ಬ್ರೇಕಿಂಗ್ ನ್ಯೂಸ್
19-08-22 05:51 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 19: ಕೆಎಂಎಫ್ ಸಹಕಾರ ಸಂಸ್ಥೆಯಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ ನೂರಕ್ಕೂ ಹೆಚ್ಚು ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಒಬ್ಬ ಆರೋಪಿಯನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತನನ್ನು ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ಹರೀಶ್ ಅಲಿಯಾಸ್ ರಾಮಪ್ರಸಾದ್ ಎಂದು ಗುರುತಿಸಲಾಗಿದೆ. 138ಕ್ಕೂ ಹೆಚ್ಚು ಮಂದಿಗೆ ಉದ್ಯೋಗದ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ನೀಡಿರುವ ಸಾರಾಂಶದ ಪ್ರಕಾರ, ಪ್ರಕರಣದಲ್ಲಿ ಕೆಎಂಎಫ್ ಸಂಸ್ಥೆಯಲ್ಲಿ ಉದ್ಯೋಗಿಯೆಂದು ಹೇಳಿಕೊಂಡಿರುವ ಚಂದ್ರಾವತಿ ಎಂಬ ಮಹಿಳೆ, ಹರೀಶ್ ಅಲಿಯಾಸ್ ರಾಮಪ್ರಸಾದ್, ಚಿಕ್ಕಮಗಳೂರಿನ ಮೂಡಿಗೆರೆಯ ಹೇಮಂತ್ ಅಲಿಯಾಸ್ ಮಲ್ಲೇಶ್ ಜೈನ್, ಬೆಂಗಳೂರಿನ ಸುರೇಂದ್ರ ರೆಡ್ಡಿ ಎಂಬವರು ಶಾಮೀಲಾಗಿದ್ದಾರೆ. ಒಟ್ಟು 138ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಂದ 1.84 ಕೋಟಿ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೆಎಂಎಫ್ ಉದ್ಯೋಗಿ ಎಂದು ಹೇಳಿಕೊಂಡಿರುವ ಪಡೀಲ್ ನಿವಾಸಿ ಚಂದ್ರಾವತಿ ಎಂಬ ಮಹಿಳೆ, ಗುಟ್ಟಾಗಿ ಹಣ ಕೊಟ್ಟಲ್ಲಿ ಕೆಎಂಎಫ್ ನಲ್ಲಿ ನೇರ ನೇಮಕಾತಿಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಹೇಳಿ ಹಲವರಿಗೆ ವಂಚಿಸಿದ್ದಾರೆ. ಈಕೆಯ ಮಾತು ಕೇಳಿದ ವಳಚ್ಚಿಲ್ ಪದವು ನಿವಾಸಿ ದೇವಿಪ್ರಸಾದ್ ಎಂಬವರು ಉದ್ಯೋಗ ಇಲ್ಲದೇ ಇದ್ದುದರಿಂದ ಹಣ ನೀಡಲು ಒಪ್ಪಿದ್ದಾರೆ. ಆಕೆ ಮೊದಲಿಗೆ 1.80 ಲಕ್ಷ ಆಗುತ್ತದೆ ಎಂದು ಹೇಳಿದ್ದು, ಮುಂಗಡವಾಗಿ 80 ಸಾವಿರ ರೂಪಾಯಿ ಹಣವನ್ನು ಫೋನ್ ಪೇ ಮೂಲಕ ದೇವಿಪ್ರಸಾದ್ ನೀಡಿದ್ದರು. 15 ದಿನಗಳ ಬಳಿಕ ಮಂಗಳೂರಿನ ಕಪಿತಾನಿಯೋ ಸ್ಕೂಲ್ ಬಳಿ ಚಂದ್ರಾವತಿಗೆ ಒಂದು ಲಕ್ಷ ರೂ. ನಗದು ನೀಡಿದ್ದರು. ಈ ಹಣವನ್ನು ರಾಮಪ್ರಸಾದ್ ಗೆ ನೀಡಿದ್ದಾಗಿ ಮಹಿಳೆ ತಿಳಿಸಿದ್ದು, ಕೆಲವು ದಿನಗಳ ನಂತರ ದೇವಿಪ್ರಸಾದ್ ಗೆ ಉದ್ಯೋಗ ಖಾತರಿ ಆಗಿರುವ ಬಗ್ಗೆ ನೇಮಕಾತಿ ಆದೇಶವೆಂದು ನಕಲಿ ಪ್ರತಿಯನ್ನು ನೀಡಿದ್ದರು.
ಈ ನಡುವೆ, 2021ರ ಡಿಸೆಂಬರ್ 15ರಂದು ರಾಮಪ್ರಸಾದ್ ಕೆಎಂಎಫ್ ಉದ್ಯೋಗದ ತರಬೇತಿ ಎಂದು ಹೇಳಿ ಮಂಗಳೂರಿನ ಚಿಲಿಂಬಿಯ ಮಲರಾಯ ದೈವಸ್ಥಾನದ ಹಾಲ್ ನಲ್ಲಿ 38 ಮಂದಿಗೆ ತರಬೇತಿ ಕಾರ್ಯಕ್ರಮ ನಡೆಸಿದ್ದಾನೆ. ರಾಮಪ್ರಸಾದ್, ಡಾ.ಹೇಮಂತ್, ಬೆಂಗಳೂರಿನ ಸುರೇಂದ್ರ ರೆಡ್ಡಿ ತರಬೇತಿ ನೀಡಿದ್ದು, ರಾಮಪ್ರಸಾದ್ ತನ್ನನ್ನು ಹರೀಶ್ ಕೆ. ಎಂದು ಹೇಳಿ ಕೆಎಂಎಫ್ ಡೈರೆಕ್ಟರ್ ಆಗಿರುವುದಾಗಿ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದ. ಇದರಿಂದ ಹಣ ಕೊಟ್ಟವರಿಗೆ ಒಂದು ಹಂತಕ್ಕೆ ಉದ್ಯೋಗದ ಬಗ್ಗೆ ಭರವಸೆ ಮೂಡಿಸಿದ್ದರು. ಆನಂತರ 2022ರ ಜನವರಿ ತಿಂಗಳಲ್ಲಿ ದೇವಿಪ್ರಸಾದ್ ತನಗೆ ಕೆಎಂಎಫ್ ಉದ್ಯೋಗ ಆಗಿರುವುದಾಗಿ ಸ್ನೇಹಿತರಲ್ಲಿ ತಿಳಿಸಿದ್ದು, ಅಶ್ವಿನಿ ಮತ್ತು ದೀಕ್ಷಿತ್ ಎಂಬವರು ತಮಗೂ ಉದ್ಯೋಗ ಮಾಡಿಕೊಡುವಂತೆ ಮುಂದೆ ಬಂದಿದ್ದಾರೆ. ಈ ಬಗ್ಗೆ ಚಂದ್ರಾವತಿ, ಎಚ್.ಆರ್ ಉದ್ಯೋಗಕ್ಕೆಂದು ಅಶ್ವಿನಿ ಬಳಿ 2.60 ಲಕ್ಷ ರೂ., ದೀಕ್ಷಿತ್ ಗೆ ಕ್ಲರ್ಕ್ ಹುದ್ದೆಯೆಂದು ಹೇಳಿ 90 ಸಾವಿರ ಹಣ ಪಡೆದಿದ್ದರು.
ಆನಂತರ, ಚಂದ್ರಾವತಿ ಅವರೇ ಕೆಎಂಎಫ್ ನಲ್ಲಿ ಮೂರು ಆಫೀಸರ್ ಹುದ್ದೆ ಖಾಲಿಯಿದೆ, ಭರ್ತಿ ಮಾಡಲು ತಲಾ 3.50 ಲಕ್ಷ ರೂ, ಆಗುತ್ತದೆ ಎಂದು ದೇವಿಪ್ರಸಾದ್ ಗೆ ತಿಳಿಸಿದ್ದರು. ಅದರಂತೆ, ದೇವಿಪ್ರಸಾದ್ ಸ್ನೇಹಿತರಾಗಿರುವ ಮಂಗಳೂರು ಆಸುಪಾಸಿನ ಭವ್ಯ ಕೆ., ಧನ್ಯಶ್ರೀ ಮತ್ತು ಯಕ್ಷಿತ್ ಎಂಬ ಮೂವರು ತಲಾ ಮೂರೂವರೆ ಲಕ್ಷ ರೂ. ಹಣವನ್ನು ಚಂದ್ರಾವತಿಗೆ ನೀಡಿದ್ದರು. ಮೇ ತಿಂಗಳ ವರೆಗೂ ಕೆಎಂಎಫ್ ಉದ್ಯೋಗ ಆಗದೇ ಇದ್ದುದರಿಂದ ಹಣ ಕಳಕೊಂಡವರು ತಾವು ಕೊಟ್ಟ ಹಣವನ್ನು ಮರಳಿಸುವಂತೆ ಚಂದ್ರಾವತಿ ಬಳಿ ಕೇಳಿದ್ದಾರೆ. ಬಳಿಕ 2022ರ ಮೇ 5ರಂದು 10.70 ಲಕ್ಷ ರೂಪಾಯಿ ಮೊತ್ತದ ಚೆಕ್ಕನ್ನು ಚಂದ್ರಾವತಿ, ದೇವಿಪ್ರಸಾದ್ ಅವರ ಖಾತೆಗೆ ಹಾಕಿದ್ದು, ಆ ಹಣವನ್ನು ಐವರು ಸೇರಿಕೊಂಡು ಹಂಚಿಕೊಂಡಿದ್ದಾರೆ ಎಂದು ದೇವಿಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಚಂದ್ರಾವತಿಯವರು ಹಣ ನೀಡಿರುವುದನ್ನು ತಿಳಿದ ರಾಮಪ್ರಸಾದ್, ದೇವಿಪ್ರಸಾದ್ ಗೆ ಕರೆ ಮಾಡಿ ನೀವು ಕೂಡಲೇ ಒಂದು ಲಕ್ಷ ರೂ. ತನಗೆ ಹಾಕಿ, ತಕ್ಷಣದಿಂದಲೇ ಕೆಲಸ ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ. ದೇವಿಪ್ರಸಾದ್ ಇದರಿಂದ ಮತ್ತೊಮ್ಮೆ ಮೋಸ ಹೋಗಿದ್ದು, ಒಂದೂವರೆ ಲಕ್ಷ ರೂ. ಹಣವನ್ನು ರಾಮಪ್ರಸಾದ್ ಅವರ ಫೋನ್ ಪೇಗೆ ಹಾಕಿದ್ದಾರೆ. ಕೂಡಲೇ ಉದ್ಯೋಗ ದೊರಕಿಸುವಂತೆ ಹೇಳಿದ್ದಕ್ಕೆ, ಆರು ಮಂದಿಯ ಫೋಟೋ ಪಡೆದು ನಕಲಿ ಐಡಿ ಕಾರ್ಡನ್ನು ಕೆಎಂಎಫ್ ಹೆಸರಲ್ಲಿ ಮಾಡಿಕೊಟ್ಟಿದ್ದಾನೆ. ಆಬಳಿಕ ಉದ್ಯೋಗದ ಬಗ್ಗೆ ಕೇಳಿದ್ದಕ್ಕೆ ಸಮಜಾಯಿಷಿ ನೀಡಿ ಸಾಗಹಾಕುತ್ತಿದ್ದರು. ದೇವಿಪ್ರಸಾದ್ ಮತ್ತು ಆತನ ಆರು ಮಂದಿ ಸ್ನೇಹಿತರಿಂದ ಒಟ್ಟು 14 ಲಕ್ಷ ರೂ. ಹಣವನ್ನು ರಾಮಪ್ರಸಾದ್ ಪಡೆದಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ.
ದೇವಿಪ್ರಸಾದ್ ಸೇರಿದಂತೆ 138ಕ್ಕೂ ಹೆಚ್ಚು ಮಂದಿಗೆ 70 ಸಾವಿರದಿಂದ 3.50 ಲಕ್ಷ ರೂಪಾಯಿನಂತೆ ರಾಮಪ್ರಸಾದ್, ಚಂದ್ರಾವತಿ ಮತ್ತು ಪುತ್ತೂರಿನ ರಮೇಶ್ ಹಣ ಪಡೆದಿದ್ದಾರೆ. ಒಟ್ಟು 1.84 ಕೋಟಿ ರೂಪಾಯಿ ಹಣವನ್ನು ಪಡೆದು, ಸರಕಾರಿ ಉದ್ಯೋಗದ ಹೆಸರಲ್ಲಿ ಕೆಎಂಎಫ್ ಸಂಸ್ಥೆಯ ನಕಲಿ ಐಡಿ ತೋರಿಸಿ ವಂಚಿಸಿದ್ದಾರೆ. ಸೈಬರ್ ಪೊಲೀಸರು ಐಪಿಸಿ ಸೆಕ್ಷನ್ 406, 409, 465, 468, 471, 472, 420 ಅಡಿ ಕೇಸು ದಾಖಲಿಸಿದ್ದಾರೆ. ಎರಡು ದಿನಗಳಿಂದ ಹಣ ಕಳಕೊಂಡು ಸಂತ್ರಸ್ತರಾದವವರು ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆಯೊಬ್ಬ…
Mangalore Man swindles 120 people of over Rs 2.5 crores on the pretext of getting jobs in KMF and MRPL. A conman named Ram Prasad was posing as Harish to the victims hailing from Malar and his partner Mallesh pretended as Dr Hemanth conning several people by assuring them jobs at MRPL. Mallesh allegedly duped the victims of Rs 30 lacs. In this regard, a complaint has been filed at the Bajpe police station. The cyber crime police have taken Ram prasad into custody.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm