ನಿಧಿಯಾಸೆ ತೋರಿಸಿ ಚಿನ್ನದ ಲೇಪನದ ವಿಗ್ರಹ ತೆಗೆದುಕೊಟ್ಟು ಮೋಸ ; ಹಾಸನದಲ್ಲಿ ನಕಲಿ ಸ್ವಾಮೀಜಿಯ ಕಪಟ ನಾಟಕ ! 

18-08-22 05:11 pm       HK News Desk   ಕ್ರೈಂ

ನಿಧಿಯಾಸೆ ತೋರಿಸಿ ತಾನೇ ಹೂತಿಟ್ಟ ಚಿನ್ನದ ಲೇಪನದ ವಿಗ್ರಹವನ್ನು ತೆಗೆದು ಕೊಟ್ಟು ನಕಲಿ ಸ್ವಾಮೀಜಿಯೊಬ್ಬ ಬರೋಬ್ಬರಿ ಐದು ಲಕ್ಷ ರೂಪಾಯಿ ಪೀಕಿಸಿದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಘಟನೆ ನಡೆದಿದೆ.

ಹಾಸನ, ಆಗಸ್ಟ್ 18: ನಿಧಿಯಾಸೆ ತೋರಿಸಿ ತಾನೇ ಹೂತಿಟ್ಟ ಚಿನ್ನದ ಲೇಪನದ ವಿಗ್ರಹವನ್ನು ತೆಗೆದು ಕೊಟ್ಟು ನಕಲಿ ಸ್ವಾಮೀಜಿಯೊಬ್ಬ ಬರೋಬ್ಬರಿ ಐದು ಲಕ್ಷ ರೂಪಾಯಿ ಪೀಕಿಸಿದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಘಟನೆ ನಡೆದಿದೆ.

ಮನೆಯ ತೋಟದಲ್ಲಿ ನಿಧಿ ಇದೆ ಎಂದು ಆಸೆ ತೋರಿಸಿ ಹಣ ಪೀಕಿಸಿದ್ದಲ್ಲದೆ, ಅವರದೇ ಜಮೀನಿನಲ್ಲಿ ಚಿನ್ನದ ವಿಗ್ರಹ ಎಂದು ಹೇಳಿ ಅಗೆದು ತೆಗೆದುಕೊಟ್ಟಿದ್ದಾನೆ. ವಂಚನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. 

ವಂಚಕನನ್ನು ಮಂಜುನಾಥ್​ ಎಂದು ಗುರುತಿಸಲಾಗಿದೆ. ಮಂಜೇಗೌಡ ಹಾಗೂ ಅವರ ಪುತ್ರ ಪುನೀತ್ ಎಂಬವರು ಮೋಸ ಹೋದವರು.‌ ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ, ಅದನ್ನು ರಾತ್ರಿ ವೇಳೆ ನಿಧಿ ಹುಡುಕಿ ಕೊಡುವುದಾಗಿ ಹೇಳಿ ವಿಗ್ರಹ ತೋರಿಸಿ ನಂಬಿಸಿದ್ದಾನೆ. ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ತಾನೇ ಭೂಮಿಯೊಳಗೆ ಹೂತಿಟ್ಟು ಮತ್ತೆ ಅದನ್ನೇ ತೆಗೆದು ಕೊಡುವ ವಿಡಿಯೋ ಲಭ್ಯವಾಗಿದೆ. ವಿಗ್ರಹ ತೆಗೆಯುವ ವೇಳೆ ರಕ್ತ ಬೇಕೆಂದು ಮಹಿಳೆಯೊಬ್ಬರ ಕೈ ಕೊಯ್ದು ರಕ್ತ ಸುರಿಸಿದ್ದಾನೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳ ಸ್ವಾಮೀಜಿ ಮಂಜುನಾಥ್ ಮೂಲತಃ ದೊಡ್ಡಹಳ್ಳಿ ಗ್ರಾಮದವನಾಗಿದ್ದು, ಅಸಲಿ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ.

Hassan Fake swamiji cheats a couple of 5 lakhs in the name of searching treasure