ಬ್ರೇಕಿಂಗ್ ನ್ಯೂಸ್
19-08-22 11:40 am Mangalore Correspondent ಕ್ರೈಂ
ಸುಳ್ಯ , ಆಗಸ್ಟ್ 19 : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪ್ರಕರಣದ ಆರೋಪಿಗಳಾದ ನೌಫಾಲ್, ಝೈನುಲ್ ಅಬಿದ್, ಮೊಹಮ್ಮದ್ ಸೈಯದ್, ಅಬ್ದುಲ್ ಬಶೀರ್ ಮತ್ತು ರಿಯಾಜ್ ಅವರನ್ನು ಆಗಸ್ಟ್ 23 ರ ವರೆಗೆ ಸುಳ್ಯದ ನ್ಯಾಯಾಲಯ ಎನ್‌ಐಎ ವಶಕ್ಕೆ ಒಪ್ಪಿಸಿದೆ. ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಪ್ರಕರಣದಲ್ಲಿ ಬಿಜೆಪಿ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದರಿಂದ ಸ್ಥಳೀಯ ಪೊಲೀಸರು ತೀವ್ರ ಒತ್ತಡಕ್ಕೊಳಗಾಗಿದ್ದರು. ಪ್ರಮುಖ ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದರಿಂದ ಪ್ರಕರಣ ಕಗ್ಗಂಟಾಗಿತ್ತು. ಮೊದಲು ಸಂಚು ನಡೆಸಿದ್ದ ಆರು ಮಂದಿಯನ್ನು ಬಂಧಿಸಿದ್ದರೂ, ನೇರ ಶಾಮೀಲಾದವರು ಸಿಕ್ಕಿರಲಿಲ್ಲ. 15 ದಿನಗಳ ನಿರಂತರ ತನಿಖೆಯ ಬಳಿಕ ಕೇರಳದಲ್ಲಿ ಅವಿತುಕೊಂಡಿದ್ದವರು ಸಿಕ್ಕಿಬಿದ್ದಿದ್ದರು. ಕೊನೆಗೆ ಬಂಧಿತರಾಗಿದ್ದ ಶಿಹಾಬುದ್ದೀನ್, ರಿಯಾಜ್ ಮತ್ತು ಬಶೀರ್ ಕೃತ್ಯದಲ್ಲಿ ನೇರ ಭಾಗಿಯಾಗಿದ್ದಲ್ಲದೆ, ಕೊಲೆಗೆ ಪೂರ್ತಿ ಸಂಚನ್ನು ಇವರೇ ಹೆಣೆದಿದ್ದರು ಎನ್ನುವುದು ತನಿಖೆಯಲ್ಲಿ ಕಂಡುಬಂದಿತ್ತು.
ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದರಿಂದ ತನಿಖೆಯ ಹೊಣೆಯನ್ನು ರಾಜ್ಯ ಸರಕಾರ ಎನ್‌ಐಎಗೆ ವಹಿಸಿತ್ತು. ಪ್ರಕರಣದ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಎನ್ಐಎ ತನಿಖೆಗೆ ಒತ್ತಾಯ ಮಾಡಿದ್ದರಿಂದ ಪ್ರಕರಣಕ್ಕೆ ಚುರುಕು ಸಿಕ್ಕಿತ್ತು. ಎನ್ಐಎ ಅಧಿಕಾರಿಗಳು ಆರಂಭದಲ್ಲೇ ಪುತ್ತೂರು, ಸುಳ್ಯಕ್ಕೆ ಆಗಮಿಸಿ ತನಿಖೆಗೆ ಕೈಜೋಡಿಸಿದ್ದರು. ಇದೀಗ ಪ್ರಕರಣದ ಒಟ್ಟು ಫೈಲನ್ನು ಸ್ಥಳೀಯ ಪೊಲೀಸರಿಂದ ಪಡೆದುಕೊಂಡಿರುವ ಎನ್‌ಐಎ ಅಧಿಕಾರಿಗಳು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಮತ್ತೆ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.
ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಬೇರೆ ಪ್ರಮುಖರ ಕೈವಾಡ ಕಂಡುಬಂದಲ್ಲಿ ಇನ್ನಷ್ಟು ಮಂದಿಯ ಬಂಧನ ಆಗುವ ಸಾಧ್ಯತೆಯಿದೆ.
Praveen Bellare Murder case, Five persons have been taken to custody by NIA team in Sullia. On July 26, bike-borne miscreants attacked Praveen in the Bellare town of Dakshina Kannada district in front of his chicken shop and hacked him to death.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm