ಬ್ರೇಕಿಂಗ್ ನ್ಯೂಸ್
18-08-22 05:35 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 18: ಕಾನೂನು ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದ ವಕೀಲ ಕೆಎಸ್ಎನ್ ರಾಜೇಶ್ ವಿರುದ್ಧ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ದಿನಕರ ಶೆಟ್ಟಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
2021ರ ಸೆಪ್ಟಂಬರ್ 25ರಂದು ಕರಂಗಲ್ಪಾಡಿಯ ಕಚೇರಿಯಲ್ಲಿದ್ದಾಗ ವಕೀಲ ಕೆಎಸ್ಎನ್ ರಾಜೇಶ್ ತನ್ನ ಮೇಲೆ ಅತ್ಯಾಚಾರ ನಡೆಸುವ ಉದ್ದೇಶದಿಂದ ಲೈಂಗಿಕ ಕಿರುಕುಳ ನೀಡಿದ್ದಾರೆಂದು ವಿದ್ಯಾರ್ಥಿನಿ ಅಕ್ಟೋಬರ್ 18ರಂದು ಉರ್ವಾ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಮಹಿಳಾ ಠಾಣೆಗೆ ವರ್ಗಾಯಿಸಿ ಐಪಿಸಿ ಸೆಕ್ಷನ್ 376, 376(2) ಎಫ್, 376(2)ಕೆ, 376(ಸಿ)ಎ, 511, 354(ಎ), 354(ಬಿ), 354(ಸಿ), 354(ಡಿ), 506, 384, 388, 389, 204, 203, 212, 120 ಬಿ, 179, 202 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರದಲ್ಲಿ ಮಂಗಳೂರಿನ ಕೆಲವು ವಕೀಲರೇ ಮುತುವರ್ಜಿ ವಹಿಸಿದ್ದರಿಂದ ಕೇಸು ಬಿಗಿಯಾಗಿತ್ತು.

ಅಲ್ಲದೆ, ಅತ್ಯಾಚಾರ ಯತ್ನ ಪ್ರಕರಣ ಮಾಧ್ಯಮದಲ್ಲಿಯೂ ಭಾರೀ ಸುದ್ದಿಯಾಗಿದ್ದರಿಂದ ಆರೋಪಿ ವಕೀಲ ತಲೆಮರೆಸಿಕೊಂಡಿದ್ದರು. ಎರಡು ತಿಂಗಳ ಬಳಿಕ ಮಂಗಳೂರಿನ 3ನೇ ಜೆಎಂಎಫ್ ಕೋರ್ಟಿಗೆ ವಕೀಲ ಶರಣಾಗತಿಯಾಗಿದ್ದು, ಆನಂತರ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ನಡೆಸಿದ್ದರು. ಆ ಸಂದರ್ಭದಲ್ಲಿ ತನಿಖೆಯ ಹೊಣೆಯನ್ನು ನಗರ ದಕ್ಷಿಣ ಉಪವಿಭಾಗದ ಎಸಿಪಿಯಾಗಿದ್ದ ರಂಜಿತ್ ಕುಮಾರ್ ಬಂಡಾರು ಅವರಿಗೆ ವಹಿಸಲಾಗಿತ್ತು.
ಪ್ರಕರಣ ಕೈಗೆತ್ತಿಕೊಂಡ ಒಂದೇ ತಿಂಗಳಲ್ಲಿ ರಂಜಿತ್ ಕುಮಾರ್ ವರ್ಗಾವಣೆಯಾಗಿದ್ದು ತೆರವಾದ ಜಾಗಕ್ಕೆ ದಿನಕರ ಶೆಟ್ಟಿ ಬಂದಿದ್ದರು. ದಿನಕರ ಶೆಟ್ಟಿ ತನಿಖೆಯನ್ನು ಪೂರ್ತಿಗೊಳಿಸಿ ಇದೀಗ 3ನೇ ಜೆಎಂಎಫ್ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 1ನೇ ಆರೋಪಿ ಕೆಎಸ್ಎನ್ ರಾಜೇಶ್ ಮತ್ತು ಆರೋಪಿ ಪರಾರಿಯಾಗಲು ಸಹಕರಿಸಿ 2ನೇ ಆರೋಪಿ ಅನಂತ ಭಟ್ ಮತ್ತು 3ನೇ ಆರೋಪಿ ಅಚ್ಚುತ್ತ ಭಟ್ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
Mangalore Charge sheet filed against Lawyer KSN Rajesh over sexual harassment case. Two law student interns have filed complaints in the women's police station here, against special public prosecutor, K S N Rajesh of the Lokayukta division here, accusing him of sexual harassment and threat. A case has been registered against the advocate concerned.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm