ಫೆಡರಲ್ ಬ್ಯಾಂಕಿಗೆ ನುಗ್ಗಿದ ಮುಸುಕುಧಾರಿಗಳಿಂದ 32 ಕೇಜಿ ಚಿನ್ನ ದರೋಡೆ ; ಬ್ಯಾಂಕ್ ಸಿಬಂದಿಯೇ ಶಾಮೀಲು ! 

14-08-22 12:24 pm       HK News Desk   ಕ್ರೈಂ

ಬ್ಯಾಂಕಿಗೆ ನುಗ್ಗಿದ ದರೋಡೆಕೋರರ ತಂಡ ಕೋಟ್ಯಂತರ ಮೌಲ್ಯದ ಬರೋಬ್ಬರಿ 32 ಕೆಜಿ ಚಿನ್ನವನ್ನು ದೋಚಿರುವ ಘಟನೆ ಶನಿವಾರ ಸಂಜೆ ಚೆನ್ನೈ ನಗರದಲ್ಲಿ ನಡೆದಿದೆ. 

ಚೆನ್ನೈ, ಆ.14 : ಬ್ಯಾಂಕಿಗೆ ನುಗ್ಗಿದ ದರೋಡೆಕೋರರ ತಂಡ ಕೋಟ್ಯಂತರ ಮೌಲ್ಯದ ಬರೋಬ್ಬರಿ 32 ಕೆಜಿ ಚಿನ್ನವನ್ನು ದೋಚಿರುವ ಘಟನೆ ಶನಿವಾರ ಸಂಜೆ ಚೆನ್ನೈ ನಗರದಲ್ಲಿ ನಡೆದಿದೆ. 

ಅರುಂಬಾಕಂ ಎಂಬಲ್ಲಿರುವ  ಫೆಡರಲ್‌ ಬ್ಯಾಂಕ್ ಗೋಲ್ಡ್ ಲೋನ್ ಶಾಖೆಗೆ ನುಗ್ಗಿದ ಮೂರು ಮಂದಿ ಮುಸುಕುಧಾರಿಗಳ ಗುಂಪು ಬ್ಯಾಂಕಿನ ಉದ್ಯೋಗಿಗಳನ್ನು ಶೌಚಗೃಹದಲ್ಲಿ ಕೂಡಿ ಹಾಕಿ  ಚಿನ್ನವನ್ನು ದರೋಡೆ ಮಾಡಿದೆ.

Robbers Lock Chennai Bank Staff In Toilet, Escape With Gold Worth Crores

ಬ್ಯಾಂಕಿನ ಸ್ಟ್ರಾಂಗ್‌ ರೂಮಿನ ಬೀಗದ ಕೀಗಳನ್ನು ಕಸಿದುಕೊಂಡ ದುಷ್ಕರ್ಮಿಗಳು, ಉದ್ಯೋಗಿಗಳನ್ನು ಕೂಡಿಹಾಕಿ, ಬ್ಯಾಗ್‌ಗಳಲ್ಲಿ ಚಿನ್ನ ತುಂಬಿಸಿ ಪರಾರಿಯಾಗಿದ್ದಾರೆ. ಸುಮಾರು 32 ಕೆ.ಜಿ. ಚಿನ್ನಾಭರಣ ದರೋಡೆಯಾಗಿದೆ ಎಂದು ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜೀವಾಲ್ ತಿಳಿಸಿದ್ದಾರೆ. ದರೋಡೆ ಕೃತ್ಯದಲ್ಲಿ ಬ್ಯಾಂಕಿನ ಒಳಗಿನವರೇ ಶಾಮೀಲಾಗಿರುವ ಸಾಧ್ಯತೆ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

ದರೋಡೆಕೋರರಲ್ಲಿ ಒಬ್ಬಾತ  ಅದೇ ಬ್ಯಾಂಕ್ ಶಾಖೆಯ  ಉದ್ಯೋಗಿಯೆಂದು ಶಂಕಿಸಲಾಗಿದೆ. ಕೃತ್ಯಕ್ಕೂ ಮುನ್ನ ದರೋಡೆಕೋರರು ತನಗೆ ಕುಡಿಯಲು ಜ್ಯೂಸ್ ನೀಡಿದ್ದರು. ಅದನ್ನು ಸೇವಿಸಿದ ಬಳಿಕ ಪ್ರಜ್ಞೆ ಕಳಕೊಂಡಿದ್ದೆ ಎಂದು ಬ್ಯಾಂಕ್‌ನ ಭದ್ರತಾ ಸಿಬಂದಿ ಹೇಳಿದ್ದಾರೆ.‌ ಮೂರು ಮಂದಿ ಆಗಂತುಕರಲ್ಲಿ ಒಬ್ಬಾತ ಬ್ಯಾಂಕ್ ನೌಕರನಾಗಿದ್ದರಿಂದ ಕಾವಲುಗಾರನಿಗೆ ಅವರ ಬಗ್ಗೆ ಸಂದೇಹ ಬಂದಿರಲಿಲ್ಲ ಎನ್ನಲಾಗಿದೆ.

Thirty-two kg Gold, reportedly value a number of crores, was looted from a financial institution in Chennai this night. Three males in masks locked the staff in a rest room earlier than they robbed the FedBank Gold Mortgage within the metropolis’s Arumbakkam space.“They took the keys of the sturdy room and locked the staff in a rest room and escaped with the gold in carry luggage. In keeping with the department, 32 kg gold was stolen,” Police Commissioner Shankar Jeewal defined the modus operandi of the robbers.The theft was suspected to be an inside job, mentioned police.