್ ಆವರಣದ ಶೌಚಗೃಹಕ್ಕೆ ಚೈತ್ರಾ ತೆರಳಿದ್ದಾಗ ಹೊಂಚುಹಾಕಿ ಕಾಯುತ್ತಿದ್ದ ಶಿವಕುಮಾರ್, ಆಕೆಯ ಕತ್ತು ಕೊಯ್ದು ಪರಾರಿಯಾಗಲು ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಚೈತ್ರಾಳನ್ನು ಕೂಡಲೇ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ.
ಇತ್ತ ಚೈತ್ರಾಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಗತ್ತಿನ ಪರಿವೆ ಇಲ್ಲದ ಪುಟ್ಟ ಮಕ್ಕಳು ಸಂಬಂಧಿಕರ ಗೋಳಾಟ ನೋಡಿ ಮಂಕಾಗಿದ್ದಾರೆ.
A man murdered his estranged wife inside a court premises in Holenarasipur town on Saturday.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm