ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಗಳಿಂದ ಹಣ ವಸೂಲಿ ; ಸಿಕ್ಕಿಬಿದ್ದ ಇಬ್ಬರು ಪೊಲೀಸರು ಸಸ್ಪೆಂಡ್ ! 

18-08-22 12:54 pm       HK News Desk   ಕ್ರೈಂ

ರಸ್ತೆಬದಿ ನಿಂತು ಅವರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಇಬ್ಬರು ಪೊಲೀಸ್​ ಕಾನ್​ಸ್ಟೇಬಲ್​ಗಳನ್ನು ಕೆಲಸದಿಂದ ಅಮಾನತು ಮಾಡಿ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ತುಮಕೂರು, ಆಗಸ್ಟ್ 18: ಅಕ್ರಮವಾಗಿ ಟ್ರ್ಯಾಕ್ಟರ್​ನಲ್ಲಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸುವ ಬದಲು, ರಸ್ತೆಬದಿ ನಿಂತು ಅವರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಇಬ್ಬರು ಪೊಲೀಸ್​ ಕಾನ್​ಸ್ಟೇಬಲ್​ಗಳನ್ನು ಕೆಲಸದಿಂದ ಅಮಾನತು ಮಾಡಿ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕುಣಿಗಲ್ ಪೊಲೀಸ್ ಠಾಣೆಯ ಹೊಯ್ಸಳ ವಾಹನದ ಚಾಲಕ ಪರಮೇಶ್ವರ್, ಕಾನ್​ಸ್ಟೇಬಲ್​ ಅಶೋಕ್ ಎಂ. ಛಲವಾದ್ ಅಮಾನತುಗೊಂಡವರು.

Hijab, ಹಿಜಾಬ್‌-ಕೇಸರಿ ವಿವಾದಕ್ಕೆ ಪ್ರಚೋದನೆ ನೀಡಿದವರಿಗೆ ರೌಡಿಶೀಟರ್‌ ಪಟ್ಟ :  ತುಮಕೂರು ಎಸ್‌ಪಿ ರಾಹುಲ್‌ - tumakuru sp s rahul kumar talks about hijab and  saffron shawl fight - Vijaya Karnataka

ಕುಣಿಗಲ್ ತಾಲೂಕಿನ ತರೀಕೆರೆ, ಗೌಡನಪಾಳ್ಯ ಸಮೀಪ ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕರಿಂದ ರಸ್ತೆಬದಿ ನಿಂತು ಪೊಲೀಸ್​ ಕಾನ್​ಸ್ಟೇಬಲ್​ಗಳು ಹಣ ಪಡೆಯುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೀಡಾಗಿತ್ತು. ಈ ಸಂಬಂಧ ಕುಣಿಗಲ್ ಸಿಪಿಐ ಗುರುಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಆರೋಪ ಸಾಬಿತಾದ ಹಿನ್ನೆಲೆ ಇಬ್ಬರನ್ನೂ ಅಮಾನತು ಮಾಡಲಾಗಿದೆ.

Two Police Constables suspended by SP Rahul for taking bribe from tractors in Tumkur.