ಬ್ರೇಕಿಂಗ್ ನ್ಯೂಸ್
07-09-22 10:45 pm Mangalore Correspondent ಕ್ರೈಂ
ಮಂಗಳೂರು, ಸೆ.7 : ಬೋಳಾರದ ಮಣಪ್ಪುರಂ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನ ಇಟ್ಟು 13 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಬಗ್ಗೆ ಮೂವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2020ರ ಸೆ.12ರಿಂದ 2021ರ ಫೆ.18ರ ನಡುವೆ ರಮ್ ಸೀನಾ, ಅಕ್ತರೀ ಖಾನ್ ಮತ್ತು ಫಿರೋಜ್ ಖಾನ್ ಎಂಬ ಮೂವರು ಸೇರಿ ವಿವಿಧ ಸಂದರ್ಭಗಳಲ್ಲಿ ಒಟ್ಟು 401 ಗ್ರಾಮ್ ಚಿನ್ನಾಭರಣವನ್ನು ಇಟ್ಟು ಹಣ ಸಾಲ ಪಡೆದಿದ್ದಾರೆ. ಅಡಮಾನ ಇಡುವ ಸಂದರ್ಭದಲ್ಲಿ ಚಿನ್ನ 22 ಕ್ಯಾರೆಟ್ ಮೌಲ್ಯದ್ದು ಎಂದು ಹೇಳಿದ್ದರು. ಆನಂತರ 2021ರ ಮಾರ್ಚ್ 4ರಂದು ಮಣಪ್ಪುರಂ ಫೈನಾನ್ಸ್ ಕಂಪನಿಯ ವಿಜಿಲೆನ್ಸ್ ವಿಭಾಗವು ಪರಿಶೀಲನೆ ನಡೆಸಿದಾಗ, ಚಿನ್ನ 22 ಕ್ಯಾರೆಟ್ ಮೌಲ್ಯದ್ದು ಅಲ್ಲ. ನಕಲಿ ಚಿನ್ನ ಎನ್ನುವುದು ಕಂಡುಬಂದಿದೆ.
ಆಬಳಿಕ ಸಾಲ ತೆಗೆದುಕೊಂಡಿದ್ದ ಮೂವರಿಗೆ ನೋಟೀಸ್ ಮಾಡಿದರೂ, ಸಾಲ ಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ನಕಲಿ ಚಿನ್ನ ಇಟ್ಟು ಮೋಸ ಮಾಡಿದ್ದಾಗಿ ಮಣಪ್ಪುರಂ ಸಂಸ್ಥೆಯ ಏರಿಯಾ ಹೆಡ್ ಬಂಡಿ ಜನಾರ್ದನ ರೆಡ್ಡಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಕೇಳಿದರೆ, ಎರಡೂ ಕಡೆಯಿಂದ ದೂರು ಬಂದಿದೆ ಎಂದಿದ್ದಾರೆ. ಇದಕ್ಕೂ ಮೊದಲೇ ಫಿರೋಜ್ ಖಾನ್ ಕಡೆಯವರು ದೂರು ನೀಡಿದ್ದು, ತಮ್ಮ ಚಿನ್ನವನ್ನು ಸಂಸ್ಥೆಯವರೇ ನಕಲಿ ಮಾಡಿದ್ದಾರೆಂದು ದೂರಿದ್ದಾರೆ. ಈ ಬಗ್ಗೆ ಕೋರ್ಟಿನಲ್ಲಿ ದಾವೆ ಹೂಡಿದ್ದು ಈಗ ಸಂಸ್ಥೆಯವರು ಕೂಡ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Mangalore Fraud by pledging fake gold in Manappuram, case filed.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm