ಚಿನ್ನ ಕಳ್ಳಸಾಗಣೆ ; ಮತ್ತಿಬ್ಬರು ಆರೋಪಿಗಳು ದುಬೈನಲ್ಲಿ ಅರೆಸ್ಟ್

06-10-20 06:18 pm       Headline Karnataka News Network   ಕ್ರೈಂ

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಮುಖ ಇಬ್ಬರು ಆರೋಪಿಗಳಾದ ಫೈಸಲ್ ಫರೀದ್ ಮತ್ತು ರಾಬಿನ್ಸ್ ಹಮೀದ್ ಎಂಬಿಬ್ಬರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.

ಕೊಚ್ಚಿ, ಅಕ್ಟೋಬರ್ 6: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಮುಖ ಇಬ್ಬರು ಆರೋಪಿಗಳಾದ ಫೈಸಲ್ ಫರೀದ್ ಮತ್ತು ರಾಬಿನ್ಸ್ ಹಮೀದ್ ಎಂಬಿಬ್ಬರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚಿ ಕೋರ್ಟ್ ನಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಎನ್ಐಎ ತಂಡ ಈ ಮಾಹಿತಿ ನೀಡಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಸಂಚುಕೋರರು ಫರೀದ್ ಮತ್ತು ರಾಬಿನ್ಸ್ ಎಂದು ಎನ್ಐಎ ಹೇಳಿದೆ. ಫೈಸಲ್ ಫರೀದ್, ರಾಬಿನ್ಸ್ ಹಮೀದ್, ಸಿದ್ದಿಕ್ ಅಕ್ಬರ್, ಅಹ್ಮದ್ ಕುಟ್ಟಿ, ರತೀಶ್, ಮೊಹಮ್ಮದ್ ಶಮೀರ್ ಎಂಬ ಆರು ಮಂದಿಯ ವಿರುದ್ಧ ಇಂಟರ್ ಪೋಲ್ ಮೂಲಕ ಬ್ಲು ಕಾರ್ನರ್ ನೋಟೀಸ್ ಜಾರಿ ಮಾಡಲಾಗಿತ್ತು. ಮೊಹಮ್ಮದ್ ಶಮೀರ್ ಮತ್ತು ಕೆ.ಟಿ.ರಮೀಸ್ ಎಂಬಿಬ್ಬರು ಚಿನ ಕಳ್ಳಸಾಗಣೆ ಪ್ರಕರಣದ ಮಾಸ್ಟರ್ ಮೈಂಡ್ ಗಳು ಎಂದು ಎನ್ಐಎ ಹೇಳಿದೆ.

ಈ ಮಧ್ಯೆ, ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮೊದಲಿಗೆ ಬಂಧಿತಳಾಗಿದ್ದ ಸ್ವಪ್ನಾ ಸುರೇಶ್ ಗೆ ಜಾಮೀನು ಲಭಿಸಿದೆ. ಕೊಚ್ಚಿಯಲ್ಲಿರುವ ಆರ್ಥಿಕ ಅಪರಾಧ ನ್ಯಾಯಾಲಯ ಈ ಜಾಮೀನು ಮಂಜೂರು ಮಾಡಿದೆ. ಕಸ್ಟಮ್ಸ್ ಅಧಿಕಾರಿಗಳು 60 ದಿನಗಳ ಒಳಗೆ ಆರೋಪ ಪಟ್ಟಿ ದಾಖಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ನೀಡಿತ್ತು.