ಬ್ರೇಕಿಂಗ್ ನ್ಯೂಸ್
17-08-22 12:04 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 17 : ಬಾನಲ್ಲಿ ಮಧುಚಂದ್ರಕೆ ಎನ್ನುವ ಸಿನಿಮಾದಲ್ಲಿ ಲವರ್ ತನ್ನ ಲವ್ಲೀ ಹೆಂಡತಿ ಸರಿಯಿಲ್ಲವೆಂದು ಯಾರಿಗೂ ಅನುಮಾನ ಬಾರದಂತೆ ಕೊಲೆ ಮಾಡುವ ಕತೆ ಇದೆ. ಈಗ ಅಂತಹದ್ದೇ ಘಟನೆ ಬೆಳಕಿಗೆ ಬಂದಿದ್ದು ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡಿಯೋಕಾಗ್ದೇ ಗಂಡನೇ ಉಪಾಯದಿಂದ ಕೊಲೆಗೈದು ಬಿಸಾಕಿರುವ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಬೆಂಗಳೂರಿನ ಮಡಿವಾಳದಲ್ಲಿ ಮನೆ ಹೊಂದಿದ್ದ ಪೃಥ್ವಿರಾಜ್ ಹಾಗೂ ಜ್ಯೋತಿ ಎಂಟು ತಿಂಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮದುವೆಯಾದ ದಿನದಿಂದಲೂ ಇಬ್ಬರ ನಡುವೆ ಒಂದಿಲ್ಲೊಂದು ಗಲಾಟೆ ನಡೀತಾನೇ ಇತ್ತು. ಇದರಿಂದ ರೋಸಿ ಹೋಗಿದ್ದ ಪೃಥ್ವಿರಾಜ್ ಪತ್ನಿ ಜ್ಯೋತಿಯನ್ನ ಕೊಲೆ ಮಾಡೋಕೆ ಸ್ಕೆಚ್ ಹಾಕಿದ್ದ. ತನ್ನ ಮತ್ತು ಪತ್ನಿಯ ಮೊಬೈಲನ್ನು ಮನೇಲೇ ಬಿಟ್ಟು ಪ್ರವಾಸಕ್ಕೆಂದು ಕರೆದು ಹೋಗ್ತಾನೆ. ಆಗಸ್ಟ್ 2ರಂದು ಹೆಂಡತಿಯನ್ನು ಉಡುಪಿಯ ಮಲ್ಪೆ ಬೀಚ್ ಗೆ ಕರೆದೊಯ್ದಿದ್ದ. ಸಮುದ್ರದಲ್ಲಿ ಸ್ನಾನ ಮಾಡುವ ನೆಪದಲ್ಲಿ ಮುಳುಗಿಸಿ ಕೊಲೆ ಮಾಡಿ ನ್ಯಾಚುರಲ್ ಡೆತ್ ಅಂತ ತೋರಿಸ್ಬೇಕು ಅಂತ ಪ್ಲ್ಯಾನ್ ಮಾಡಿದ್ದ. ಆದ್ರೆ, ಮಳೆಯಿಂದಾಗಿ ಸಮದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಪ್ಲ್ಯಾನ್ ಕೈಕೊಟ್ಟಿತ್ತು. ನಂತರ ಅಲ್ಲಿಂದಲೇ ಜೂಮ್ ಕಾರು ಪಡೆದು ನೇರವಾಗಿ ಸಕಲೇಶಪುರದ ಗುಂಡ್ಯಾ ಬಳಿ ಜ್ಯೋತಿಯನ್ನ ಕರೆದುಕೊಂಡು ಬಂದಿದ್ದ. ಅಲ್ಲಿನ ಸೀನರಿ ನೋಡುವ ನೆಪದಲ್ಲಿ ಕಾಡಿನ ಮಧ್ಯೆ ಕೊಂಡೊಯ್ದು ಜ್ಯೋತಿಯನ್ನು ವೇಲ್ ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದ. ಕೊಲೆಯ ಬಳಿಕ ಶವವನ್ನ ಅಲ್ಲಿಯೇ ಪೊದೆಯಲ್ಲಿ ಎಸೆದು ಹೋಗಿದ್ದ.
ಕೊಲೆಗೈದು ಏನೂ ಆಗೇ ಇಲ್ಲವೆಂದು ಬೆಂಗಳೂರಿಗೆ ಬಂದವ್ನೇ ಮಡಿವಾಳ ಪೊಲೀಸ್ ಠಾಣೆಯಲ್ಲಿ ಹೆಂಡ್ತಿ ಮಿಸ್ಸಿಂಗ್ ಅಂತ ಕಂಪ್ಲೇಂಟ್ ಕೊಟ್ಟಿದ್ದ. ದೂರು ಪಡೆದ ಪೊಲೀಸರು ತನಿಖೆ ನಡೆಸಿದ್ದು ಬೇರೆ ಬೇರೆ ಆಯಾಮಗಳನ್ನು ಕಲೆಹಾಕುತ್ತಾರೆ. ಹೆಂಡತಿ ಹಾಗೂ ತನ್ನ ಮೊಬೈಲ್ ಮಾರುತಿ ನಗರದ ಮನೆಯಲ್ಲೇ ಇತ್ತು ಅನ್ನೋದನ್ನೂ ಬಾಯ್ಬಿಟ್ಟಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಸಿಸಿಟಿವಿ, ಸಿಡಿಆರ್ ಆಧರಿಸಿ ಪ್ರಥ್ವಿರಾಜ್ ಬಗ್ಗೆಯೇ ಅನುಮಾನ ಪಟ್ಟು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ವಿಷಯ ಬಾಯಿ ಬಿಡುತ್ತಾನೆ.
ತಾನು ಹೊಸದೊಂದು ಮೊಬೈಲ್ ಖರೀದಿಸಿ ಹೊಸ ಸಿಮ್ ಉಪಯೋಗಿಸ್ತಿದ್ದೆ. ಕೊಲೆ ನಡೆಯುವ ಸಮಯದಲ್ಲಿ ಬೇಸಿಕ್ ಮೊಬೈಲ್ ಸೆಟ್ ಪಡೆದು ಅದನ್ನೇ ಬಳಸುತ್ತಿದ್ದ. ಹಳೆಯ ಆ್ಯಂಡ್ರಾಯ್ಡ್ ಮೊಬೈಲನ್ನ ಮನೆಯಲ್ಲೇ ಬಿಟ್ಟು ಹೆಂಡತಿಯನ್ನ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದ. ಆದರೆ ಆ ಮೊಬೈಲಿನಲ್ಲಿ ಹಳೆಯ ಗಲಾಟೆಗಳೆಲ್ಲ ರೆಕಾರ್ಡ್ ಆಗಿದ್ದವು.
ತನಿಖೆಯಲ್ಲಿ ಎಲ್ಲವನ್ನೂ ಪೊಲೀಸರ ಬಳಿ ಹೇಳಿಕೊಂಡಿದ್ದು ಹೆಂಡತಿ ಜ್ಯೋತಿ ತುಂಬಾ ಕಿರಿಕ್ ಆಗಿದ್ದಳು. ಅದೇ ರೀತಿ ಬೇರೆ ಬಾಯ್ ಫ್ರೆಂಡನ್ನೂ ಹೊಂದಿದ್ದಳು. ಯುಪಿಎಸ್ಸಿ ಎಕ್ಸಾಂ ಎರಡು ಬಾರಿ ಬರೆದಿದ್ದಳು. ದೆಹಲಿಗೂ ಟ್ರೈನಿಂಗ್ ನಿಮಿತ್ತ ಹೋಗಿದ್ದಳು. ಅಲ್ಲಿದ್ದಾಗಲೂ ಯುವಕನೊಬ್ಬನ ಸಹವಾಸ ಬೆಳೆಸಿದ್ದಳು. ಆಬಳಿಕ ಜ್ಯೋತಿ ಗೈಯಾಳಿಯಂತೆ ವರ್ತಿಸುತ್ತಿದ್ದಳು. ತೀರಾ ಮಾನಗೆಟ್ಟವರ ರೀತಿ ಮಾಡುತ್ತಿದ್ದಳು. ಅದಕ್ಕಾಗಿ ಆಕೆಯನ್ನು ಉಪಾಯದಿಂದ ಕೊಲೆ ಮಾಡಿರೋದಾಗಿ ಪೃಥ್ವಿರಾಜ್ ಹೇಳಿಕೊಂಡಿದ್ದಾನೆ.
Bangalore Husband takes wife to Maple Udupi in the name of tour and murder /kills her at Mangalore Gundya in the forest by strangling her using salwar. The deceased has been identified as Jyothi. The arrested husband has been identified as Prutivraj. It is said they were married just eight months ago.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm